ಸಾಗರ ಟೌನ್​ನಲ್ಲಿ ನಡೆದ ಹಲ್ಲೆ ಯತ್ನ ಕೇಸ್​ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ

ಸಾಗರ ಟೌನ್​ನಲ್ಲಿ ನಡೆದಿರುವ ಹಲ್ಲೆ ಯತ್ನ ಕೇಸ್​ಗೆ ಸಂಬಂಧಿಸಿದಂತೆ, ಸಮೀರ್ ಕುಟುಂಬಸ್ಥರು ಸುದ್ದಿಗೋಷ್ಟಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಮೀರ್ ಸಹೋದರಿ, ಘಟನೆಯಲ್ಲಿ ನನ್ನಣ್ಣನದ್ದು ಏನೂ ತಪ್ಪಿಲ್ಲ, ಆತ ನನಗೆ ಚುಡಾಯಿಸುತ್ತಿದ್ದ. ಆ ವಿಷಯವನ್ನು ನಾನು ಮನೆಯಲ್ಲಿ ಹೇಳಿದ್ದೆ. ಈ ಕಾರಣಕ್ಕೆ ಆತನಿಗೆ ಹೆದರಿಸಲು ಹೋಗಿರಬಹುದು. ಆದರೆ ನ್ಯೂಸ್​ನಲ್ಲಿ ಏನೇನೋ ಬರುತ್ತಿದೆ. ಅದನ್ನ ನೋಡಿಕೊಂಡು ಮಾದ್ಯಮದ ಮುಂದೆ ಬಂದಿದ್ದೇವೆ. ನನ್ನಣ್ಣ ಏನೂ ಸಹ ಮಾಡಿಲ್ಲ, ಆತನನ್ನು ಬಿಟ್ಟುಬಿಡಿ, ನಾವು ಎಲ್ಲಾದರೂ ಹೋಗಿ ಚೆನ್ನಾಗಿ ಇರುತ್ತೇವೆ ಎಂದು ಸಹೋದರಿ ಕಣ್ಣೀರಿಟ್ಟಿದ್ಧಾಳೆ. 

ಸಾಗರ ಟೌನ್​ನಲ್ಲಿ ಹಲ್ಲೆಗೆ ಯತ್ನ ಕೇಸ್​/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ

ಇನ್ನೂ ಸುನೀಲ್​ ತನ್ನನ್ನ ಚುಡಾಯಿಸುತ್ತಿದ್ದ, ಆತ ಕಾಲೇಜು ಬಳಿ ಬಂದು ಚುಡಾಯಿಸುತ್ತಿದ್ದ. ಆತ ಚುಡಾಯಿಸುತ್ತಿದ್ದ ಎಂದೇ ಆತನಿಗೆ ಗೊತ್ತಾಗಬಾರದು ಎಂದು ಚಪ್ಲಿ ಬದಲಾಯಿಸಿಕೊಂಡು ಹೋಗುತ್ತಿದ್ದೆ. ಆ ಬಗ್ಗೆ ಮನೆಯಲ್ಲಿ ಹೇಳಿದ್ದೆ. ಹಿಜಾಬ್ ಸಮಸ್ಯೆ ಆದ ಸಂದರ್ಭದಲ್ಲಿ ಆತ ಚುಡಾಯಿಸುತ್ತಿದ್ದ ಎಂದು ಯುವತಿ ಆರೋಪಿಸಿದ್ದಾರೆ. . 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Leave a Comment