ಸುದ್ದಿಯ ಸ್ಥಳ: Sagara, Shivamogga, Karnataka · Bhadravati, Shivamogga, Karnataka · Thirthahalli, Shivamogga, Karnataka
ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದ ವಿವಿಧ ನಿಗಮ ಮತ್ತು ಮಂಡಳಿಗಳಿಗೆ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಕ ಮಾಡಿರುವ ಪಟ್ಟಿ ಬಿಡುಗಡೆಯಾಗಿದ್ದು, ಶಿವಮೊಗ್ಗ ಜಿಲ್ಲೆಯ 10 ಮಂದಿಗೆ ಅವಕಾಶ ದೊರೆತಿದೆ. ಶಿವಮೊಗ್ಗ, ಸಾಗರ, ತೀರ್ಥಹಳ್ಳಿ ಹಾಗೂ ಭದ್ರಾವತಿ ಭಾಗದ ಮುಖಂಡರಿಗೆ ಅವಕಾಶ ದೊರೆತಿದೆ.
ನೇಮಕಾತಿ ಪಟ್ಟಿಯ ಪ್ರಕಾರ, ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಸದಸ್ಯರಾಗಿ ಟಿ.ಎಚ್. ಹಾಲೇಶಪ್ಪ ಅವರನ್ನು ನೇಮಕ ಮಾಡಲಾಗಿದೆ. ಮಂಗಳೂರು ವಿದ್ಯುತ್ ಸರಬರಾಜು ನಿಗಮದ ನಿರ್ದೇಶಕರಾಗಿ ಮೊಹಮ್ಮದ್ ರಜೀಕ್ ಹಾಗೂ ಗುತ್ಯಪ್ಪ ಅವರಿಗೆ ಅವಕಾಶ ದೊರೆತಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಗೆ ಗಣಪತಿ ಹುಲ್ಲಿಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಕರ್ನಾಟಕ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆಗೆ ಜಿಲ್ಲೆಯ 3 ಮಂದಿಗೆ ಅವಕಾಶ ನೀಡಲಾಗಿದೆ. ಸಾಗರದ ನಿಂಗಪ್ಪ ಎಸ್., ಶಿವಮೊಗ್ಗದ ಆರೀಫ್ ಉಲ್ಲಾ ಹಾಗೂ ತೀರ್ಥಹಳ್ಳಿಯ ಕೆಸ್ತೂರು ಮಂಜುನಾಥ್ ಅವರನ್ನು ಕಾರ್ಯಪಡೆಗೆ ನೇಮಕ ಮಾಡಲಾಗಿದೆ.
ಬಂಜಾರ ಅಭಿವೃದ್ಧಿ ನಿಗಮಕ್ಕೆ ಶಿವಮೊಗ್ಗದ ಗೀತಾ ಅವರನ್ನು ಆಯ್ಕೆ ಮಾಡಲಾಗಿದೆ. ಮಲೆನಾಡು ಅಭಿವೃದ್ಧಿ ಮಂಡಳಿಗೆ ಭದ್ರಾವತಿಯ ಮಂಜುನಾಥ ಕದಿರೇಶಪ್ಪ ಅವರಿಗೆ ಅವಕಾಶ ದೊರೆತಿದೆ. ಬಸವಕಲ್ಯಾಣ ಅಭಿವೃದ್ಧಿ ಮಂಡಳಿಗೆ ಗಿರೀಶ್ ಎಚ್.ಪಿ. ಅವರನ್ನು ನೇಮಕ ಮಾಡಲಾಗಿದೆ.
ಈ ಬಾರಿ ನೇಮಕಗೊಂಡವರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಹಾಗೂ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಬೆಂಬಲಿಗರಿಗೆ ಅವಕಾಶ ದೊರೆತಿದೆ ಎನ್ನಲಾಗಿದೆ.
ಈ ಹಿಂದೆ ಶಿವಮೊಗ್ಗ ಜಿಲ್ಲೆಯಿಂದ ಏಕಕಾಲದಲ್ಲಿ ಇಷ್ಟೊಂದು ಸಂಖ್ಯೆಯ ಮುಖಂಡರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಅವಕಾಶ ದೊರೆತಿರಲಿಲ್ಲ ಎಂದು ಹೇಳಲಾಗಿದೆ. ಈ ಬಾರಿ ಜಿಲ್ಲೆಯ 10 ಮಂದಿಗೆ ವಿವಿಧ ನಿಗಮ ಮತ್ತು ಮಂಡಳಿಗಳಲ್ಲಿ ಸ್ಥಾನ ನೀಡಿರುವುದು ಗಮನ ಸೆಳೆದಿದೆ.
