SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024
ಶಿವಮೊಗ್ಗ ನಗರದ ನಗರಸಭೆ ಮಾಜಿ ಸದಸ್ಯ ಲಕ್ಷ್ಮಣ್ ಎಂಬವರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್.ಲಕ್ಷ್ಮಣ್ ನಿನ್ನೆದಿನ ಸಾವನ್ನಪ್ಪಿದ್ದಾರೆ.
ಬಿಜೆಪಿಯಿಂದ ಆಯ್ಕೆ ಆಗಿದ್ದ ಇವರು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದ್ಯಸರು ಸಹ ಆಗಿದ್ದರು. ಹೊಸಮನೆ ಲಕ್ಷ್ಮಣ ಎಂದೇ ಗುರುತಿಸಿಕೊಂಡಿದ್ದ ಇವರು ಮೊನ್ನೆ ದಿನ ಗೋಪಾಳದ ಪಾರ್ಕ್ವೊಂದರಲ್ಲಿ ಕಳೆನಾಶಕ ಸೇವಿಸಿ ಅಸ್ವಸ್ಥರಾಗಿದ್ದರು. ಬಳಿಕ ಅದರ ನೋವು ತಡೆಯಲಾಗದೇ ಆಂಬುಲೆನ್ಸ್ಗೆ ಫೋನ್ ಮಾಡಿ ಕರೆಸಿಕೊಂಡಿದ್ದರು.ಸ್ ಥಳಕ್ಕೆ ಬಂದ ಆಂಬುಲೆನ್ಸ್ನವರು ಇವರನ್ನ ಆಸ್ಪತ್ರೆಗೆ ಸೇರಿಸಿದ್ದರು. ನಿನ್ನೆದಿನ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಆತ್ಮಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ

SUMMARY | Former Shivamogga Municipal Council member Hosamane Lakshmana commits suicide
KEY WORDS | Shivamogga Municipal Council member ,Hosamane Lakshmana commits suicide