ಎಸ್ಟೇಟ್ ಮಾಲೀಕರ ಮನೆ ಮೇಲೆ ಗುಂಡಿನ ದಾಳಿ; ಕೊಲೆ ಯತ್ನದ ಆರೋಪ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಸುದ್ದಿಯ ಸ್ಥಳ: Chikkamagaluru, Karnataka

ಮಲೆನಾಡು ಟುಡೆ ಸುದ್ದಿ / ಚಿಕ್ಕಮಗಳೂರು / ಶಿಕಾರಿಗೆ ಬಂದವರಂತೆ ನಟಿಸಿ ಎಸ್ಟೇಟ್ ಮಾಲೀಕರ ಮನೆಯ ಮೇಲೆ ದುಷ್ಕರ್ಮಿಗಳ ತಂಡವೊಂದು ಗುಂಡಿನ ದಾಳಿ ನಡೆಸಿದ ಘಟನೆ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ. ಮನೆಯತ್ತ 3 ಸುತ್ತು ಗುಂಡು ಹಾರಿಸಿರುವ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮುತ್ತಿಗೆಪುರ ಗ್ರಾಮದ ಎಸ್ಟೇಟ್ ಮಾಲೀಕ ವಿಂದನ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಸುಮಾರು 5ರಿಂದ 6 ಮಂದಿ ದುಷ್ಕರ್ಮಿಗಳು ಬಂದೂಕುಗಳೊಂದಿಗೆ ಮನೆಯ ಸಮೀಪಕ್ಕೆ ಬಂದಿದ್ದು, ಶಿಕಾರಿಗಳಂತೆ ಕಾಣಿಸಿಕೊಂಡು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಗುಂಡಿನ ದಾಳಿಯಿಂದ ಮನೆಯ ಕಿಟಕಿ ಹಾಗೂ ಗೋಡೆಗಳಿಗೆ ಹಾನಿಯಾಗಿದೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯಲ್ಲಿದ್ದವರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.ದುಷ್ಕರ್ಮಿಗಳು ಬಂದೂಕುಗಳೊಂದಿಗೆ ಮನೆಯತ್ತ ಬರುತ್ತಿದ್ದಾಗ ಸಿಸಿ ಕ್ಯಾಮೆರಾದಿಂದ ಅಲರ್ಟ್ ಸಿಗ್ನಲ್ ಬಂದಿತ್ತು. ಅಲ್ಲದೆ, ಆರೋಪಿಗಳ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ತಿಳಿದುಬಂದಿದೆ.

ದಾಳಿಯ ಹಿಂದೆ ಹಳೆಯ ವೈಷಮ್ಯವಿದ್ದು, ತಮ್ಮನ್ನು ಕೊಲೆ ಮಾಡುವ ಉದ್ದೇಶದಿಂದಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಎಸ್ಟೇಟ್ ಮಾಲೀಕ ವಿಂದನ್ ಆರೋಪಿಸಿದ್ದಾರೆ.ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor