ಶಿವಮೊಗ್ಗ KSRTC ಬಸ್​ ನಿಲ್ದಾಣದಲ್ಲಿ ಎಚ್ಚರಿಕೆ! ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಕುಂದಾಪುರಕ್ಕೆ ಹೊರಟ ದಂಪತಿಗೆ ಶಾಕ್! ಏನಾಯ್ತು ಗೊತ್ತಾ?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 26, 2023 SHIVAMOGGA NEWS’

ಕುಂದಾಪುರದಿಂದ ಬೆಂಗಳೂರಿಗೆ ಹೋಗಿ ವಾಪಸ್ ಟ್ರೈನ್​ ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದ ದಂಪತಿಯೊಬ್ಬರ ಚಿನ್ನಾಭರಣವೂ ಕಳ್ಳತನವಾದ ಬಗ್ಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್​ ದಾಖಲಾಗಿದೆ. 

ಏನಿದು ಪ್ರಕರಣ

ಕಳೆದ 22 ನೇ ತಾರೀಖು ಕುಂದಾಪುರದ ಕಡೆಯ ಹಿರಿಯ ದಂಪತಿ ಬೆಂಗಳೂರಿನಿಂದ ಶಿವಮೊಗ್ಗ ರೈಲು ನಿಲ್ದಾಣ (Shimoga Railway Station) ಗೆ ಬಂದಿದ್ದಾರೆ. ಅಲ್ಲಿಂದ  ಶಿವಮೊಗ್ಗದಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ಉಳಿದುಕೊಂಡು ಮರುದಿನ ಕುಂದಾಪುರಕ್ಕೆ ಹೊರಟಿದ್ದರು. ಕುಂದಾಪುರದ ಬಸ್ ಹತ್ತುವ ಸಲುವಾಗಿ ಶಿವಮೊಗ್ಗ KSRTC  ಬಸ್ ನಿಲ್ದಾಣದಲ್ಲಿ (shivamogga ksrtc bus stand) ಬಸ್​ ಹತ್ತಿದ್ದಾರೆ. ಈ ವೇಳೆ ಸಹಜವಾಗಿಯೇ ಸಿಕ್ಕಾಪಟ್ಟೆ ರಶ್ ಇತ್ತು ಎನ್ನಲಾಗಿದೆ. 

ಹಾಗೂ ಹೀಗೂ ರಶ್ ನಡುವೆ ಬಸ್​ ಹತ್ತಿದ ದಂಪತಿ ಬಳಿಕ ಏನೋ ಅನ್ನಿಸಿ ತಮ್ಮ ಬ್ಯಾಗ್ ನೋಡಿಕೊಂಡಿದ್ದಾರೆ.ಅಷ್ಟರಲ್ಲಿ ಅದರಲ್ಲಿದ್ದ ಪರ್ಸ್​ನ್ನ ಯಾರೋ ಕದ್ದುಬಿಟ್ಟಿದ್ದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಬಸ್​ ಸ್ಟ್ಯಾಂಡ್​ನಲ್ಲಿ ಕಳ್ಳರ ಕಾಟ ವಿಪರೀತವಾಗಿದ್ದು ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ಗಮನ ಹರಿಸಬೇಕಿದೆ 

ಸಂತ್ರಸ್ತ ಮಹಿಳೆಯ ಸುಮಾರು ಎರಡುವರೆ ಲಕ್ಷ ಮೌಲ್ಯದ ಚಿನ್ನ ಕಳ್ಳತನವಾಗಿದೆ. ಇದೇ ರೀತಿಯಲ್ಲಿ ಕಳೆದ ಒಂದು ತಿಂಗಳಿನಲ್ಲಿ ಬಸ್ ನಿಲ್ದಾಣದಲ್ಲಿ ನಾಲ್ಕಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಹೀಗೆ ಮುಂದುವರಿದರೆ  ಶಿವಮೊಗ್ಗ ಬಸ್​ ನಿಲ್ದಾಣ ಕಳ್ಳರ ಅಡ್ಡೆಯಾಗಲಿದ್ದು, ಕಳುವಾಗುವ ಮಾಲಿನ ಮೌಲ್ಯ ಕೋಟಿ ದಾಟಿದರೂ ದಾಟಬಹುದು. 

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor