BREKING NEWS/ ಇವತ್ತು ದಾವಣೆಗೆರೆ/7 ನೇ ತಾರೀಖು ಶಿವಮೊಗ್ಗ ಮತ್ತು ಭದ್ರಾವತಿಗೆ ಬರ್ತಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ/ ಕಾರಣವೇನು ಗೊತ್ತಾ? ಇಲ್ಲಿದೆ ವಿವರ

Malenadu Today

ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ತಮ್ಮ 125 ನೇ ಸಿನಿಮಾ ವೇದದ ಅದ್ದೂರಿ ಯಶಸ್ವಿನ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ಜಿಲ್ಲೆಗಳಲ್ಲಿ  ಸಂಭ್ರಮಾಚರಣೆ ಹಮ್ಮಿಕೊಳ್ಳುತ್ತಿದ್ದಾರೆ. 

ಇದನ್ನು ಸಹ ಓದಿ : ಆಪ್ತ ಪ್ರಸನ್ನ ಭಟ್​ರ ಮನೆಗೆ ಸಂಸದ ರಾಘವೇಂದ್ರರ ಭೇಟಿ/ ಕುಟುಂಬಕ್ಕೆ ಸಾಂತ್ವನ

ಈ ನಿಟ್ಟಿನಲ್ಲಿ ಇವತ್ತು ಅಂದರೆ, ಜನವರಿ 5 ರಂದು ಬೆಳಗ್ಗೆ 10 ಗಂಟೆಗೆ ದಾವಣಗೆರೆಯಲ್ಲಿ  ಶಿವಸಂಭ್ರಮ ಕಾರ್ಯಕ್ರಮ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಡಾ. ಶಿವರಾಜ್ ಕುಮಾರ್ ಮತ್ತು ನಿರ್ಮಾಪಕಿ ಗೀತಾ ಶಿವಕುಮಾರ್, ನಿರ್ದೇಶಕ ಎ. ಹರ್ಷ ಹಾಗೂ ಚಿತ್ರ ತಂಡದವರು ಆಗಮಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ, ಪೂಜೆ ಸಲ್ಲಿಸಿ ಅಲ್ಲಿಂದ ವೇದ ಸಂಭ್ರಮದಲ್ಲಿ ಶಿವಣ್ಣ ಪಾಲ್ಗೊಳ್ಳಲಿದ್ದಾರೆ. 

ಇದನ್ನು ಸಹ ಓದಿ : ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಚುನಾವಣೆಗೆ ದಿನಾಂಕ ನಿಗದಿ/ ವಿವರ ಇಲ್ಲಿದೆ

ಏಳಕ್ಕೆ ಶಿವಮೊಗ್ಗ /ಭದ್ರಾವತಿ

ಇನ್ನೂ ಇದೇ ಏಳನೇ ತಾರೀಖು ಶಿವಣ್ಣ ಮತ್ತು ವೇದ ಸಿನಿಮಾ ತಂಡ ಶಿವಮೊಗ್ಗ ಮತ್ತು ಭದ್ರಾವತಿಗೆ ಭೇಟಿಕೊಡಲಿದೆ. ಮಧ್ಯಾಗ್ನ ಒಂದುವರೆಗೆ ಶಿವಮೊಗ್ಗಕ್ಕೆ ಭೇಟಿಕೊಡಲಿರುವ ತಂಡ ತದನಂತರ ಭದ್ರಾವತಿಗೆ ಭೇಟಿಕೊಡಲಿದೆ. ಸದ್ಯ ವೇದ ಸಿನಿಮಾದಲ್ಲಿನ ಸಕ್ಸಸ್​ ಹಿನ್ನೆಲೆಯಲ್ಲಿ ಅಭಿಮಾನಿಗಳು ಶಿವಣ್ಣರ ಆಗಮನಕ್ಕಾಗಿ ಕಾಯುತ್ತಿದ್ದಾರೆ. 

ಇದನ್ನು ಸಹ ಓದಿ : BREAKING NEWS : ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಚುನಾವಣೆಗೆ, ಕ್ಷೇತ್ರಗಳು ಫಿಕ್ಸ್​/ ಎಷ್ಟು ಕ್ಷೇತ್ರಗಳಿವೆ, ಯಾವ್ಯಾವ ಊರುಗಳು ವ್ಯಾಪ್ತಿಯಲ್ಲಿ ಬರುತ್ತವೆ? ಕಂಪ್ಲೀಟ್​ ವಿವರ ಇಲ್ಲಿದೆ ಓದಿ

ಇದನ್ನು ಸಹ ಓದಿ : BREAKING : ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪಟ್ಟಿ ಪ್ರಕಟ/ ಯಾವ್ಯಾವ ತಾಲ್ಲೂಕಿನಲ್ಲಿ ಎಷ್ಟೆಷ್ಟು ಕ್ಷೇತ್ರಗಳಿವೆ ವಿವರ ಇಲ್ಲಿದೆ ಓದಿ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Share This Article