ಇನ್​ಸ್ಪೆಕ್ಟರ್​ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್‌ಐ ಗಳ ವರ್ಗಾವಣೆ

ಹಂಚಿಕೊಳ್ಳಿ
WhatsApp Facebook X Telegram

ಚುನಾವಣಾ ಆಯೋಗದ ಸೂಚನೆಯ ಪ್ರಕಾರ ಇದೀಗ ಶಿವಮೊಗ್ಗ ಜಿಲ್ಲೆಯ ಸಬ್‌ ಇನ್ಸೆಕ್ಟರ್‌ಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಹೊರ ಜಿಲ್ಲೆಯಿಂದ ನೇಮಕವಾಗಿದೆ.ದೊಡ್ಡಪೇಟೆ ಪಿಎಸ್ ಐ ಮಂಜಮ್ಮ ಹಾವೇರಿ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ನಿಯುಕ್ತಿ ಗೊಂಡಿದ್ದಾರೆ. ಕೋಟೆ ಪಿಎಸ್ ಐ ಕೃಷ್ಣನಾಯ್ಕ ಹಾವೇರಿ ಟೌನ್ ಪಿಎಸ್‌ ಐ ಆಗಿ ವರ್ಗಗೊಂಡಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯ ಕೆ.ವಸಂತ್‌ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಗೊಂಡಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮಿರಾಂಡಾ ಜೆ ಆರ್ ಎಫ್ ಬ್ಯಾಡಗಿ ಪೊಲೀಸ್ ಠಾಣೆಗೆ, ಸಂಚಾರ ಪಶ್ಚಿಮಪೊಲೀಸ್ ಠಾಣೆಯ ಶ್ರೀನಿವಾಸ್ ಹಾವೇರಿ ಜಿಲ್ಲೆ ಬಂಕಾಪುರ ಪೊಲೀಸ್ ಠಾಣೆಗೆ, ಭದ್ರಾವತಿ ಹಳೇನಗರ ಪೊಲೀಸ್ ಠಾಣೆಯ ಪಿಎಸ್‌ ಐ ಕವಿತ. ಹಿರೇಕೆರೂರು ಪೊಲೀಸ ಠಾಣೆಗೆ

Sakrebail elephant camp : ಬೆಂಗಳೂರು ಗಣೇಶ, ಮಣಿಕಂಠನನ್ನ ಬಿಟ್ಟು ಶಿವ,ರವಿಯನ್ನು ಕರೆದುಕೊಂಡು ಮಧ್ಯಪ್ರದೇಶಕ್ಕೆ ಹೊರಟ ಟೀಂ! ಸಕ್ರೆಬೈಲ್​ ಆನೆ ಬಿಡಾರದಲ್ಲಿ ನಡೆದಿದ್ದೇನು?

ಹೊಸಮನೆ ಪೊಲೀಸ್ ಠಾಣೆಯ ಶಾಂತಲ, ಸವಣೂರು ಪೊಲೀಸ್ ಠಾಣೆಗೆ, ಹೊಸನಗರ ತಾಲೂಕು ನಗರ ಪೊಲೀಸ್ ಠಾಣೆಯ ನಾಗರಾಜ್ ಟಿ.ಎಂ, ನ್ಯಾಮತಿ ಪೊಲೀಸ್ ಠಾಣೆಗೆ, ಸಾಗರ ಗ್ರಾಮಾಂತರಠಾಣೆಯ ಸುಜಾತಹಾನಗಲ್‌ ಪೊಲೀಸ್‌ ಠಾಣೆಗೆ, ಜೋಗ ಪಿಎಸ್ ನ ನಿರ್ಮಲ ರಾಣೇ ಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಶಿಕಾರಿಪುರಗ್ರಾಮಾಂತರ ಪೊಲೀಸ್ ಠಾಣೆಯ ರವಿಕುಮಾರ್ ಎ ರನ್ನ ಚನ್ನಗಿರಿ ಪೊಲೀಸ್ ಠಾಣೆಗೆ, ಗ್ರಾಮಾಂತರ ಠಾಣೆಯ ಶೋಭಾರಾಣಿ ಕೆ.ಎಸ್ ರನ್ನ ಮತ್ತು ಶಿರಾಳಕೊಪ್ಪದ ಪಿಎಸ್ ಐ ಪುಷ್ಪರನ್ನ ಹಾವೇರಿಜಿಲ್ಲೆಯ ಡಿಪಿಒ ಡಿಸಿಆರ್ ಬಿ ವಿಭಾಗಕ್ಕೆ ವರ್ಗಗೊಂಡರೆ ಸಿಇಎನ್ ಠಾಣೆಯ ಮಂಜುನಾಥ್ ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿ ಗೇಟ್ ಪಿಎಸ್ ಆಗಿ ನಿಯೋಜನೆಗೊಂಡಿದ್ದಾರೆ.ಶಿವಮೊಗ್ಗ ಜಿಲ್ಲಾ ಪೊಲೀಸ್‌ ಕಚೇರಿಯ ಡಿಸಿಆರ್ ಬಿಯ ಗೀತಾ ಮೊಗೇರ್ತಿ, ಚಿತ್ರದುರ್ಗ ಡಿಪಿಓ ಡಿಸಿಆರ್ ಬಿ. ವಿಭಾಗದ ಪಿಎಸ್ಐ ಆಗಿ, ಡಿಎಎಸ್ ನಲ್ಲಿದ್ದ ಸರ್ವ ಮಂಗಳಅವರನ್ನ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ, ಡಿಪಿಒ ಕಂಪ್ಯೂಟರ್ ವಿಭಾಗದಲ್ಲಿರುವ ಪುಷ್ಪಾವತಿಯರನ್ನ ಹಾವೇರಿ ಜಿಲ್ಲೆಯ ಮಹಿಳಾ ಪೊಲೀಸ್‌ ಠಾಣೆಗೆ

Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಆನವಟ್ಟಿಯ ರಾಜೂ ರೆಡ್ಡಿ ಬೆನ್ನೂರು ಅವರನ್ನ ಶಿವಮೊಗ್ಗ ತುಂಗ ನಗರ ಪೊಲೀಸ್ ಠಾಣೆಗೆ, ಸಾಗರ ಟೌನ್ ಪಿಎಸ್ ಐ ಸಾಗರ್ಕರ್ ಟಿ.ಡಿ.ಅವರನ್ನ ವಿನೋಬ ನಗರ ಪೊಲೀಸ್ ಠಾಣೆಗೆ, ಮಹಿಳಾ ಪೊಲೀಸ್ ಠಾಣೆಯ ಸುಮಂಗಳ ಗಿರೀಶ್ ಅವರನ್ನ ಗ್ರಾಮಾಂತರ ಪೊಲೀಸ್ ಠಾಣೆಗೆ, ತುಂಗ ನಗರ ಪೊಲೀಸ್ ಠಾಣೆಯ ಪಿಎಸ್ ಐ ಶಿವಪ್ರಸಾದ್ ಅವರನ್ನ ಆನವಟ್ಟಿ ಪಿಎಸ್‌ಐ ಆಗಿ, ಪೂರ್ವ ಸಂಚಾರಿ ಪೊಲೀಸ್ ಠಾಣೆಯ ತಿಮ್ಮಯ್ಯರನ್ನ ಶಿಕಾರಿಪುರ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ.

Suspected KFD : ಶಿವಮೊಗ್ಗ ಜಿಲ್ಲೆ ಹೊಸನಗರದಲ್ಲಿ ಶಂಕಿತ ಕೆಎಫ್​ಡಿ ಕೇಸ್​!? ಮುಂದಿನ 6 ವಾರಗಳು ಮಹತ್ವದ್ದು! ಜಿಲ್ಲಾ ಆರೋಗ್ಯ ಇಲಾಖೆಯಿಂದ ಮಹತ್ವದ ಮಾಹಿತಿ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor