BHADRAVATI

bhadravati news today ಮಚ್ಚಿಗೆ ಪೂಜೆ | ಮಹೂರ್ತ ಯಾರಿಗೆ..? ಭದ್ರಾವತಿಯಲ್ಲಿ ವೈರಲ್ ವಿಡಿಯೋ ಹೇಳ್ತಿರೋ ಸತ್ಯವೇನು?

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

bhadravati news today : ಅತ್ತ ರಾಷ್ಟ್ರಮಟ್ಟದಲ್ಲಿ ಪಾಕಿಸ್ತಾನದ ಜೊತೆಗೆ ಯುದ್ದ ನಡೆಯುವ ಸಂಭವನೀಯತೆ ಮತ್ತು ಅದರ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದರೇ ಶಿವಮೊಗ್ಗ ಜಿಲ್ಲೆಯಲ್ಲಿ ರೌಡಿಗಳು ವಿರೋಧಿ ಗ್ಯಾಂಗ್​ಗಳ ವಿರುದ್ಧ ಯುದ್ದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ! ಇದಕ್ಕೆ ಸಾಕ್ಷಿ ಎಂಬಂತೆ ಬೀಸುವ ಮಚ್ಚಿಗೆ ಪೂಜೆ ಮಾಡಿಸಿ ಅದರ ವಿಡಿಯೋ ಮಾಡಿಕೊಂಡ ಘಟನೆಯೊಂದು ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ದ್ವೇಷ ಪ್ರತಿಕಾರಕ್ಕಾಗಿ ಹೊಂಚು ಹಾಕುವ ರೌಡಿಗಳು ಎದುರಾಳಿಯ ವಿರುದ್ಧದ ಸ್ಕೆಚ್​ ಪಕ್ಕಾ ಆದರೆ, ತಾನು ಬೀಸುವ ಏಟು ಹಾಗೂ ತನ್ನ ಕ್ರೌರ್ಯದ ಪ್ರಾಜೆಕ್ಟ್ ವರ್ಕೌಟ್ ಆಗಲಿ ಎಂದು ಮಚ್ಚಿಗೆ ಪೂಜೆ ಮಾಡಿಸುವ ಪರಿಪಾಠ ಅಂಡರ್​ ವರ್ಲ್ಡ್​​ನಲ್ಲಿದೆ. ತಮ್ಮಿಷ್ಟದ ಕುಲದೇವರಿಗೆ ಮಚ್ಚನ್ನು ತೋರಿಸಿ ಪೂಜೆ ಮಾಡಿಸಿಕೊಂಡು ಬಂದು, ಪೋಸ್​ ಕೊಡುವ ಗಿರಾಕಿಗಳು ಇದ್ದಾರೆ. ಇದೀಗ ಅಂತಹುದ್ದೆ ಒಂದು ಘಟನೆ ಭದ್ರಾವತಿಯಲ್ಲಿ ನಡೆದಿದೆ ಎನ್ನಲಾಗುತ್ತಿದೆ.

bhadravati news today

ಇದಕ್ಕೆ ಪೂರಕವಾಗಿ ವಿಡಿಯೋವೊಂದು ವೈರಲ್​ ಆಗಿದ್ದು, ತಮ್ಮ ಎದುರಾಳಿಯನ್ನು ಎತ್ತಲು ವ್ಯಕ್ತಿಯೊಬ್ಬ ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡಿಸಿದ್ದಾನೆ.  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ವಿಡಿಯೋದಲ್ಲಿರುವ ದೃಶ್ಯದಲ್ಲಿ ಭದ್ರಾವತಿಯಲ್ಲಿ ಸಧ್ಯದಲ್ಲಿಯೇ ಒಂದು ಹೆಣ ಉರುಳಲಿದೆ ಎಂಬ ಸಂದೇಶ ಸಾರುತ್ತ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ಘಟನೆ ಹಾಗೂ ವಿಡಿಯೋದ ಮೂಲ ಮತ್ತು ಹಿನ್ನೆಲೆಯಲ್ಲಿ ಹುಡುಕಿಕೊಂಡು ಹೋದ ಮಲೆನಾಡುಟುಡೆಗೆ ಕುತೂಹಲದ ವಿಚಾರಗಳು ತಿಳಿದುಬಂದವು. ಇತ್ತಿಚೆಗೆ ಭದ್ರಾವತಿಯ ಬಾರಂದೂರು ಬಳಿ ಒಂದು ಗುಂಪು ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿತ್ತು. ದೇಶ ಕಂಡ ಅಪರೂಪದ ವ್ಯಕ್ತಿಯೊಬ್ಬರ ಹೆಸರು ಇಟ್ಟುಕೊಂಡ ಆಸಾಮಿಯು ಇದರಲ್ಲಿದ್ದ ಎನ್ನಲಾಗಿದೆ.  ಅಂದಹಾಗೆ ಅಂದಿನ ಘಟನೆಯ ಮುಂದುವರೆದ ಭಾಗವಾಗಿ ಮಚ್ಚು ಪೂಜೆ ನಡೆದಿದೆ.

ಅಂದು ಅಟ್ಯಾಕ್​ಗೆ ಒಳಗಾದ ವ್ಯಕ್ತಿಯು ಇದೀಗ ಮಚ್ಚಿಗೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪೂಜೆ ಮಾಡಿಸಿ ಅದರ ವಿಡಿಯೋ ಮಾಡಿಕೊಳ್ಳಲಾಗಿದೆ. ವಿಡಿಯೋ ವೈರಲ್​ ಆಗಿದೆ. ಭದ್ರಾವತಿ ಪೊಲೀಸರು ಸಕಾಲದಲ್ಲಿ ಎಚ್ಚೆತ್ತುಕೊಂಡು ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಿದೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Malenadu Today