ಇದು ಶಿವಮೊಗ್ಗ ಜಿಲ್ಲೆ, ನಾವು ಎಲ್ಲದಕ್ಕೂ ರೆಡಿಯಿದ್ದೇವೆ, ಆರ್ಟಿಇ ಸಕಾಲ ಇದೆ, ಕಾನೂನಿನ ಮೂಲಕ ಹೋರಾಟ ಮಾಡಲಿ, ಆದರೆ ಅನಾವಶ್ಯಕ ಕಿರಿಕಿರಿ ಮಾಡಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ (karnataka state government employees association) ಅಧ್ಯಕ್ಷ ಷಡಾಕ್ಷರಿ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಸಹ ಓದಿ :ಹೊಸ ಪಿಂಚಣಿ ವ್ಯವಸ್ಥೆ ರದ್ದತಿ ಹೋರಾಟಕ್ಕೆ ಸರ್ಕಾರಿ ನೌಕರರ ಸಂಘ ರೆಡಿ! ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದೇನು? ಇಲ್ಲಿದೆ ವಿವರ
ಸಾಗರದಲ್ಲಿ ನಡೆದ ಸರ್ಕಾರಿ ನೌಕರರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಷಡಾಕ್ಷರಿ, ಒಂದು ಸಲ, ಎರಡು ಸಲ ಸುಮ್ಮನಿರಬಹುದು ಮೂರನೇ ಸಲ ಬಿಡುವ ಪ್ರಶ್ನೆಯಿಲ್ಲ. ನಾನು ಹೆದರುವುದಿಲ್ಲ, ಸೈಟು, ಮನೆ, ಕಾರು ಬಂಗಲೆ ನನ್ನಲ್ಲಿಲ್ಲ, ನಾನು ಕ್ಲೀನ್ ಹ್ಯಾಂಡ್ ನಾನ್ಯಾಕೆ ಹೆದರಬೇಕು ಎಂದ ಷಡಾಕ್ಷರಿ ಸರ್ಕಾರಿ ನೌಕರರಿಗಾಗಿ ನಾನು ಏನು ಬೇಕಾದರು ಮಾಡುತ್ತೇವೆ ಎಂದು ಎಚ್ಚರಿಸಿದರು.
ಇದನ್ನು ಸಹ ಓದಿ : ದೇವರ ಮುಂದೆ ಅಜ್ಜಿ ಮರ್ಡರ್/ ಕೇಳೋರೆ ಇಲ್ಲದ ಅನಾಥೆ ಸಾವಿಗೆ, ನ್ಯಾಯ ಕೊಡಿಸಿದ ಶಿವಮೊಗ್ಗ ಪೊಲೀಸ್/ EXCLUSIVE JP REPORT
ಸರ್ಕಾರಿ ನೌಕರರ ವಿಷಯದಲ್ಲಿ ನಾನಂತು ಬೆಂಬಲಕ್ಕೆ ನಿಲ್ಲುತ್ತೇವೆ. ಈ ವಿಚಾರದಲ್ಲಿ ಯಾರು ಬೆಂಬಲಕ್ಕೆ ನಿಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತು ಸರ್ಕಾರಿ ನೌಕರರ ಬೆಂಬಲಕ್ಕೆ ನಿಲ್ಲುತ್ತೇವೆ. ಇದರಲ್ಲಿ ಯಾವುದೇ ಪ್ರಶ್ನೆಗಳಲ್ಲಿಲ್ಲ. ಕಾನೂನಿನ ಮೂಲಕ ಹೋರಾಟ ಮಾಡಲು ನಮ್ಮ ಅಡಿಯಿಲ್ಲ. ಆದರೆ ಕಿರಿಕಿರಿ ಮಾಡಿದರೆ, ಅವರ ಜೀವನಕ್ಕೇನೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಸಿದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com