ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಕೊಟ್ಟ ಡಾ.ಶಿವಣ್ಣ

This Article Written by / 13 / ನವೆಂಬರ್ 24, 2024

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

ನಟ ಡಾ.ಶಿವರಾಜ್‌ ಕುಮಾರ್‌ ಇವತ್ತು ಶಿವಮೊಗ್ಗಕ್ಕೆ ಬಂದಿದ್ದರು. ಚುನಾವಣೆ ಸಂದರ್ಭದಲ್ಲಿ ಪತ್ನಿಯ ಪರ ಪ್ರಚಾರಕ್ಕೆ ಬರುತ್ತಿದ್ದ ಅವರು ಈ ಸಲ ತಮ್ಮ ಸಿನಿಮಾ ಬೈರತಿ ರಣಗಲ್‌ನ ಸಕ್ಸಸ್‌ ಹಂಚಿಕೊಳ್ಳೊಕೆ ಬಂದಿದ್ದರು. ಈ ವೇಳೆ ಮಾತನಾಡಿದ ಅವರು,  ಶಿವಣ್ಣ ಎಲ್ಲಕಡೆಗಳಲ್ಲಿ ಬೈರತಿ ರಣಗಲ್‌ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ. ಕಲೆಕ್ಷನ್‌ ಸಹ ಚೆನ್ನಾಗಿದೆ ಎಂದರು. 

ಇದೇ ವೇಳೆ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಶಿವಣ್ಣ, ಸದ್ಯ ಆರೋಗ್ಯ ಸುಧಾರಣೆ ಆಗಿದೆ. ಮುಂದಿನ ತಿಂಗಳು ಆಪರೇಷನ್‌ ಇದೆ. ಯುಎಸ್‌ಎಗೆ ಹೋಗುತ್ತಿದ್ದೇನೆ. ಸದ್ಯ ಆರೋಗ್ಯ ಒಂದು ಲೆವಲ್‌ಗೆ ಚೆನ್ನಾಗಿದೆ ಎಂದರು. 

ಇದೇ ವೇಳೆ ತಮ್ಮ ಮುಂದಿನ ಸಿನಿಮಾನಗಳ ಬಗ್ಗೆ ಮಾತನಾಡಿದ ಅವರು 45 ಸಿನಿಮಾ ಸಿದ್ದವಾಗಿದೆ. ಆನಂತರ ನಮ್ಮದೆ ನಿರ್ಮಾಣದಲ್ಲಿ ಒಂದು ಸಿನಿಮಾ ಬರುತ್ತಿದೆ ಎಂದರು

ಇದೇ ವೇಳೆ ಈಸೂರು ದಂಗೆ ಬಗ್ಗೆ ಚಿತ್ರ ಮಾಡಬೇಕು ಎಂದು ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಆ ಸಿನಿಮಾವನ್ನು ಮಾಡೇ ಮಾಡಲಾಗುತ್ತೆ ಎಂದರು. 

 

SUMMARY | Dr. Shivarajkumar speaks about his health in Shivamogga 

KEY WORDS  | Dr. Shivarajkumar speaks about his health , Shivamogga 

ಮುಂದಿನ ಸುದ್ದಿ ಒದಿ

Leave a Comment