SHIVAMOGGA | Jan 3, 2024 | covid cases in shivamogga ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ 19 ಪಾಸಿಟಿವ್ ಪ್ರಕರಣಗಳ Jan 2, 2024 ದಿನಾಂಕದ ವರದಿ ಪ್ರಕಟವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಪಿಡಿಎಫ್ನ ವರದಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇದುವೆರೆಗೂ 31 ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದು ದಿನದಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ.
covid cases in shivamogga
ಒಟ್ಟಾರೆ 243 ಸ್ಯಾಂಪಲ್ಗಳನ್ನ ಸಂಗ್ರಹಿಸಲಾಗಿದ್ದು, ಈ ಪೈಕಿ ಆರು ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಇನ್ನೂ ಶಿವಮೊಗ್ಗದ ಮೂವರು ಹಾಗೂ ಭದ್ರಾವತಿಯ ಒಬ್ಬರು ಮತ್ತು ತೀರ್ಥಹಳ್ಳಿ & ಶಿಕಾರಿಪುರದ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿದೆ.
READ : Arecanut Rate? ಯಾವ್ಯಾವ ಊರಿನ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟು ! ವಿವರ ಇಲ್ಲಿದೆ
ಇದುವರೆಗೂ 31 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಈ ಪೈಕಿ 27 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದಾರೆ. ನಾಲ್ಕು ಮಂದಿಯನ್ನು ಕೋವಿಡ್ 19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.