SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 14, 2024 | ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಬಗ್ಗೆ ಅವರ ಅಭಿಮಾನಿಗಳ ಅಭಿಮಾನ ಕಡಿಮೆಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಅಭಿಮಾನಿಯೊಬ್ಬ ದರ್ಶನ್ರನ್ನ ನೋಡಲು ಬಳ್ಳಾರಿ ಜೈಲಿಗೆ ತೆರಳಿದ್ದಾನೆ.
ಅಲ್ಲಿಗೆ ತೆರಳಿದ್ದ ಅಭಿಮಾನಿ ಟೆಡ್ಡಿಬೇರ್ ಅವತಾರ ತಾಳಿ, ನಾವು ನಿಮಗಾಗಿ ಕಾಯುತ್ತಿದ್ದೇವೆ ಲವ್ ಯು ಬಾಸ್ ಎಂಬ ಪೋಸ್ಟರ್ ಹಿಡಿದು ನಿಂತಿದ್ದ. ಇದನ್ನ ಮಾಧ್ಯಮಗಳು ಚಿತ್ರೀಕರಿಸಿ ಆತನನ್ನ ಮಾತನಾಡಿಸಿದ್ದಾರೆ.
ಈ ವೇಳೆ ಆತ ತನ್ನನ್ನ ಕಾರ್ತಿಕ್ ಎಂದು ಪರಿಚಯಿಸಿಕೊಂಡಿದ್ದಾನೆ. ಜೈಲಿನಲ್ಲಿ ಆತನಿಗೆ ದರ್ಶನ್ರನ್ನ ನೋಡಲು ಅವಕಾಶ ಸಿಕ್ಕಿಲ್ಲ. ನಾನು ಮತ್ತೆ ಅವರನ್ನ ನೋಡಲು ಬರುವುದಾಗಿ ಆತ ಹೇಳಿಕೊಂಡಿದ್ದಾನೆ. ಅಲ್ಲದೆ ದರ್ಶನ್ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯವೆಸಗಿದ ವ್ಯಕ್ತಿಗೆ ಶಿಕ್ಷೆ ನೀಡಿದ್ದಾರೆ ಎಂದಿದ್ದಾನೆ.
SUMMARY | A fan from Sagar taluk of Shivamogga district has gone to Ballari jail to meet actor Darshan, who is lodged in Ballari jail.

KEYWORDS | Sagar taluk of Shivamogga district, Ballari jail, meet actor Darshan, Ballari jail