ಶಿವಮೊಗ್ಗ : ಕೈ ಕೊಡ್ತು 1.80 ಲಕ್ಷದ ಲ್ಯಾಪ್​ಟಾಪ್​, ಕಂಪನಿಗೆ ಬಡ್ಡಿ ಸಮೇತ ಹಣ ವಾಪಸ್ ಕೊಡುವಂತೆ ಕೋರ್ಟ್ ಆದೇಶ 

ಹಂಚಿಕೊಳ್ಳಿ
WhatsApp Facebook X Telegram
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ
ಗ್ರಾಹಕ ನ್ಯಾಯಾಲಯ ಸಾಂಧರ್ಭಿಕ ಚಿತ್ರ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ದೋಷಯುಕ್ತ ಲ್ಯಾಪ್‌ಟಾಪ್ ಮಾರಾಟ ಮಾಡಿ, ಅದನ್ನು ಸರಿಪಡಿಸದೆ ಸೇವಾನ್ಯೂನ್ಯತೆ ಎಸಗಿದ ಬೆಂಗಳೂರಿನ ಮೆ|| ಆಪಲ್ ಇಂಡಿಯಾ ಪ್ರೈ.ಲಿ. ಹಾಗೂ ಸೇವಾ ಕೇಂದ್ರಗಳಿಗೆ ವಾರ್ಷಿಕ ಶೇ. 7ರ ಬಡ್ಡಿಯೊಂದಿಗೆ ಹಣ ಮರುಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಶಿವಮೊಗ್ಗ ತಾಲೂಕು ಹರಿಗೆ ಗ್ರಾಮದ ಸರಬಜಿತ್ ಕೌರ್ ಎಂಬುವವರು 1.80 ಲಕ್ಷ ರೂ. ನೀಡಿ ಮ್ಯಾಕ್‌ಬುಕ್ ಪ್ರೋ (MacBook Pro) ಖರೀದಿಸಿದ್ದರು. ಕೆಲವೇ ತಿಂಗಳಲ್ಲಿ ಲ್ಯಾಪ್‌ಟಾಪ್‌ನಲ್ಲಿ ದೋಷ ಕಾಣಿಸಿಕೊಂಡಿತ್ತು. ಶಿವಮೊಗ್ಗ, ಹುಬ್ಬಳ್ಳಿ ಹಾಗೂ ಮೈಸೂರಿನ ಅಧಿಕೃತ ಸೇವಾ ಕೇಂದ್ರಗಳಿಗೆ ಅಲೆದಾಡಿದರೂ ಕೇವಲ ಕೀಬೋರ್ಡ್ ಬದಲಿಸಿ, ಉಳಿದ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಲಾಗಿತ್ತು.

ಈ ಕುರಿತು ಗ್ರಾಹಕರು ಸಲ್ಲಿಸಿದ್ದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಮತ್ತು ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠ, ಸೇವಾನ್ಯೂನ್ಯತೆ ಸಾಬೀತಾದ ಹಿನ್ನೆಲೆಯಲ್ಲಿ ಮಹತ್ವದ ತೀರ್ಪು ನೀಡಿದೆ.

ಲ್ಯಾಪ್‌ಟಾಪ್ ಮೌಲ್ಯದಲ್ಲಿ ಜಿಎಸ್‌ಟಿ ಕಡಿತಗೊಳಿಸಿ ಉಳಿದ 1,52,542.37 ರೂ.ಗಳನ್ನು ಜುಲೈ 10, 2025 ರಿಂದ ಅನ್ವಯವಾಗುವಂತೆ ಶೇ. 7ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಹಿಂದಿರುಗಿಸಬೇಕು. ಜೊತೆಗೆ ಮಾನಸಿಕ ಹಿಂಸೆ ಹಾಗೂ ದೂರಿನ ವೆಚ್ಚವಾಗಿ ಒಟ್ಟು 35,000 ರೂ. ಪರಿಹಾರ ನೀಡಬೇಕು. ತಪ್ಪಿದಲ್ಲಿ ವಾರ್ಷಿಕ ಶೇ. 10ರಂತೆ ಬಡ್ಡಿ ಪಾವತಿಸಬೇಕು ಎಂದು ಆಯೋಗ ಎಚ್ಚರಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor