ಕೊಡಗಿನ ಹೋಮ್​ಸ್ಟೇ ನಲ್ಲಿ ವಾಸ್ತವ್ಯ ಹೂಡಿದ್ದ ಶಂಕಿತ ಶಾರೀಖ್​

ಹಂಚಿಕೊಳ್ಳಿ
WhatsApp Facebook X Telegram

ಮಂಗಳೂರಿನಲ್ಲಿ ಕುಕ್ಕರ್ ವಿಸ್ಫೊಟಕವನ್ನು (mangalore blast) ಸ್ಫೋಟಿಸಿದ್ದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಶಾರೀಖ್ ಕೊಡಗಿನಲ್ಲಿಯು ಓಡಾಡಿದ್ದ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಎನ್ನಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ. 

ಇದನ್ನು ಸಹ ಓದಿ : ಹಂದಿ ಅಣ್ಣಿ ಹತ್ಯೆಯ ಪ್ರಮುಖ ಆರೋಪಿ ಕಾಡಾ ಕಾರ್ತಿಗೆ ಆರು ತಿಂಗಳು ಶಿಕ್ಷೆ/ 2 ಸಾವಿರ ರೂಪಾಯಿ ದಂಡ

ಮಂಗಳೂರಿನಲ್ಲಿ ಕೃತ್ಯವೆಸಗುವುದಕ್ಕೂ ಮೊದಲು ಆತ ಕೊಡಗು ಜಿಲ್ಲೆಯ ಹೋಂಸ್ಟೇಗೆ ಹೋಗಿದ್ದನ್ನಂತೆ.  ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA)  ಅಧಿಕಾರಿಗಳು ಹಾಗೂ ಮಂಗಳೂರು  ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪರಿಶೀಲನೆ ನಡೆಸಿದ್ದಾರೆ.  ಹೋಂಸ್ಟೇ ಮಾಲೀಕರನ್ನು ವಿಚಾರಣೆ ನಡೆಸಿದಾಗ ಶಾರೀಕ್ ಹಾಗೂ ಅವನೊಂದಿಗೆ ಸಹಚರರು ಹಾಗೂ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor