ತೀರ್ಥಹಳ್ಳಿಯಲ್ಲಿ ಚುನಾವಣೆ ಗೆಲ್ಲಲು 68 ಕೋಟಿ ರೂಪಾಯಿ ಹಂಚಿದ ಆರಗ ಜ್ಞಾನೇಂದ್ರ ! ಏನಿದು ಆರೋಪ

KARNATAKA NEWS/ ONLINE / Malenadu today/ May 23, 2023 SHIVAMOGGA NEWS

ತೀರ್ಥಹಳ್ಳಿ/ ಚುನಾವಣೆಯಲ್ಲಿ ಗೆಲ್ಲಲು ಆರಗ ಜ್ಞಾನೇಂದ್ರ 68 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಅಂತಾ ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.  ಚುನಾವಣೆಯಲ್ಲಿ ಜನರು ನನ್ನನ್ನು ಸೋಲಿಸಿಲ್ಲ, ಆರಗ ಜ್ಞಾನೇಂದ್ರ ಚೆಲ್ಲಿದ ಹಣ ನನ್ನನ್ನು ಸೋಲಿಸಿದೆ ಎಂದವರು ದೂರಿದರು. 

ಮಹಿಳಾ ಸಂಘದ ಪದಾಧಿಕಾರಿಗಳಿಗೆ 5 ಸಾವಿರ , ಜಾತಿ ಸಂಘಟನೆ  ಪ್ರಮುಖರಿಗೆ ದೊಡ್ಡ ಮೊತ್ತದ ಹಣ, ಕೇರಿ, ಕಾಲೋನಿ ಪ್ರಮುಖರಿಗೆ ಹತ್ತಿಪ್ಪತ್ತು ಸಾವಿರ ರೂಪಾಯಿಯನ್ನು ಹಂಚಲಾಗಿದೆ. ಹೊಸ ಬೈಕ್ ಕೊಳ್ಳಲು ಅಡ್ವಾನ್ಸ್​ ಆಗಿ 10 ಸಾವಿರ ರೂಪಾಯಿಯನ್ನು ನೀಡಲಾಗಿದೆ ಎಂದು ದೂರಿದ್ದಾರೆ. 

 

ಗಾಯತ್ರಿ ಮಂದಿರದಲ್ಲಿ ಕಾರ್ಯಕರ್ತರು, ಪಟ್ಟಣದ ಗಾಯತ್ರಿ ಮಂದಿರದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಸಭೆಯಲ್ಲಿ ಮಾತನಾಡಿದ  ಕಿಮ್ಮನೆ ರತ್ನಾಕರ್  ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಪಿಎಸೈ ನೇಮಕಾತಿ ಹಗರಣವನ್ನು ಈಗಿನ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಲು ನಿರ್ಣಯಿಸಲಾಗಿದೆ ಎಂದರು.

Leave a Comment