ಮಠದ ಅನುದಾನಕ್ಕೂ ಬಿಜೆಪಿಯಿಂದ 40 % ಪರ್ಸೆಂಟ್ ಕಮಿಷನ್! ಕಾಂಗ್ರೆಸ್​ನಿಂದ ಜನರ ಹಣ ಜನರಿಗೆ! ಗ್ಯಾರಂಟಿ ಕಾರ್ಡ್ ಕೊಟ್ಟಸುರ್ಜೇವಾಲಾ

This Article Written by / Malenadu Today / ಮಾರ್ಚ್ 10, 2023

MALENADUTODAY.COM  |SHIVAMOGGA| #KANNADANEWSWEB

ಶಿವಮೊಗ್ಗ ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾಂಗ್ರೆಸ್ ಸಭೆಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ  ಗ್ಯಾರಂಟಿ ಕಾರ್ಡ್ ವಿತರಣೆ ಮಾತಡಿದ್ರು. ಬಳಿಕ ಮಾತನಾಡಿದ ಅವರು,   ಜನರ ಹಣ ಜನರಿಗೆ ಸಲ್ಲಬೇಕು ಎಂಬುದು ಕಾಂಗ್ರೆಸ್‌ ಸಿದ್ಧಾಂತವಾಗಿದ್ದು, ಪ್ರತಿ ಮನೆಗೆ 200 ಯೂನಿಟ್‌ಉಚಿತ ವಿದ್ಯುತ್, ಪ್ರತಿ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂ, ನೇರವಾಗಿ ಬ್ಯಾಂಕ್‌ ಖಾತೆಗೆ ಮತ್ತು ರಾಜ್ಯದ 4 ಕೋಟಿ ಜನರಿಗೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಾರ್ಡ್‌ ನೀಡುತ್ತದೆ ಎಂದರು.

Malenadu Today Shivamogga

3.10 ಲಕ್ಷ ಕೋಟಿ ಬಜೆಟ್‌ನಲ್ಲಿ 40% ಎಂದರೆ ಸುಮಾರು 75 ಲಕ್ಷ ಕೋಟಿಯಷ್ಟು ದುಡ್ಡಿನಲ್ಲಿ ಬಿಜೆಪಿ ಭ್ರಷ್ಟಾಚಾರ ಮಾಡಿದೆ ಎಂದ ಸುರ್ಜೆವಾಲಾ, ಬಿಜೆಪಿಯ ಭ್ರಷ್ಟಾ ಚಾರದ ಬಗ್ಗೆ ಕನ್ಯಾಕುಮಾರಿ ಯಿ೦ದ ಕಾಶ್ಮೀರದ ವರೆಗೆ ದೇಶದ ಎಲ್ಲಾ ಜನರು ಮಾತನಾಡುತ್ತಿದ್ದಾರೆ. ಕರ್ನಾಟಕ ಸರ್ಕಾರದ 40% ಕಮಿಷನ್ ಬಗ್ಗೆ ಇಡೀ ದೇಶದ ಗಮನ ಸೆಳೇದಿದೆ. ಈ ಆರೋಪವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಗುತ್ತಿಗೆದಾರರ ಸಂಘದ ಆಧ್ಯಕ್ಷರೇ ಮಾಡಿದ್ದಾರೆ ಎಂದಿದ್ಧಾರೆ. ಬೆಳಗಾವಿಯ ಸಂತೋಷ್ ಪಾಟೀಲ್‌ ತಾನು ಮಾಡಿದ ಕೆಲಸಕ್ಕೆ 40% ಕಮಿಷನ್ ನೀಡಲಾಗದೆ ಆತ್ಮಹತ್ಯೆ ಮಾಡಿ ಕೊಂಡರು. ಆತನ ತಂದೆ ತಾಯಿ ಹೆಂಡತಿ ಮಕ್ಕಳು ಇವತ್ತಿಗೂ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇನ್ನೋರ್ವ ಗುತ್ತಿಗೆ ದಾರ ಬೆ೦ಗಳೂರು ಗ್ರಾಮಾಂತರದ ಟಿ.ಎನ್. ಪ್ರಸಾದ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜೇಂದ್ರ ಎಂಬ ವ್ಯಕ್ತಿ ಕೂಡ ಕಮಿಷನ್ ನೀಡಲಾಗದೆ ಸತ್ತಿದ್ದಾನೆ. ಬಿಜೆಪಿಗೆ ಎಷ್ಟು ಹಣ ಬೇಕು ಎಂದು ಹೇಳಲಿ. ಅವರ ಹಣದ ದಾಹವನ್ನು ಕಾಂಗ್ರೆಸ್​ ತೀರಿಸುತ್ತದೆ. ಆದರೆ ಸತ್ತ ಗುತ್ತಿಗೆ ದಾರರನ್ನು ಅವರು ವಾಪಾಸು ಕೊಡಬಲ್ಲರೇ ಎಂದು ಪ್ರಶ್ನಿಸಿದರು

Malenadu Today Shivamogga

ಮಠ ಮಂದಿರಗಳಿಗೆ ಅನುದಾನ ನೀಡಲು ಕೂಡ ಕಮಿಷನ್ ಕೇಳಿದ್ದಾರೆ  ಎಂದು ಆರೋಪಿಸಿದ ಸುರ್ಜೆವಾಲಾ,  ಜನ ಮತ ಹಾಕುವ ಮುನ್ನ ಎಚ್ಚರ ವಹಿಸಲಿ ಎಂದು ಕರೆಕೊಟ್ಟರು. ಆರು ತಿಂಗಳಲ್ಲಿ 8 ಸಾರಿ ಬಂದ ಪ್ರಧಾನಿ ನರೆಂದ್ರ ಮೋದಿ,  ಟಾಟಾ ಮಾಡಿ ಹೋಗಿದ್ದು ಬಿಟ್ಟರೆ  ಜನರಿಗೆ ಏನನ್ನೂ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದ್ರು. ಹಕ್ಕುಪತ್ರ, ನೀಡಿಲ್ಲ, ಮನೆ ನೀಡಿಲ್ಲ  ಎಂದ ಕಾಂಗ್ರಸ್​ ಮುಖಂಡ್​ ಜಿಲ್ಲೆಯ ಎರಡು ಪ್ರಮುಖ ಕಾರ್ಖಾನೆಗಳನ್ನು ಮುಚ್ಚಿದ್ದಾರೆ ಎಂದು ದೂರಿದರು. ಕಾಂಗ್ರೆಸ್​ನ ಸಿದ್ದರಾಮಯ್ಯರಿಗೆ ಒಬ್ಬ ಸಚಿವ ಕೊಲೆ ಬೆದರಿಕೆ ಹಾಕುತ್ತಾನೆ. ರಾಜ್ಯದ ಎಲ್ಲಾ ಕಾಂಗ್ರೆಸ್‌ ನಾಯಕರನ್ನು ನಾನು ತ೦ದು ಬಿಜೆಪಿಯವರ ಮುಂದೆ ನಿಲ್ಲಿಸುತ್ತೇನೆ. ತಾಕತ್ತಿದ್ದರೆ ಹೊಡೆದುಹಾಕಲಿ ಎಂದು ಸವಾಲು ಹಾಕಿದರು

Malenadu Today Shivamogga

READ | ಶಿವಮೊಗ್ಗ ಬಸ್​ಸ್ಟ್ಯಾಂಡ್​ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga #

#KarnatakaNews,Congress,Karnataka,karnataka bjp

ಮುಂದಿನ ಸುದ್ದಿ ಒದಿ

Leave a Comment