ನಕ್ಸಲ್‌ ಲಕ್ಷ್ಮೀ ಪೂಜಾರಿ ಶರಣು | ಪತ್ನಿ ಶರಣಾಗತಿ ಬಗ್ಗೆ ಪತಿ ಹೇಳಿದ್ದೇನು? | ಹೋರಾಟ ಬೇಡವೆಂದಿದ್ದೇಕೆ

This Article Written by / 13 / ಫೆಬ್ರವರಿ 2, 2025

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 2, 2025 ‌‌ 

ನಿನ್ನೆ ನಕ್ಸಲ್‌ ಕೋಟೆಹೊಂಡ ರವೀಂದ್ರ ಶರಣಾಗಿದ್ದು, ಇವತ್ತು ಮತ್ತೊಬ್ಬ ನಕ್ಸಲ್‌ ತೊಂಬಟ್ಟು ಲಕ್ಷ್ಮೀ ಪೂಜಾರಿ ಇವತ್ತು ಉಡುಪಿ ಪೊಲೀಸರಿಗೆ ಶರಣಾಗಿದ್ದಾಳೆ. ಉಡುಪಿ ಜಿಲ್ಲಾಡಳಿತ ಹಾಗೂ ಉಡುಪಿ ಪೊಲೀಸ್‌ ಇಲಾಖೆ ಹಾಗೂ ನಕ್ಸಲ್‌ ಪುನರ್‌ವಸತಿ ಸಮಿತಿಯ ಎದುರು ಶರಣಾಗಿದ್ದಾರೆ. 

Malenadu Today Shivamogga

 

ಇಷ್ಟಕ್ಕೂ ಯಾರೀಕೆ ಎನ್ನುವುದನ್ನ ಗಮನಿಸುವುದಾದರೆ ಲಕ್ಷ್ಮೀ ಪೂಜಾರಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಸಮೀಪದ ತೊಂಬಟ್ಟು ಗ್ರಾಮದವಳು. 2006 ಮಾರ್ಚ್ 6ರಂದು ಊರು ತೊರೆದಿದ್ದರು.  

 

Malenadu Today Shivamogga

ಮಾಜಿ ನಕ್ಸಲ್ ಹೋರಾಟಗಾರ ಸಂಜೀವ ಎಂಬಾತನನ್ನು ವಿವಾಹವಾಗಿದ್ದು,ಆಂಧ್ರದಲ್ಲಿ ಅವರೊಂದಿಗೆ ಜೀವನ ನಡೆಸ್ತಿದ್ದರು. ಈಕೆಯ ಬಗ್ಗೆ ಬೇರೆ ಯಾವುದೇ ಸುಳಿವು ಪೊಲೀಸ್‌ ಇಲಾಖೆಗೆ ಇರಲಿಲ್ಲ.  

Malenadu Today Shivamogga

 

ಇನ್ನೂ ಲಕ್ಷ್ಮೀ ಮೇಲೆ ಅಮಾವಾಸ್ಯೆ ಬೈಲು ಠಾಣೆಯಲ್ಲಿ ಮೂರು ಪ್ರಕರಣಗಳಿದ್ದು ಬೆದರಿಕೆ, ಕರಪತ್ರ ಹಂಚಿಕೆಗೆ ಸಂಬಂಧಪಟ್ಟಿವೆ. ಈಕೆಯ ಮೇಲಿನ ಕೇಸ್‌ಗಳಿಂದ ಈಕೆ ಮುಕ್ತವಾಗುವ ಭರವಸೆಯೊಂದಿಗೆ ಇದೀಗ ಮುಖ್ಯವಾಹಿನಿಗೆ ಬಂದಿದ್ದಾಳೆ.

Malenadu Today Shivamogga

 

ಈ ನಡುವೆ ಶರಣಾಗತಿ ಕುರಿತಾಗಿ ಮಾತನಾಡಿರುವ ಲಕ್ಷ್ಮೀ ಪೂಜಾರಿ ಪತಿ ಸಂಜೀವ್‌ ತಾವು 2009 ರಲ್ಲಿಯೇ ಆಂಧ್ರದಲ್ಲಿ ಶರಣಾಗಿದ್ದೇನೆ. ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಂಡಿದ್ದೇನೆ, ಮೇಲಾಗಿ ತಾವು ಸಹ ಕರ್ನಾಟಕದ ಪಾವಗಡವನು. ಮುಂದೆ ಇಲ್ಲಿಯೇ ಬಂದು ನೆಲಸುವ ಇರಾದೆ ಇವೆ ಎಂದಿದ್ದಾರೆ. ಸದ್ಯ ನಾನು ಬಿಸಿನೆಸ್ ಮಾಡಿಕೊಂಡು ಇದ್ದೇನೆ, ಆದರೆ ಈ ಜನರೇಶನ್ ನಲ್ಲಿ ಆ ಚಳುವಳಿಯೆಲ್ಲಾ ಸಾಧ್ಯ ಆಗಲ್ಲ, ಮೇಲಾಗಿ ಹೊರಗಡೆಯು ಹೋರಾಟ ನಡೆಸಬಹುದು. ಸಂವಿಧಾನದ ಅಡಿಯಲ್ಲಿ ಚಳುವಳಿ ಮಾಡಬಹುದು ಎಂದ ಸಂಜೀವ್‌ , ಲಕ್ಷ್ಮೀಯವರ ಅಣ್ಣ ಸರ್ಕಾರ ಘೋಷಿಸಿರುವ ನಕ್ಸಲ್‌ ಶರಣಾಗತಿ ಯೋಜನೆ ಬಗ್ಗೆ ತಿಳಿಸಿದರು. ಆಕೆಯು ಸಹ ಕೇಸ್‌ಗಳಿಂದ ಮುಕ್ತರಾಗುವ ಭರವಸೆ ಹೊಂದಿದ್ಧಾರೆ. ಮೇಲಾಗಿ ನಕ್ಸಲ್‌ ಆಗಿ ಏನು ಸಾಧನೆ ಮಾಡಲು ಸಾಧ್ಯವಿಲ್ಲ ಎಂಬ ಅರಿವು ಆದ್ದರಿಂದ ಅದರಿಂದ ಹೊರಕ್ಕೆ ಬಂದೆ ಎಂದಿದ್ದಾರೆ.  2008ರಲ್ಲಿ ನಾನು ಲಕ್ಷ್ಮಿಯನ್ನು ಮದುವೆಯಾಗಿದ್ದೆ,  ಚಳುವಳಿಯಲ್ಲಿ ಇರುವಾಗಲೇ ನಾನು ಮದುವೆಯಾಗಿದ್ದೆ ಎಂದಿದ್ದಾರೆ.

Malenadu Today Shivamogga

 

ಇನ್ನೂ ಶರಣಾಗತಿ ಬಳಿಕ ಮಾತನಾಡಿದ  ಲಕ್ಷ್ಮೀ ಯಾವುದೇ ಒತ್ತಾಯಕ್ಕೆ ಶರಣಾಗಿಲ್ಲ, ಸ್ವಇಚ್ಚೆಯಿಂದ ಶರಣಾಗಿದ್ದೇನೆ, ಸರ್ಕಾರದ ಮೂಲಕ ಮಾಹಿತಿ ಲಭ್ಯವಾದ ಬೆನ್ನಲ್ಲೆ ಶರಣಾಗತಿ ಆಗಿದ್ದೇನೆ ಎಂದು ತಿಳಿಸಿದ್ಧಾರೆ. ಒಟ್ಟಾರೆ ಲಕ್ಷ್ಮೀ ಪೂಜಾರಿಯ ಶರಣಾಗತಿಯೊಂದಿಗೆ ಕರ್ನಾಟಕದಲ್ಲಿ  ಗುರುತಿಸ್ಪಲ್ಟ್ಟ ನಕ್ಸಲರ ಹೋರಾಟ ಅಂತ್ಯಗೊಂಡಿದೆ. 

Malenadu Today Shivamogga

SUMMARY |   naxal lakshmi pujari surrender in udupi

KEY WORDS |  naxal lakshmi pujari surrender in udupi

ಮುಂದಿನ ಸುದ್ದಿ ಒದಿ

Leave a Comment