SHIVAMOGGA | MALENADUTODAY NEWS | ಮಲೆನಾಡು ಟುಡೆ Jan 24, 2025
ಶಿವಮೊಗ್ಗ ನಗರದ ವೀರಭದ್ರ ಕಾಲೋನಿಯಿಂದ ಹೊನ್ನವಿಲೇ ಗ್ರಾಮದಲ್ಲಿ ಹಾದುಹೋಗಿರುವ ಚಾನಲ್ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿದೆ. ಈ ಸಂಬಂಧ ಶವವನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮೇಲಕ್ಕೆ ಎತ್ತಿ, ಅದರ ಪಂಚನಾಮೆ ಮುಗಿಸಿ ಮೆಗ್ಗಾನ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಶಿಫ್ಟ್ ಮಾಡಿಸಿದ್ದಾರೆ.
ಸದ್ಯ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಹೀಗಾಗಿ ಸುಮಾರು 65 ರಿಂದ 70 ವರ್ಷದ ಅನಾಮದೇಯ ವ್ಯಕ್ತಿಯ ಗುರುತು ಪತ್ತೆ ಹಾಗೂ ವಿಳಾಸ ಅಥವಾ ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ಸಿಕ್ಕರೆ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ಹೊರಡಿಸಿದೆ.

ಮೃತ ವ್ಯಕ್ತಿಯು 5.2 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ದೃಡವಾದ ಮೈಕಟ್ಟು, ಒಂದು ಬೊಕ್ಕತಲೆ ಹೊಂದಿದ್ದು, ಮೈಮೇಲೆ ನೇರಳೆ ಬಣ್ಣದ ಚಡ್ಡಿ ಧರಿಸಿದ್ದಾರೆ. ಈ ಮೃತ ವ್ಯಕ್ತಿಯ ವಾರಸುದಾರರು ಯಾರಾದರು ಇದ್ದಲ್ಲಿ ಶಿವಮೊಗ್ಗ ಗ್ರಾಮಾಂತ ಪೋಲಿಸ್ ಠಾಣೆ ದೂ,ಸಂ 08182- 261413/261418/ ಮೊ. ನಂ 9480803332/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೋಲಿಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
SUMMARY | dead body of an unidentified person was found floating in a channel passing through Honnavilay village from Veerabhadra Colony in Shimoga city.
KEY WORDS | unidentified person dead body was found in channel, Honnavilay village ,Veerabhadra Colony in Shimoga city