ಮನೆಗೆ ನುಗ್ಗಿ ಸಿಕ್ಕಿಬಿದ್ದ ಕಳ್ಳ! ಭದ್ರಾವತಿ-ಪಿಳ್ಳಂಗೆರೆಯಲ್ಲಿ ಲಾರಿ ಆಕ್ಸಿಡೆಂಟ್! ಕುಡಿದು ಮಸೀದಿ ಬಳಿ ಗಲಾಟೆ! ಸರತಿ ತಪ್ಪಿದ ಗೃಹಜ್ಯೋತಿ ಕ್ಯೂ,ಪೊಲೀಸರ ಎಂಟ್ರಿ! TODAY @ NEWS

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಲಾರಿ ಆಲ್ಟೋ ನಡುವೆ ಡಿಕ್ಕಿ

ಭದ್ರಾವತಿ ತಾಲ್ಲೂಕಿನ  ಕಾರೇಹಳ್ಳಿ ಯಲ್ಲಿ ಮಾರುತಿ ಆಲ್ಟೊ ಹಾಗೂ ಲಾರಿಯ ನಡುವೆ ಅಪಘಾತವಾಗಿದೆ. ಘಟನೆಯಲ್ಲಿ  ಲಾರಿಯು ಕಾರಿಗೆ ಹಿಂಬದಿಯಿಂದ ಗುದ್ದಿದೆ . ಪರಿಣಾಮ ಕಾರಿನ ಹಿಂಬಂದಿ ನುಜ್ಜುಗುಜ್ಜಾಗಿದೆ. ಇನ್ನೂ ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ  ಸಣ್ಣ ಪುಟ್ಟ ಗಾಯಗಳಾಗಿದ್ದು ಅವರುಗಳನ್ನು ಚಿಕಿತ್ಸೆಗೆ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.  

Malenadu Today Shivamogga

ಗೃಹಜ್ಯೋತಿಗಾಗಿ ನೂಕುನುಗ್ಗಲು

ಇನ್ನೂ ಶಿವಮೊಗ್ಗದಲ್ಲಿಯು ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಸಲ್ಲಿಸಲು ನೂಕುನುಗ್ಗಲು ಉಂಟಾಗುತ್ತಿದೆ. ಜನರು ಸರತಿ ಸಾಲಿನಲ್ಲಿ ಬರದೇ ಒಮ್ಮೆಲೆ ನುಗ್ಗುತ್ತಿರುವುದರಿಂದ ನಂ 1 ಸೆಂಟರ್​ಗಳಲ್ಲಿ ಸಮಸ್ಯೆಯಾಗುತ್ತಿದೆ. ಈ ಮಧ್ಯೆ ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ಅರ್ಜಿ ಸಲ್ಲಿಸಲು ಜಮಾಯಿಸಿದ್ದ ಜನರ ನಡುವೆ ನೂಕು ನುಗ್ಗಲು ಉಂಟಾಗಿ , ಅಲ್ಲಿದ್ದವರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಸರತಿ ಸಾಲಿನಲ್ಲಿ ಜನರನ್ನ ನಿಲ್ಲಿಸಿ ಪರಿಸ್ಥಿತಿ ತಿಳಿಗೊಳಿಸಬೇಕಾಯ್ತು.  

ಮಸೀದಿ ಬಳಿಯಲ್ಲಿ ವ್ಯಕ್ತಿಯ ಗಲಾಟೆ

ಭದ್ರಾವತಿ ಗ್ರಾಮಾಂತರ ಸ್ಟೇಷನ್​ ವ್ಯಾಪ್ತಿಯ ಕಾಗೆಕೋಡುಮಗ್ಗಿಯಲ್ಲಿ ವಕ್ತಿಯೊಬ್ಬ ಮಸೀದಿ ಬಳಿ ಕುಡಿದು ಗಲಾಟೆ ಮಾಡುತ್ತಿದ್ದ. ತಕ್ಷಣ ಸ್ಥಳೀಯರು ಪೊಲೀಸರಿಗೆ ಪೋನಾಯಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆತನಿಗೆ ಬುದ್ದಿವಾದ ಹೇಳಿದ್ದಾರೆ. ಆದರೆ ಆತ ಪೊಲೀಸರ ಮಾತು ಕೇಳಲಿಲ್ಲ. ಹೀಗಾಗಿ ಆತನನ್ನ ಸ್ಟೇಷನ್​ಗೆ ಕರೆದುಕೊಂಡು ಹೋಗಿ,  ಮುಂದಿನ ಕ್ರಮ ಕೈಗೊಂಡಿದ್ದಾರೆ. 

Malenadu Today Shivamogga

ಇನ್ನೋವಾ ಹಾಗೂ ಈಚರ್ ವಾಹನದ ನಡುವೆ ಡಿಕ್ಕಿ

ಶಿವಮೊಗ್ಗ ಪಿಳ್ಳಂಗೆರೆಯಲ್ಲಿ ಇನೋವಾ ಹಾಗೂ ಈಚರ್ ವಾಹನಗಳ  ನಡುವೆ ಅಪಘಾತ ಸಂಭವಿಸಿದದೆ. ಅದೃಷ್ಟಕ್ಕೆ ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಚಾಲಕರು ಪಾರಾಗಿದ್ದಾರೆ. ಆದರೆ ಅಪಘಾತದ ರಭಸಕ್ಕೆ ಎರಡು ವಾಹನಗಳು ಜಖಂಗೊಂಡಿದ್ದವು. ಅಲ್ಲದೆ ರಸ್ತೆ ಮಧ್ಯೆ  ನಡೆದ ಘಟನೆಯಿಂದಾಗಿ ಟ್ರಾಫಿಕ್​ ಸಮಸ್ಯೆಯು ಉಂಟಾಗಿತ್ತು. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ಧಾರೆ. 

 

Malenadu Today Shivamogga

ಕಳ್ಳನನ್ನ ಹಿಡಿದುಕೊಟ್ಟ ಗ್ರಾಮಸ್ಥರು

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಕಡದಕಟ್ಟೆಯಲ್ಲಿ ಕಳ್ಳನೊಬ್ಬ ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆತನನ್ನ ಗ್ರಾಮಸ್ಥರು ಹಿಡಿದಿದ್ದಾರೆ. ಕಳ್ಳ ಮನೆಯೊಳಕ್ಕೆ ಹೋಗಿರುವುದನ್ನ ಕಂಡ ಗ್ರಾಮಸ್ಥರು, ತಕ್ಷಣವೇ ಪೊಲೀಸರಿಗೆ ಫೋನ್ ಮಾಡಿ ಕರೆಯಿಸಿಕೊಂಡಿದ್ದಾರೆ. ಬಳಿಕ, ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 

Malenadu Today Shivamogga

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor