ಬೈಕ್​ನಲ್ಲಿ ಬರ್ತಿದ್ದವರಿಗೆ ಕೋವಿ ಗುಂಡು! ಇಬ್ಬರ ಸಾವಿಗೆ ಕಾರಣವಾಗಿದ್ದು ಏನು!? ಮಹಿಳೆಗೆ ಹೆದರಿಸಲು ಹೋಗಿದ್ದೆ ದುರಂತಕ್ಕೆ ಕಾರಣವಾಯ್ತಾ?

This Article Written by / Malenadu Today / ಫೆಬ್ರವರಿ 20, 2023

ಚಿಕ್ಕಮಗಳೂರು ತಾಲ್ಲೂಕಿನ ಬಿದಿರೆ ಸಮೀಪ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣದಲ್ಲಿ ಇನ್ನೊಂದು ವಿಚಾರ ಬೆಳಕಿಗೆ ಬಂದಿದೆ. ಇನ್ನೊಬ್ಬರಿಗೆ ಹೆದರಿಸಲು ಕೋವಿ ತೋರಿಸಿದ್ದ ವ್ಯಕ್ತಿ ಹಾರಿಸಿದ ಗುಂಡಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಸಂಬಂಧ ಪೊಲೀಸರು ಆರೋಪಿ  ರಮೇಶ್‌ ಎಂಬಾತನನ್ನು ವಶಕ್ಕೆ ಪಡಿದಿದ್ದಾರೆ. 

ಫಸ್ಟ್ ರಿಪೋರ್ಟ್​ ಓದಿ  BREAKING : ಚಿಕ್ಕಮಗಳೂರಿನ ಬಾಳೆಹೊನ್ನೂರಿನ ಸಮೀಪ ಫೈರಿಂಗ್! ಇಬ್ಬರು ಸಾವು! ಘಟನೆ ವಿವರ ಇಲ್ಲಿದೆ

ಬಿದಿರೆಯ ಪ್ರವೀಣ್‌ (24) ಹಾಗೂ ಪ್ರಕಾಶ್‌ (25) ಮೃತಪಟ್ಟಿದ್ದು, ಇವರಿಬ್ಬರು ಸಂಬಂಧಿಕರು. ಇವತ್ತು ಬೆಳಗ್ಗೆ 10 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಸಂಬಂಧ ಚಿಕ್ಕಮಗಳೂರು ಎಸ್​ಪಿ ಉಮಾ ಪ್ರಶಾಂತ್​ ಘಟನಾ ಸ್ಥಳಕ್ಕೆ ಭೇಟಿಕೊಟ್ಟಿದ್ದಾರೆ. 

ಸ್ಥಳೀಯ ಮಹಿಯೊಬ್ಬರನ್ನ ಅಡ್ಡಗಟ್ಟಿದ್ದ ರಮೇಶ್​ ಎಂಬಾತ, ಆಕೆಗೆ ಬಂದೂಕು ತೋರಿಸಿದ್ದ ಎನ್ನಲಾಗಿದೆ. ಕೊಲ್ಲುತ್ತೇನೆ ಎಂದು ಹೆದರಿಸಿ ಗುಂಡು ಹಾರಿಸಿದ್ದಾನೆ. ಈ ಗುಂಡು ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ತಗುಲಿದೆ. ಒಬ್ಬರಿಗೆ ಎದೆಗೆ ತಗುಲಿದರೆ, ಮತ್ತೊಬ್ಬರಿಗೆ ಭುಜಕ್ಕೆ ತಗುಲಿದೆ. ತಕ್ಷಣವೇ ಅವರನ್ನ ಆಸ್ಪತ್ರೆಗೆ ಸಾಗಿಸಿದರು ಸಹ ಪ್ರಯೋಜನವಾಗಿರಲಿಲ್ಲ. ಅಷ್ಟರಲ್ಲಿ ಇಬ್ಬರು ಸಾವನ್ನಪ್ಪಿದ್ದರು. 

 ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಬಳಿ ಭೀಕರ ಅಪಘಾತ! ಭದ್ರಾವತಿಯ ಯುವತಿ ಸಾವು

ಜಿಲ್ಲಾ ಜಂಕ್ಷನ್ ನಡೆದಿದ್ದು ಆಕ್ಸಿಡೆಂಟ್! ಬಯಲಾಗಿದ್ದು ಕೊಲೆ ಹಾಗೂ ದರೋಡೆ ಕೇಸ್!? ದ್ವೇಷ ಹೀಗೂ ತೀರಿಸಿಕೊಳ್ಳುತ್ತಾರಾ? ವಿಚಿತ್ರ ಕ್ರೈಂ ಕಥೆ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

chikkamagaluru,two dead

ಮುಂದಿನ ಸುದ್ದಿ ಒದಿ

Leave a Comment