ಶಿವಮೊಗ್ಗದ ಸೋಗಾನೆಯಲ್ಲಿರುವ ಸೆಂಟ್ರಲ್​ ಜೈಲಲ್ಲಿ ಹೀಗೊಂದು ಘಟನೆ !ಈ ಹಿಂದೆ ನಡೆದಿರಲಿಲ್ಲ!

ಹಂಚಿಕೊಳ್ಳಿ
WhatsApp Facebook X Telegram
Drugs Found in Snacks Shivamogga Central Jail Unbelievable Mobile Phone shivamogga central jail
Drugs Found in Snacks Shivamogga Jail Scandal Shivamogga Central Jail shivamogga central jail old image

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಸೋಗಾನೆಯಲ್ಲಿನ ಶಿವಮೊಗ್ಗ ಸೆಂಟ್ರಲ್ ಜೈಲ್ ಆವರಣದ ಬಳಿ ನಿರ್ಮಾಣ ಆಗುತ್ತಿರುವ ಹೈ ಸೆಕ್ಯುರಿಟಿ ಜೈಲಿನ ಕಚೇರಿಯ ಸಿಸಿಟಿವಿ ಹಾರ್ಡ್ ಡಿಸ್ಕ್ ಕಳವಾಗಿದೆ. ಈ ಸಂಬಂಧ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಕಾಂತ್ ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೋಗಾನೆಯಲ್ಲಿ ನಡೆಯುತ್ತಿರುವ ಹೈ ಸೆಕ್ಯುರಿಟಿ ಜೈಲು ನಿರ್ಮಾಣ ಕಾಮಗಾರಿಯ ವಿಚಾರವಾಗಿ, ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಇತ್ತೀಚೆಗೆ ಸ್ಪಾಟ್ ವಿಸಿಟ್ ಮಾಡಿದ್ದರು. ಈ ವೇಳೆ ಕಚೇರಿಯಲ್ಲಿದ್ದ ಹಾರ್ಡ್ ಡಿಸ್ಕ್ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ.25 ಸಾವಿರ ಮೌಲ್ಯದ ಹಾರ್ಡ್​ ಡಿಸ್ಕ್​ನ್ನ ಜೈಲು ನಿರ್ಮಾಣ ಕಾಮಗಾರಿಯಲ್ಲಿನ ಕಳಪೆ ಗುಣಮಟ್ಟ ಹಾಗೂ ಲೋಪದೋಷಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಮರೆಮಾಚುವ ಉದ್ದೇಶದಿಂದಲೇ ಕಳುವ ಮಾಡಿರುವ ಸಾಧ್ಯತೆ ಇದೆ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಕಾಂತ್ ದೂರಿನಲ್ಲಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor