ಬೈಯ್ಯುವಾಗ ಹುಷಾರು! ಮೊಮ್ಮಗನಿಗೆ ಬೈದಿದ್ದಕ್ಕೆ, ಎದುರು ಮನೆಯವನಿಂದ ಹಲ್ಲೆ! ಕಾರಣ ‘ಮಂಜುನಾಥ’

This Article Written by / Malenadu Today / ಮೇ 16, 2023

KARNATAKA NEWS/ ONLINE / Malenadu today/ May 17, 2023 GOOGLE NEWS / SHIVAMOGGA NEWS

ಹೊಳೆಹೊನ್ನೂರು/  ಮೊಮ್ಮಗನಿಗೆ ಕುಡಿದು ದುಡ್ಡು ಹಾಳು ಮಾಡ್ತೀಯಾ ಎಂದು ಬೈದಿದ್ದಕ್ಕೆ ತನಗೆ ಬೈದರು ಎಂದುಕೊಂಡು ಎದುರು ಮನೆಯಾತ ಬಂದು ಹಲ್ಲೆ ಮಾಡಿದ ಘಟನೆ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಗ್ರಾಮವೊಂದರಲ್ಲಿ ಕಳೆದ ಹನ್ನೊಂದರಂದು ನಡೆದ ಘಟನೆ ಸಂಬಂದ ತಡವಾಗಿ ದೂರು ದಾಖಲಾಗಿದೆ. 

ರಾತ್ರಿ ಬೈಕ್​ನಲ್ಲಿ ಹೋಗುವಾಗ ಹುಷಾರ್! ಯಾಮಾರಿದ್ರೆ ಜೀವಕ್ಕೆ ಆಪತ್ತು! ಹೀಗೂ ಆಗುತ್ತೆ ಹುಷಾರ್!

ಸ್ಥಳೀಯ ನಿವಾಸಿ ಜಯಮ್ಮ ಎಂಬವರು, ತಮ್ಮ ಮೊಮ್ಮಗ ತನ್ನ ಬಳಿ ಬಂದು ದುಡ್ಡು ಕೇಳಿದ್ದಕ್ಕೆ ಆತನಿಗೆ ನೀನು ಕುಡಿದು ಹಾಳು ಮಾಡ್ತೀಯ ಎಂದು ಬೈಯ್ಯುತ್ತಿದ್ದರಂತೆ. ಈ ವೇಳೆ ಎದುರು ಮನೆಯ ನಿವಾಸಿ ಬಂದು ನನಗೇಕೆ ಬೈಯ್ಯುತ್ತಿದ್ಯಾ ಎಂದು ಹಲ್ಲೆ ಮಾಡಿದ್ದಾರೆ. ಅಜ್ಜಿಯ ಮೊಮ್ಮಗ ಹಾಗೂ ಎದುರು ಮನೆಯ ನಿವಾಸಿಯ ಹೆಸರು ಒಂದೇ ಆಗಿದ್ದು, ಮೊಮ್ಮಗ ಮಂಜುನಾಥ್​ ನಿಗೆ ಬೈದಿದ್ದನ್ನ ಎದುರು ಮನೆಯ ನಿವಾಸಿ ಮಂಜುನಾಥ ತನಗೆ ಬೈದ್ರು ಎಂದು ತಿಳಿದು ಹಲ್ಲೆ ನಡೆಸಿದ್ದಾನೆ ಎಂದು  ದೂರಲಾಗಿದೆ. 

ಆನಂದಪುರದ ಬಳಿ ಭೀಕರ ಅಪಘಾತ! ಮರಕ್ಕೆ ಕಾರು ಡಿಕ್ಕಿ! ಕಾಂಗ್ರೆಸ್​ ಮುಖಂಡನ ಸಾವು ! ಇನ್ನೊಬ್ಬರ ಸ್ಥಿತಿ ಗಂಭೀರ

ಘಟನೆಯಲ್ಲಿ ವೃದ್ಧೆಯ ಮೇಲೆ ಮಂಜುನಾಥ್ ಹಾಗೂ ಇತರೇ ಮೂವರು ಸೇರಿ ಹಲ್ಲೆ ನಡೆಸಿದ ಆರೋಪ ಮಾಡಲಾಗಿದ್ದು, ಹೊಳೆಹೊನ್ನೂರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.


ಪಾರಿವಾಳ ಬೇಕಾ ಎಂದು ಕೇಳಿಕೊಂಡು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನ ಕದ್ದರಾ

ಶಿವಮೊಗ್ಗ/ ಪಾರಿವಾಳ ತಗೊಳ್ತೀರಾ ಬಂದು , ಮನೆಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಮೌಲ್ಯ ಬಂಗಾರ ಕದ್ದು ಹೋದ ಆರೋಪದ ಸಂಬಂಧ, ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ. ಘಟನೆ ನಡೆದು 15ಕ್ಕೂ ಹೆಚ್ಚು ದಿನದ ನಂತರ ಕಂಪ್ಲೆಂಟ್ ಆಗಿದ್ದು ಎಫ್ಐಆರ್ ಆಗಿದೆ.  

ಇದನ್ನು ಸಹ ಓದಿ /ಲಗೇಜ್​ ಆಟೋ ಹಾಗೂ ಬೈಕ್ ನಡುವೆ ಡಿಕ್ಕಿ! ಸಹಾಯ ಕೇಳಿದ್ರೂ ಸಹಕರಿಸಿದ ಜನ! ಮಾನವೀಯತೆ ಮೆರೆದ ಯುವಕರ ತಂಡ

ನಡೆದಿದ್ದೇನು?

ಶಿವಮೊಗ್ಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ, ಪ್ರಚಾರಕ್ಕೆ ಹೋಗಿ ವಾಪಸ್​  ಮನೆಗೆ  ಬಂದ ಸಂದರ್ಭದಲ್ಲಿ, ದೂರುದಾರ ಮಹಿಳೆಯೊಬ್ಬರಿಗೆ, ಬುದ್ದಾನಗರದ ಹುಡುಗರ ಗುಂಪೊಂದು ಪಾರಿವಾಳ ಬೇಕಾ ಎಂದು ಬಂದು ಕೇಳಿದೆ. 

ಆಗ ಮಹಿಳೆಯು ನಾವು ಪಾರಿವಾಳ ಸಾಕುವುದಿಲ್ಲ. ಬೇಡವೆಂದು ಹೇ, ಅಲ್ಲಿಂದ ಮನೆ ಪಕ್ಕಕ್ಕೆ ತೆರಳಿದ್ದಾರೆ. ಆ ಕಡೆಗೆ ಹೋಗಿ ವಾಪಸ್ ಬರುವಷ್ಟರಲ್ಲಿ, ಮನೆಯಲ್ಲಿದ್ದ  ವ್ಯಾನಿಟಿಬಾಗ್  ಕಣ್ಮರೆಯಾಗಿದೆ. ಅದರಲ್ಲಿದ್ದ 25 ಗ್ರಾಂ ತೂಕದ ಸುಮಾರು 100000/-ರೂ ಬೆಲೆಬಾಳುವ ಬಂಗಾರದ ಆಭರಣಗಳು ಮತ್ತು 500/-ರೂ ನಗದು ಹಣವನ್ನ ಪಾರಿವಾಳ ಮಾರಲು ಬಂದ ಹುಡುಗರು ಕದ್ದೊಯ್ದಿರುವ ಅನುಮಾನದ ಮೇರೆಗೆ ದೂರು ದಾಖಲಾಗಿದ್ದು, ಈ ಸಂಬಂಧ ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ. 


ಲಗೇಜ್​ ಆಟೋ ಹಾಗೂ ಬೈಕ್ ನಡುವೆ ಡಿಕ್ಕಿ! ಸಹಾಯ ಕೇಳಿದ್ರೂ ಸಹಕರಿಸಿದ ಜನ! ಮಾನವೀಯತೆ ಮೆರೆದ ಯುವಕರ ತಂಡ

ರಿಪ್ಪನ್. ಪೇಟೆ ಪೋಲೀಸ್ ಠಾಣೆ/ ಇಲ್ಲಿನ ಹೊಸನಗರ ರಸ್ತೆಯಲ್ಲಿ ನಿನ್ನೆ ಅಪಘಾತವೊಂದು ಸಂಭವಿಸಿದೆ. ಲಗೇಜ್ ಆಟೋ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ಬೈಕ್​ ಸವಾರ ಗಂಭೀರವಾಗಿ ಗಾಯಗೊಂಡಿದ್ಧಾರೆ. 

ನಡೆದಿದ್ದೇನು?

ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯ ಬಳಿ ಲಗೇಜ್ ಆಟೋ ಹಾಗೂ ಹೀರೋ ಹೋಂಡಾ ಸ್ಪ್ಲೆಂಡರ್​ ಬೈಕ್ ನಡುವೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ಗವಟೂರು ನಿವಾಸಿ ಗಣೇಶ್ ಗಂಭೀರವಾಗಿ ಗಾಯಗೊಂಡಿದ್ಧಾರೆ. 

ಘಟನೆ ನಡೆದು ,  ಅರ್ಧ ಗಂಟೆಯಾದರೂ ಗಾಯಾಳುವಿನ ಸಹಾಯಕ್ಕೆ ಯಾರು ಬಂದಿಲ್ಲ. ಇದರಿಂದಾಗಿ ಬೈಕ್​ ಸವಾರ ರಕ್ತ ಸ್ತ್ರಾವ ಹಾಗೂ ನೋವಿನಿಂದ ಬಳಲಿದ್ಧಾನೆ. ಬಳಿಕ ವಿಷಯ ತಿಳಿದು ಸ್ಥಳೀಯ ಯುವಕರು ಸ್ಥಳಕ್ಕೆ ತೆರಳಿ ಗಾಯಾಳು ರಮೇಶ್ನ್ನ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಒದಗಿಸಿದ್ದಾರೆ. ಇನ್ನೂ ಇದಕ್ಕೂ ಮೊದಲು ಬೈಕ್​ ಸವಾರನ್ನ ಆಸ್ಪತ್ರೆಗೆ ರವಾನಿಸಲು, ಆಕ್ಸಿಡೆಂಟ್ ಆದ ಲಗೇಜ್ ಆಟೋ ಚಾಲಕನ ಸಹಾಯವನ್ನು ಕೇಳಿದರೆ, ಆತ ನಿರಾಕಿರಿಸಿದ್ದ ಎನ್ನಲಾಗಿದೆ. 

 


ರಾತ್ರಿ ಬೈಕ್​ನಲ್ಲಿ ಹೋಗುವಾಗ ಹುಷಾರ್! ಯಾಮಾರಿದ್ರೆ ಜೀವಕ್ಕೆ ಆಪತ್ತು! ಹೀಗೂ ಆಗುತ್ತೆ ಹುಷಾರ್!

ಹೊಸನಗರ/ ಶಿವಮೊಗ್ಗ/ ರಾತ್ರಿ ಹೊತ್ತು ಡ್ರೈವಿಂಗ್ ಮಾಡುವಾಗ ಎಷ್ಟು ಜಾಗೃತೆ ವಹಿಸಿದರೂ ಸಾಲದು ಎಂಬುದಕ್ಕೆ ಸಾಕ್ಷಿಯಾಗಿ ನಿನ್ನೆ ಒಂದು ಘಟನೆ  ಸಂಭವಿಸಿದೆ. 

ಶಾಂತಪುರ -ಹೊಸನಗರ ಮಾರ್ಗವಾಗಿ ಶಿವಮೊಗ್ಗದಿಂದ ಹೊಸನಗರ ನಗರ ಕಡೆಗೆ ಬರುತ್ತಿದ ಬೈಕ್​ವೊಂದು ಲಾರಿ ಹೆಡ್​ಲೈಟ್​ನಿಂದಾಗಿ ಸ್ಕಿಡ್ಡಾಗಿ ಬಿದ್ದಿದ್ದಾರೆ.. 

ದಾರಿಯಲ್ಲಿ ಬರುತಿದ್ದ ವೇಳೆ  ಲಾರಿಯ ಲೆಜೀಮ್ ಲೈಟ್(ಹೆಡ್ ಲೈಟ್ )ಕಣ್ಣಿಗೆ ಹೊಡೆದ ಪರಿಣಾಮ ಬೈಕ್ ಸ್ಕಿಡ್ ಆಗಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಈ ವೇಳೆ  ಬೈಕ್ ಸವಾರನ ತಲೆಗೆ ತೀವ್ರ  ಪೆಟ್ಟು ಬಿದ್ದಿದೆ. ಬೈಕ್ ಸವಾರನನ್ನ  ವಾರಂಬಳ್ಳಿಯ ಮೋಹನ್ (22) ಎಂದು ಗುರುತಿಸಲಾಗಿದೆ. 

ತಕ್ಷಣ ಸ್ಪಂದಿಸಿದ ಆ್ಯಂಬುಲೆನ್ಸ್​ ಸಿಬ್ಬಂದಿ

ಇನ್ನೂ ವಿಷಯ ತಿಳಿಯುತ್ತಲೇ ಸ್ಥಳಿಯರು ಆ್ಯಂಬುಲೆನ್ಸ್​ಗೆ ಕರೆಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ 108 ಆ್ಯಂಬುಲೆನ್ಸ್ಸ್ ಸಿಬ್ಬಂದಿ  ಗಾಯಾಳುವಿಗೆ ಪ್ರಾಥಮಿಕ ಚಿಕೆತ್ಸೆ ನೀಡಿ ,ಹೆಚ್ಜಿನ ಚಿಕಿತ್ಸೆಗೆ ಮೆಗ್ಗಾನ್​  ಆಸ್ಪತ್ರೆಗೆ ರವಾನಿಸಿದ್ದಾರೆ.  ಘಟನೆ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…


FINAL ಫಲಿತಾಂಶ/ ಶಿವಮೊಗ್ಗ ಜಿಲ್ಲೆಯಲ್ಲಿ ಗೆದ್ದವರು ಯಾರು? ಸೋತವರು ಯಾರು?  ಅಂತಿಮ ರಿಸಲ್ಟ್​ನಲ್ಲಿ ಇರುವ ಕುತೂಹಲ ಅಂಶಗಳೇನು ತಿಳಿಯಿರಿ 

Malenadutoday.com Social media

Holehonnur Police Station

ಮುಂದಿನ ಸುದ್ದಿ ಒದಿ

Leave a Comment