SHIVAMOGGA | MALENADUTODAY NEWS | ಮಲೆನಾಡು ಟುಡೆ Jan 15, 2025
ಶಿವಮೊಗ್ಗ ನಗರದಲ್ಲಿ ನಿನ್ನೆ ದಿನ ವ್ಯಾಪಾರಿಯೊಬ್ಬನ ಮೇಲೆ ಹಲ್ಲೆ ಮಾಡಿ, ಆತನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದೆ. ಈ ಘಟನೆ ನಗರದ ಕಸ್ತೂರಿ ಬಾ ರಸ್ತೆಯಲ್ಲಿ ನಡೆದಿದೆ, ವ್ಯಾಪಾರ ಕೇಂದ್ರವಾಗಿರುವ ಇಲ್ಲಿ ಘಟನೆ ನಡೆದಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಿದೆ.
ಶಿವಮೊಗ್ಗದಲ್ಲಿ ನಡೆದ ಘಟನೆ | ಅಡ್ರೆಸ್ ವಿಚಾರಕ್ಕೆ ಅಂಗಡಿಯಾತನ ಮೇಲೆ ಹಲ್ಲೆ , ಜನರಿಂದ ರಕ್ಷಣೆ pic.twitter.com/d7wVkeDwKb
— malenadutoday.com (@malnadtoday) January 15, 2025
ಇಲ್ಲಿನ ಮುರುಡೇಶ್ವರ ದೇವಾಲಯದ ಬಳಿ, ನಿನ್ನೆ ಅಂದರೆ ಜನವರಿ 14 ರಂದ ರಾತ್ರಿ ಎಂಟು ಗಂಟೆ ಸುಮಾರಿಗೆ ನಾಲ್ವರು ಇಲ್ಲಿನ ಅಂಗಡಿಯೊಂದರ ಬಳಿ ಬಂದು ವಿಳಾಸ ಕೇಳಿದ್ದಾರೆ. ಅಂಗಡಿಯ ಮಾಲೀಕ ಕೇಳಿದ ವಿಳಾಸ ಎಲ್ಲಿದೆ ಎಂದು ತೋರಿಸಿದ್ದಾನೆ. ಅಲ್ಲಿಗೆ ತೆರಳಿದ ನಾಲ್ವರು ಅಲ್ಲಿ ಯಾರು ಇಲ್ಲದ್ದನ್ನು ಗಮನಿಸಿ ಹೊರಕ್ಕೆ ಬಂದು ದೂರದಿಂದಲೇ ವಿಳಾಸ ಹೇಳಿದ ಅಂಗಡಿಯವನಿಗೆ ನಿಂದಿಸಿದ್ದಾರೆ. ಆಗ ಅಂಗಡಿಯಾತ ತನ್ನ ಅಂಗಡಿಯಿಂದ ಹೊರಬಂದು ಯುವಕರನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಮಾರಕಾಸ್ತ್ರ ತೆಗೆದು ಅಂಗಡಿಯಾತನಿಗೆ ಚುಚ್ಚಿದ್ದಾನೆ. ಅದೇ ವೇಳೆ ಉಳಿದ ಯುವಕರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದ ಸ್ಥಳೀಯ ವ್ಯಾಪಾರಸ್ಥರು, ಹಲ್ಲೆಗೆ ಮುಂದಾದವರ ಮೇಲೆ ದಾಳಿ ಮಾಡಿ, ಅಂಗಡಿಯಾತನನ್ನ ರಕ್ಷಿಸಿದ್ದಾರೆ. ಈ ನಡುವೆ ಓರ್ವ ಯುವಕ ಸ್ಥಳೀಯರ ಕೈಗೆ ಸಿಕ್ಕಿಬಿದ್ದು ಪೆಟ್ಟು ತಿಂದಿದ್ದಾನೆ.
ಹೊಸವರ್ಷದ ಆರಂಭದಿಂದ ಶಿವಮೊಗ್ಗ ನಗರದಲ್ಲಿ ಇಂತಹ ಸಣ್ಣಪುಟ್ಟ ಘಟನೆಗಳು ವರದಿಯಾಗುತ್ತಲೇ ಇದೆ. ಪೊಲೀಸ್ ಇಲಾಖೆಯಿಂದ ದಾಟಿ ವಿಚಾರಗಳು ಆಚೆ ಬರುತ್ತಿಲ್ಲ. ಪ್ರಕರಣಗಳು ನಡೆದಾಗ ಅವುಗಳ ವಿಚಾರದಲ್ಲಿ ತೋರುತ್ತಿರುವ ಮೃಧುದೋರಣೆ ಹಾಗೂ ಕ್ರೈಂಗಳ ಮೇಲೆ ಕಡಿಮೆಯಾಗಿರುವ ಇಲಾಖೆಯ ಗಮನಕ್ಕೆ ಈ ಘಟನೆಗಳು ಸಾಕ್ಷಿಯಾಗುತ್ತಿದೆ.
View this post on Instagram
SUMMARY | Shopkeeper attacked by youths on Kasturi Ba Street, Gandhi Bazaar, Shivamogga, incident caught on CCTV camera
KEY WORDS |Shopkeeper attacked by youths , Kasturi Ba Street, Gandhi Bazaar, Shivamogga, incident caught on CCTV camera