ಶಿವಮೊಗ್ಗ : ಯುವತಿಯರೇ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಅಪ್ಲೋಡ್​​ ಮಾಡುವ ಮುನ್ನ ಎಚ್ಚರ : ಒಮ್ಮೊಮ್ಮೆ ಹೀಗೂ ಆಗುತ್ತೇ

ಹಂಚಿಕೊಳ್ಳಿ
WhatsApp Facebook X Telegram
CEN police station ಶಿವಮೊಗ್ಗ
CEN police station ಶಿವಮೊಗ್ಗ

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಇತ್ತೀಚಿನ ಯವಜನತೆ ಸಾಮಾಜಿಕ ಜಾಲತಾಣಕ್ಕೆ ಒಗ್ಗಿ ಹೋಗಿದ್ದಾರೆ. ಪೇಸ್​​​ಬುಕ್​​ ಇನ್ಸ್ಟಾಗ್ರಾಮ್​​​ ನೋಡುತ್ತಾ ರೀಲ್ಸ್​ ಮಾಡುತ್ತ ಟೈಮ್​ ಪಾಸ್​ ಮಾಡ್ತಿದ್ದಾರೆ. ಅದರಲ್ಲೂ ಕೆಲವರು ಎರಡ್ಮೂರು ಫೇಕ್​  ಇನ್ಸ್ಟಾಗ್ರಾಮ್ ಅಕೌಂಟ್​​​ ಮಾಡಿಕೊಂಡು ಬೇರೆಯವರನ್ನು ಯಾಮಾರ್ಸ್ತಾ ಇರ್ತಾರೆ. ಆದರೆ  ಶಿವಮೊಗ್ಗದಲ್ಲೊಂದು ನಡೆದ ಘಟನೆಯಲ್ಲಿ​​ ಕಿಡಿಗೇಡಿಗಳು ಪೇಕ್​ ಅಕೌಂಟ್​​ ಒಂದನ್ನು ತೆರೆದು ಅದಕ್ಕೆ ಯುವತಿಯ ಪೋಟೋ ಗಳನ್ನು ಅಪ್ಲೋಡ್​ ಮಾಡಿ ಅದಕ್ಕೆ ಕಾಲ್​​​ ಗರ್ಲ್​ ಶಿವಮೊಗ್ಗ ಎಂಬ ಹೆಸರಿಟ್ಟು ಗೌರವಕ್ಕೆ ದಕ್ಕೆ ತಂದಿರುವ ಘಟನೆ ನಡೆದಿದೆ.

ಹೌದು ಶಿವಮೊಗ್ಗದ ಯುವತಿಯೊಬ್ಬರು ಹೀಗೆ ಇನ್ಸ್ಟಾಗ್ರಾಮ್​​​ ನೊಡ್ತಿದ್ದಾಗ callgirl_shivamogga ಎಂಬ ಇನ್ಸ್ಟಾಗ್ರಾಮ್​​ ಖಾತೆ ಕಾಣಿಸಿದೆ. ಅದನ್ನು ನೋಡಿದ ಕೂಡಲೇ ಯುವತಿಗೆ ಒಮ್ಮೆ ದಿಗಿಲು ಬಡಿದಂತಾಗಿದೆ. ಏಕೆಂದರೆ ಆರೋಪಿಗಳು ಯುವತಿಯ ಪೋಟೊವನ್ನು ಯಾವುದೋ ಸಾಮಾಜಿಕ ಜಾಲತಾಣದಿಂದ ಕದ್ದು ಆ ಡಿಪಿ ಗೆ ಯವತಿಯ ಪೋಟೋವನ್ನ ಬಳಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಅಷ್ಟೇ ಅಲ್ಲದೆ ಯುವತಿ ಪಿಚಿತ ಯುವರೊಂದಿಗೆ ತೆಗೆಸಿಕೊಮಡಿದ್ದ ಪೋಟೋವನ್ನು ಸಹ ಯವತಿಯ ಸಂಬಂಧಿಕರಿಗೆ ಕಳುಹಿಸಿ. ನಂತರ ಯುವತಿಗೆ ಅಶ್ಲೀಲವಾಗಿ ಮೆಸೇಜ್​ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ,.  ಈ ಹಿನ್ನೆಲೇ ಶಿವಮೊಗ್ಗದ ಸಿ ಇ ಎನ್ ಪೊಲೀಸ್​ ಠಾಣೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor