ಇಲಿಯಾಜ್ ನಗರದಲ್ಲಿ ಕೊಲೆ ಕೇಸ್! ಆಸೀಫ್​ ಹತ್ಯೆಗೆ ಕಾರಣವಾಗಿದ್ದೇನು ಗೊತ್ತಾ!? ಜೀವ ತೆಗೆಯಿತಾ ಸೋದರಿ ಸಂಗ? ಎಫ್​ಐಆರ್​ನಲ್ಲಿ ಏನಿದೆ?

KARNATAKA NEWS/ ONLINE / Malenadu today/ Jun 16, 2023 SHIVAMOGGA NEWS

ಶಿವಮೊಗ್ಗ/ ಮೊನ್ನೆ ರಾತ್ರಿ 10 ಗಂಟೆ ಸುಮಾರಿಗೆ ಇಲಿಯಾಜ್ ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ.  ಕೊಲೆಯಾದ ಆಸೀಫ್​ನ ಸಹೋದರ ನೀಡಿದ ದೂರನ್ನ ಆಧರಿಸಿ ಎಫ್​ಐಆರ್ ದಾಖಲಾಗಿದ್ದು, ಅದರಲ್ಲಿ ತನ್ನ ತಂಗಿ ವಿಚಾರಕ್ಕಾಗಿ ಆರೋಪಿ ಜಭಿವುಲ್ಲಾ ಆಸೀಫ್​ನನ್ನ ಕೊಲೆ ಮಾಡಿದ್ಧಾನೆಂದು ಆರೋಪಿಸಲಾಗಿದೆ. 

Shivamogga Malenadu Today

ಎಫ್​ಐಆರ್​ನಲ್ಲಿ ಏನಿದೆ?

ಸೈಯ್ಯದ್​ ಆಸೀಫ್​ ಇಲಿಯಾಸ್​ ನಗರದ ನಿವಾಸಿ ಮಹಿಳೆಯೊಬ್ಬರ ಜೊತೆ  ಫೋನ್​ನಲ್ಲಿ ಮಾತನಾಡುತ್ತಿದ್ದನಂತೆ. ಇಬ್ಬರು ಜೊತೆಯಲ್ಲಿ ಓಡಾಡುತ್ತಿದ್ದರಂತೆ. ಇವರಿಬ್ಬರ ನಡುವಿನ ರಿಲೇಶನ್​ ಬಗ್ಗೆ ಆಕೆಯ ಸಹೋದರ ಜಬಿ ಆಕ್ಷೇಪ ವ್ಯಕ್ತಪಡಿಸಿದ್ಧಾನೆ. ತನ್ನ ತಂಗಿ ವಿಚಾರಕ್ಕೆ ಬರಬೇಡ . ಬಂದರೆ ಒಂದು ಗತಿ ಕಾಣಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ವೇಳೆ ದೂರುದಾರರು ಸಹ ತಮ್ಮ ತಮ್ಮನಿಗೆ ಬುದ್ದಿ ಹೇಳುವುದಾಗಿ ಹೇಳಿ ಜಗಳ ಬಿಡಿಸಿದ್ದರು. ಈ ಮಧ್ಯೆ ಆಸಿಫ್​ ಮಹಿಳೆಯ ಜೊತೆಗೆ ಸಂಪರ್ಕ ಮುಂದುವರಿಸಿದ್ದಾನೆ. ಇದರಿಂದ ಕೆರಳಿದ ಜಬಿ,  14/06/2023 ರಂದು ರಾತ್ರಿ ಆಸೀಫ್​ಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ.

Shivamogga Malenadu Today

ಘಟನೆ ನಡೆದಿದ್ದೇಗೆ? 

ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋಗಿದ್ದ ಆಸೀಫ್​ ಅಲ್ಲಿಯೇ ಇದ್ದ ಮಸೀದಿ ಬಳಿ ಟೀ ಕುಡಿಯುತ್ತಾ ನಿಂತುಕೊಂಡಿದ್ದ. ಈ ವೇಳೆ ಅಲ್ಲಿಗೆ ಬಂದ ಜಭಿ ಮತ್ತು ಮೂವರು, ಆಸೀಫ್​ನನ್ನ ಮಾತನಾಡಬೇಕು ಬಾ ಎಂದು ಕರೆದಿದ್ದಾರೆ. ಆಸೀಫ್ ತಾನೆಲ್ಲಿಗೂ ಬರುವುದಿಲ್ಲ ಎಂದಿದ್ದಾನೆ. ಈ ಮಧ್ಯೆ ಜಭಿ ಬೈಕ್​ನಲ್ಲಿದ್ದ ಮಚ್ಚನ್ನ ತಂದು ಆಸೀಫ್​ನ ತಲೆಯ ಹಿಂಭಾಗಕ್ಕೆ ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾನೆ. ಘಟನೆಯಲ್ಲಿ ಆಸೀಫ್​ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸದ್ಯ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸರು ಜಭಿಯನ್ನ ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. 


ಮೆಗ್ಗಾನ್ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ್ ರಿಪೋರ್ಟ್ ತಗೆದುಕೊಂಡು ವಾಪಸ್ ಬಂದ ವ್ಯಕ್ತಿಗೆ ಎದುರಾಗಿತ್ತು ಶಾಕ್!

ಸಿಟಿ ಸ್ಕ್ಯಾನ್​ ರಿಪೋರ್ಟ್​ ತರಲು ಮೆಗ್ಗಾನ್​ ಆಸ್ಪತ್ರೆಗೆ ಹೋಗಿ ವಾಪಸ್ ಬರುವ ಹೊತ್ತಿಗೆ ಬೈಕ್​ ಕಳುವಾದ ಘಟನೆ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದೆ. 

ಇಲ್ಲಿನ ಕುವೆಂಪು ರಸ್ತೆಯ ಬಳಿ ಇರುವ ಯುನಿಟಿ ಆಸ್ಪತ್ರೆ ಎದುರು ತಮ್ಮ ಸ್ಪ್ಲೆಂಡರ್ ಬೈಕ್​ ನಿಲ್ಲಿಸಿ ರಾಮಚಂದ್ರ ಎಂಬವರು ಮೆಗ್ಗಾನ್ ಆಸ್ಪತ್ರೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ತರಲು ಹೋಗಿದ್ದರು. ಅಲ್ಲಿಂದ ಕೆಲ ಹೊತ್ತಿನಲ್ಲಿ ವಾಪಸ್ ಬರುವಾಗ ಅವರ ಸ್ಪ್ಲೆಂಡರ್ ಬೈಕ್​ನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಎಲ್ಲೆಡೆ ಹುಡುಕಾಡಿ, ಕೊನೆ ಪೊಲೀಸರಿಗೆ ಈ ಪೋರ್ಟ್​ಲ್​ ಮೂಲಕ ದೂರು ದಾಖಲಿಸಿದ್ದಾರೆ.  


 

 

Leave a Comment