ಸಿನಿಮಾ ನೋಟುಗಳನ್ನು ಎಟಿಎಂಗೆ ಜಮಾ ಮಾಡಲು ಯತ್ನ; ಇಬ್ಬರ ಬಂಧನ, ₹15.60 ಲಕ್ಷ ಮೌಲ್ಯದ ನೋಟು ವಶ

ಹಂಚಿಕೊಳ್ಳಿ
WhatsApp Facebook X Telegram
Ranebennur ATM Deposit Case Two Arrested, Movie Prop Notes Worth Rs 15.60 Lakh Seized
Ranebennur ATM Deposit Case Two Arrested, Movie Prop Notes Worth Rs 15.60 Lakh Seized

ಮಲೆನಾಡು ಟುಡೆ ಸುದ್ದಿ / ಹಾವೇರಿ / ಸಿನಿಮಾ ಶೂಟಿಂಗ್​ನಲ್ಲಿ ಬಳಸುವ ನೋಟುಗಳನ್ನು ಎಟಿಎಂನ ಕ್ಯಾಶ್ ಡೆಪಾಸಿಟ್ ಯಂತ್ರದ ಮೂಲಕ ಠೇವಣಿ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಣೇಬೆನ್ನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ₹15.60 ಲಕ್ಷ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನವೆಂಬರ್ 14ರಂದು ರಾಣೇಬೆನ್ನೂರಿನ ಐಸಿಐಸಿಐ ಬ್ಯಾಂಕ್‌ನ ಕ್ಯಾಶ್ ಡೆಪಾಸಿಟ್ ಯಂತ್ರದಲ್ಲಿ ₹38 ಸಾವಿರ ಮುಖಬೆಲೆಯ ಒಟ್ಟು 76 ನೋಟುಗಳನ್ನು ಠೇವಣಿ ಮಾಡಲಾಗಿತ್ತು. ಪರಿಶೀಲನೆ ವೇಳೆ ಅವು ಅಸಲಿ ನೋಟುಗಳಲ್ಲ ಎಂಬುದು ತಿಳಿದುಬಂದಿತ್ತು. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕ ರಾಕೇಶ ಕರಿದ್ಯಾವಣ್ಣನವರ ಅವರು ರಾಣೇಬೆನ್ನೂರು ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಬ್ಯಾಂಕ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಈ ವೇಳೆ ಮೇಡೇರಿ ಗ್ರಾಮದ ಸುರೇಶ ಬಿಲ್ಲಾಳ ಎಂಬಾತ ಕ್ಯಾಶ್ ಡೆಪಾಸಿಟ್ ಯಂತ್ರದಲ್ಲಿ ನೋಟುಗಳನ್ನು ಠೇವಣಿ ಮಾಡಿರುವುದು ಗೊತ್ತಾಗಿದೆ.ಸುರೇಶನನ್ನು ವಿಚಾರಣೆಗೆ ಒಳಪಡಿಸಿದಾಗ ಮಾಲತೇಶ ಎಂಬಾತ ತನಗೆ ನೋಟುಗಳನ್ನು ಕೊಡಿಸಿರುವುದಾಗಿ ತಿಳಿಸಿದ್ದಾನೆ.

ವಶಪಡಿಸಿಕೊಂಡ ನೋಟುಗಳ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂಬುದರ ಬದಲಿಗೆ ಚಿಲ್ಟನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿಸಲಾಗಿದೆ. ಅಲ್ಲದೆ, ಸಿನಿಮಾ ಚಿತ್ರೀಕರಣದ ಉದ್ದೇಶಕ್ಕೆ ಮಾತ್ರ ಬಳಸುವ ನೋಟುಗಳು ಎಂಬ ಉಲ್ಲೇಖವೂ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor