ಸಿಟಿಯಲ್ಲಿಯೇ ದರೋಡೆ! ಸುಲಿಗೆ/ ಒಬ್ಬನನ್ನೆ ಮೂರು ಸಲ ರಾಬರಿ ಮಾಡಿದ ದುಷ್ಕರ್ಮಿಗಳು!/ 24 ಗಂಟೆಯ ಆಪರೇಷನ್​

ಹಂಚಿಕೊಳ್ಳಿ
WhatsApp Facebook X Telegram

MALENADUTODAY.COM  |SHIVAMOGGA| #KANNADANEWSWEB

ಕೇಸ್ ದಾಖಲಾದ 24 ಗಂಟೆಯಲ್ಲಿ ಶಿವಮೊಗ್ಗ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯನ್ನು ನೀಡಲಾಗಿದೆ. 

ನಡೆದಿದ್ದೇನು? 

ದಿನಾಂಕಃ- 17-03-2023 ರಂದು ಸಂಜೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈಲ್ ರಸ್ತೆಯ ಬಳಿ ಘಟನೆಯೊಂದು ನಡೆದಿತ್ತು. ಅಪರಿಚಿತರ, ಮಲ್ಲಾಫುರ ಗ್ರಾಮದ  ಚಂದ್ರಶೇಖರ್ ಎಂಬವರ , ಮೊಬೈಲ್  ಕಿತ್ತುಕೊಂಡು ಹೋಗಿದ್ದರು. ಇದು ಮೊದಲ ಘಟನೆಯಾದರೆ, ಇದರ ಬೆನ್ನಲ್ಲೆ ಮತ್ತೆ ಕದ್ದ ಮೊಬೈಲ್ ಕೊಡುವ ನೆಪದಲ್ಲಿ ಶಿವಮೊಗ್ಗ ನಗರದ ಹೊಸಮನೆಗೆ ಬರಲು ಚಂದ್ರಶೇಖರ್​ರಿಗೆ ಹೇಳಿದ ಆರೋಪಿಗಳು ಅವರ ಬಳಿ ಇದ್ದ ಹಣವನ್ನು ಕಿತ್ತು ಹೋಗಿದ್ದರು.

Malenadu Today Shivamogga

ಶಿವಮೊಗ್ಗ ಡಿಸಿ ಆಫೀಸ್ ಆವರಣ ಗೋಮೂತ್ರದಿಂದ ಶುದ್ಧ! ಪೊಲೀಸರು ತಡೆದರೂ ನಡೀತು ಗೋಮೂತ್ರ ಸ್ವಚ್ಚತೆ!

ಇನ್ನೂ ಮೂರನೇ ಸಲ  ಪುನಾಃ 05 ಜನ ಅಪರಿಚಿತರು ಬಂದು ಚಂದ್ರಶೇಖರ್ ರವರಿಗೆ ನಿಮ್ಮ ಮೊಬೈಲ್ ಕೊಡಿಸುತ್ತೇವೆ ಎಂದು ಹೇಳಿ, ಆಟೋವೊಂದರಲ್ಲಿ ಸೋಮಿನಕೊಪ್ಪ ಹತ್ತಿರದ ಖಾಲಿ ಲೇಔಟ್ ಬಳಿ ಕರೆದುಕೊಂಡು ಹೋಗಿ ಹಲ್ಲೆ ಮಾಡಿ ಎಟಿಎಂ ಕಿತ್ತುಕೊಂಡು ಕಳುಹಿಸಿದ್ದರು. 

ಹೀಗೆ ಮೂರು ಸಲ ವ್ಯಕ್ತಿಯನ್ನು ಟಾರ್ಗೆಟ್ ಮಾಡಿದ್ದ ಸಂಬಂಧ  18/03/2023 ರಂದು  ಕಲಂ 397 ಐಪಿಸಿ ಅಡಿಯಲ್ಲಿ ಕೇಸ್​ ದಾಖಲಾಗಿತ್ತು. ಸದ್ಯ ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ಧಾರೆ . 

*ಡಾನ್ ಆಗುವ ಆಸೆಯಲ್ಲಿ ಮಂಗಳೂರಿಂದ ಶಿವಮೊಗ್ಗಕ್ಕೆ ಬಂದವ ಫಸ್ಟ್​ ಕೇಸ್​ನಲ್ಲಿಯೇ ಫಿಟ್​ ಆದ! ರೋಚಕವಾಗಿದೆ ಒಂದು ಮಾತ್ರೆ ಕಥೆ*

ಬಂಧಿತರು

1) ರಾಜು ಡಿ @ ಚೊಟ್ಟ, 29 ವರ್ಷ, ಕಲ್ಲಳ್ಳಿ ಕಾಶಿಪುರ ಶಿವಮೊಗ್ಗ ಟೌನ್,

2) ಈಶ್ವರ, 28 ವರ್ಷ, ಹೊಸಮನೆ, ಶಿವಮೊಗ್ಗ ಟೌನ್,

3) ರಾಜು @ ಗುನ್ನಾ, 20 ವರ್ಷ, ಹೊಸಮನೆ, ಶಿವಮೊಗ್ಗ ಟೌನ್,

4) ಮಣಿಕಂಠ ಎ.ಎಲ್, 29 ವರ್ಷ, ಶರಾವತಿನಗರ, ಶಿವಮೊಗ್ಗ ಟೌನ್,

5) ವಿಜಯ್, 25 ವರ್ಷ, ಬೊಮ್ಮನಕಟ್ಟೆ ಶಿವಮೊಗ್ಗ ಟೌನ್,

6) ರಘು ಬಿನ್ ಹರೀಶ್ 21 ವರ್ಷ, ಹೊಸಮನೆ, ಶಿವಮೊಗ್ಗ ಟೌನ್

ಈ ಆರು ಜನ ಆರೋಪಿಗಳ ಜೊತೆ  03 ಜನ ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನ ಬಂಧಿಸಲಾಗಿದೆ. ಇನ್ನೂ ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ 01 ದರೋಡೆ ಮತ್ತು 01 ಸುಲಿಗೆ ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ 02 ಎಟಿಎಂ ಕಾರ್ಡುಗಳು, ಒಂದು ಮೊಬೈಲ್ ಮತ್ತು ನಗದು ಹಣ ರೂ 9,200/- ಅನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.  

Malenadu Today Shivamogga

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #L

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor