ಹಳೆ ಸೇತುವೆ ಮರುನಿರ್ಮಾಣ: ಪರ್ಯಾಯ ಸಂಚಾರ ಮಾರ್ಗಕ್ಕಾಗಿ ಪರಿಶೀಲನೆ! ಸ್ಪಾಟ್​ ವಿಸಿಟ್​ ಮಾಡಿದ ಎಸ್‌ಪಿ

ಹಂಚಿಕೊಳ್ಳಿ
WhatsApp Facebook X Telegram
Shivamogga Old Tunga Bridge Reconstruction SP Inspects Alternative Traffic Routes
Shivamogga Old Tunga Bridge Reconstruction SP Inspects Alternative Traffic Routes

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಹಳೆ ಸೇತುವೆಯನ್ನು ತೆರವುಗೊಳಿಸಿ ಮರುನಿರ್ಮಾಣ ಮಾಡುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಮಾರ್ಗಗಳ ವ್ಯವಸ್ಥೆ ಕಲ್ಪಿಸುವ ಸಂಬಂಧ ಎಸ್​ಪಿ ನಿಖಿಲ್ ಬಿ ನಿನ್ನೆ ದಿನ ಸ್ಥಳ ಪರಿಶೀಲನೆ ನಡೆಸಿದರು. ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯ ಜೊತೆಗೆ ಹೊಳೆ ಬಸ್​ ಸ್ಟಾಪ್​ನಿಂದ ವಿದ್ಯಾನಗರದವರೆಗೂ ಓಡಾಡಿದ ಎಸ್​ಪಿ, ಪ್ರತಿ ಸಂಪರ್ಕ ದಾರಿಯನ್ನು ಖುದ್ದು ಪರಿಶೀಲಿಸಿದರು. ಅಲ್ಲದೆ ಪರ್ಯಾಯ ಮಾರ್ಗ ಹೇಗೆ ಕಲ್ಪಿಸಬಹುದು ಎಂದು ಸ್ತಳದಲ್ಲಿಯೇ ವಿಚಾರಿಸಿದರು.

ಇನ್ನೊಂದೆಡೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ತಮ್ಮ ಪರಿಶೀಲನೆಯನ್ನ ಆರಂಭಿಸಿದ ಎಸ್​ಪಿ, ಓ.ಟಿ. ರಸ್ತೆ, ಸಂದೇಶ್ ಮೋಟಾರ್ ಸರ್ಕಲ್, ಬೈಪಾಸ್ ರಸ್ತೆ ಹಾಗೂ ಎಂ.ಆರ್.ಎಸ್. ಸರ್ಕಲ್‌ ನಲ್ಲಿ ಸಂಚಾರ ಮಾರ್ಗಗಳ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು.

ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಂಚಾರ ಪೊಲೀಸ್ ವೃತ್ತ ನಿರೀಕ್ಷಕ ದೇವರಾಜ್, ಪೊಲೀಸ್ ಉಪನಿರೀಕ್ಷಕಿ ಸ್ವಪ್ನಾ ಎಲ್. ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor