SHIVAMOGGA | MALENADUTODAY NEWS | ಮಲೆನಾಡು ಟುಡೆ Jan 28, 2025
ಶಿವಮೊಗ್ಗ ನಗರದಲ್ಲಿ ಪ್ರೈವೇಟ್ ಸ್ಕೂಲ್ ಬಸ್ ಡಿಕ್ಕಿಯಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್ನ ಬಳಿಯಲ್ಲಿ ಈ ಗಠನೆ ಸಂಭವಿಸಿದೆ. ಕೆಂಪಮ್ಮ ಎಂಬವರು ಮೃತರು. ಇವರು ಈ ಭಾಗದಲ್ಲಿ ಸೊಪ್ಪು ಮಾರಿಕೊಂಡು ಜೀವನ ನಡೆಸ್ತಿದ್ದರು.
ನಡೆದಿದ್ದೇನು?
ಶಿವಮೊಗ್ಗ ಸಿಟಿಯ ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ಬಾಪೂಜಿನಗರದ ನಿವಾಸಿಯಾದ ಕೆಂಪಮ್ಮ ರಸ್ತೆ ದಾಟುತ್ತಿದ್ದರು. ಅದೇ ವೇಳೆ ಸ್ಕೂಲ್ ಬಸ್ವೊಂದು ಟರ್ನ್ ತೆಗೆದುಕೊಳ್ಳುತ್ತಿತ್ತು. ಚಾಲಕ ಮಹಿಳೆಯು ಮುಂದಕ್ಕೆ ಹೋಗುವುದನ್ನ ಗಮನಿಸದೆ ಆಕೆಗೆ ಬಸ್ ಡಿಕ್ಕಿ ಹೊಡೆಸಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದರ ಫೋಟೋ ಕಾಫಿ ಮಲೆನಾಡು ಟುಡೆ ಲಭ್ಯವಾಗಿದೆ. ಘಟನೆಯ ಸಂಬಂಧ ಪೂರ್ವ ಸಂಚಾರಿ ಪೊಲೀಸರು ಕೇಸ್ ದಾಖಲಿಸಿದ್ದು, ತನಿಖೆ ನಡೆಸ್ತಿದ್ದಾರೆ.
SUMMARY | Woman dies after being hit by school bus in Sangolli Rayanna Circle, Shimoga

KEY WORDS | school bus in Shimoga , Sangolli Rayanna Circle,