KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE
ಸಾಗರ / ಶಿವಮೊಗ್ಗ / ಶಿವಮೊಗ್ಗ ಪೊಲೀಸರು ಪಬ್ಲಿಕ್ ನ್ಯೂಸೆನ್ಸ್ ಮಾಡ್ತಿದ್ದವರ ವಿರುದ್ಧ ಕೇಸ್ ದಾಖಲಿಸುತ್ತಿದ್ದಾರೆ. ಇದೀಗ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪೊಲೀಸರು ಸಹ ನೈಟ್ ಆಪರೇಷನ್ ಆರಂಭಿಸಿದ್ದಾರೆ.
ಇದಕ್ಕೆ ಪೂರಕವಾಗಿ ನಿನ್ನೆ ದಿನಾಂಕ: 23-04-2023 ರಂದು ಸಾಗರ ಟೌನ್ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡ ಸಾಗರ ಟೌನ್ ವ್ಯಾಪ್ತಿಯ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ
ಈ ವೇಳೆ Public Nuisance ಮಾಡುವ ಮತ್ತು ಅನುಮಾನಸ್ಪಾದ 10 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಲಾಗಿದೆ.
ಅಲ್ಲದೆ Public Nuisance ಮಾಡಿದ ವ್ಯಕ್ತಿಗಳ ವಿರುದ್ದ 10 ಪಿಟ್ಟಿ ಕೇಸ್ಗಳನ್ನ ಹಾಕಲಾಗಿದೆ.
ತುಂಗಾನಗರ ಪೊಲೀಸರಿಂದಲೂ ಕಾರ್ಯಾಚರಣೆ
ಇನ್ನೊಂದೆಡೆ ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ಸಿಬ್ಬಂದಿಗಳ ತಂಡ ಶಿವಮೊಗ್ಗ ನಗರದ ವಾದಿ-ಎ-ಹುದಾ, ಎಂಆರ್ಎಸ್ ಸರ್ಕಲ್ ಮತ್ತು ಸೂಳೇಬೈಲಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿದೆ
ಈ ವೇಳೇ Public Nuisance ಮಾಡುವ ಮತ್ತು ಅನುಮಾನಸ್ಪಾದ 13 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಪೂರ್ವಪರಗಳನ್ನು ಪರಿಶೀಲಿಸಿದ್ದಾರೆ.
ಹಾಗೂ Public Nuisance ಮಾಡಿದ ವ್ಯಕ್ತಿಗಳ ವಿರುದ್ದ 09 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ