ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾಲಿ ಮಾಡು ಲೈಫಲೀ.. ಹಾಡು ಹೇಳಿದ ತಹಶಿಲ್ದಾರ್ ಮತ್ತು ಕಮಿಷನರ್…ಸರ್ಕಾರಿ ಕಾರ್ಯಕ್ರಮದಲ್ಲಿ ಮಕ್ಕಳೆದುರು ಯಾರೇ ನೀನು ರೋಜಾ ಹೂವೆ ಎಂದರೆ..ಹೇಗೆ ?

ಭದ್ರಾವತಿ ನಗರದ ಕನಕ ಮಂಟಪದಲ್ಲಿ ನೆನ್ನೆ 74 ನೇ ರಣರಾಜ್ಯೋತ್ಸವವನ್ನು ಅದ್ದೂರಿಯಾಗಿಯೇ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಸಂಗಮೇಶ್ ಪಾಲ್ಗೊಂಡಿದ್ದರು.ಆದರೆ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಗರಸಭೆ ಸದಸ್ಯರೊಬ್ಬರ ಭರ್ತ್ ಡೇ ಸೆಲೆಬ್ರೇಷನ್ ಮಾಡಿದ್ದು, ತಹಶಿಲ್ದಾರ್ ಮತ್ತು ಕಮಿಷನರ್ ಹೆಜ್ಜೆ ಹಾಕಿ ಕುಣಿದಿದ್ದು, ಶಾಸಕರು ಚಪ್ಪಾಳೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.

Malenadu Today Shivamogga

ಗಣರಾಜ್ಯೋತ್ಸವದ ಹಿಂದಿನ ದಿನವೇ ವಾರ್ಡ್ ಸದಸ್ಯೆಯೊಬ್ಬರ ಹುಟ್ಟುಹಬ್ಬವಿತ್ತು. ಆದರೂ ಮಾರನೇ ದಿನ ಸರ್ಕಾರಿ ವೇದಿಕೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶಿಕ್ಷಕರು ಎಲ್ಲಾ ಅಧಿಕಾರಿಗಳ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದು ಸರಿಯೇ ಎಂದು ಸಾರ್ವಜನಿಕರು ಪ್ರಶ್ನಿಸತೊಡಗಿದ್ದಾರೆ.

Malenadu Today Shivamogga

ನಗರಸಭೆ ಸದಸ್ಯೆಯ ಹುಟ್ಟು ಹಬ್ಬವನ್ನು ವೇದಿಕೆಯಲ್ಲಿ  ಆಚರಿಸಿಕೊಂಡಿದ್ದನ್ನು ಕೂಡ ಸಮರ್ಥಿಸಿಕೊಳ್ಳಬಹುದಾಗಿದ್ರೂ, ಆ ವೇದಿಕೆಯಲ್ಲಿ ಮಕ್ಕಳೆದುರು ಸರ್ಕಾರಿ ಅಧಿಕಾರಿಗಳಿಬ್ಬರು ಹಾಡಿದ ಹಾಡು..ಯಾವ ಸಂದೇಶ ನೀಡುತ್ತದೆ ಎಂಬುದು ಚರ್ಚೆಗೆ ಗ್ರಾಸವಾಗಿದೆ. ಯಾರೇ ನೀನು.., ರೋಜಾ ಹೂವೇ.., ಯಾರೇ ನೀನು.., ಮಲ್ಲಿಗೆ ಹೂವೆ.., ಹೇಳೆ ಓ ಚೆಲುವೆ.., ಎಂದು ತಹಶಿಲ್ದಾರ್ ಮತ್ತು ಕಮಿಷನರ್ ಅಧ್ಬುತವಾಗಿ ಹಾಡಿದ್ದಾರೆ. ಅದೇ ಕಂಠದಲ್ಲಿ ದೇಶಭಕ್ತಿ ಗೀತೆಯನ್ನು ಹಾಡಿದ್ರೆ ಚೆನ್ನಾಗಿತ್ತು ಅಲ್ವೆ ಎಂದು ಬಿಜೆಪಿಗರು ಕಟುಕಿದ್ದಾರೆ. ತಾಲೂಕಿನ ಪ್ರೆಂಟ್ ಲೈನ್ ಅಧಿಕಾರಿಗಳೇ ಸಾರ್ವಜನಿಕವಾಗಿ ಈ ರೀತಿ ಹಾಡಿ ಕುಣಿದರೆ ಇದರಿಂದ ಸಮಾಜಕ್ಕೆ ಹೋಗುವ ಸಂದೇಶವಾದ್ರೂ ಏನು ಎಂಬುದು ಚರ್ಚೆಯಾಗುತ್ತಿರುವ ವಿಷಯವಾಗಿದೆ.

Malenadu Today Shivamogga

Leave a Comment