ರೈಸ್​ ಮಿಲ್​ನಲ್ಲಿ ರೇಷನ್​ ಅಕ್ಕಿಗೆ ನೈಸ್ ಪಾಲಿಶ್! ​ಕೆ.ಜಿ.ಗೆ ₹150 ರೂಪಾಯಿವರೆಗೂ ಮಾರಾಟ! ಏನಿದು?

ಹಂಚಿಕೊಳ್ಳಿ
WhatsApp Facebook X Telegram
Shivamogga JD(S) Alleges Illegal Ration Rice Trade, Demands Crackdown on Black Market
Shivamogga JD(S) Alleges Illegal Ration Rice Trade, Demands Crackdown on Black Market

ಸುದ್ದಿಯ ಸ್ಥಳ: Shivamogga district, Karnataka

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅಕ್ಕಿ ರೇಟು ಜಾಸ್ತಿಯಾಗುತ್ತಿರುವಂತೆಯೇ ಬ್ಲಾಕ್​ ಮಾರ್ಕೆಟ್​ಗೆ ಹಬ್ಬದ ದಿನಗಳು ಆರಂಭವಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯಾದ್ಯಂತ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ರೈಸ್ ಮಿಲ್‌ಗಳಲ್ಲಿ ಪಾಲಿಶ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಹೊಸ ಬ್ರ್ಯಾಂಡ್ ಹೆಸರಿಟ್ಟು ಮಾರುಕಟ್ಟೆಗೆ ತಂದು ದುಬಾರಿ ಬೆಲೆಗೆ ಮಾರಾಟ ಮಾಡುವ ದಂಧೆ ನಿರಂತರವಾಗಿ ನಡೆಯುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ನರಸಿಂಹ ಗಂಧದಮನೆ ಆರೋಪಿಸಿದ್ದಾರೆ.

  • ಹೊರ ಜಿಲ್ಲೆಗಳಲ್ಲಿ ಬಹಿರಂಗವಾಗುತ್ತಿರುವ ಈ ರೇಷನ್​ ಅಕ್ಕಿ ಹೊಸ ಬ್ರ್ಯಾಂಡ್ ವಿಚಾರ ಸದ್ದಿಲ್ಲದೆ ಶಿವಮೊಗ್ಗದಲ್ಲಿಯು ಭರ್ಜರಿಯಾಗಿ ನಡೆಯುತ್ತಿದೆ ಎಂಬುದು ನರಸಿಂಹ ಗಂಧದಮನೆಯವರ ಆರೋಪ ಅವರೇ ವಿವರಿಸಿರುವಂತೆ ರೇಷನ್ ಅಕ್ಕಿ ಗೋಲ್​ಮಾಲ್ ಹೇಗೆ ನಡೆಯುತ್ತದೆ ಎಂಬ ವಿವರ ಇಲ್ಲಿದೆ.
  • ಜಿಲ್ಲೆಯಲ್ಲಿ ಪ್ರತಿ ತಿಂಗಳು ಸುಮಾರು 2.17 ಲಕ್ಷ ಮೆಟ್ರಿಕ್ ಟನ್ ಪಡಿತರ ಅಕ್ಕಿ ವಿತರಿಸಲಾಗುತ್ತಿದೆ. ಆದರೆ ಇದರ ಪೂರೈಕೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಅಕ್ರಮಗಳು ನಡೆಯುತ್ತಿವೆ
  • ನ್ಯಾಯಬೆಲೆ ಅಂಗಡಿಗಳಲ್ಲಿ ಫಲಾನುಭವಿಗಳಿಗೆ ವಿತರಿಸುವ ಅಕ್ಕಿಯಲ್ಲಿ ಪ್ರತಿ ಚೀಲಕ್ಕೆ 3ರಿಂದ 4 ಕೆ.ಜಿ.ವರೆಗೆ ಕಡಿತಗೊಳಿಸಲಾಗುತ್ತಿದೆ
  • ಹೀಗೆ ಸಂಗ್ರಹವಾಗುವ ಅಕ್ಕಿಯನ್ನು ಖಾಸಗಿ ಗೋದಾಮುಗಳಲ್ಲಿ ದಾಸ್ತಾನು ಮಾಡಿ, ರೈಸ್ ಮಿಲ್‌ಗಳ ಮೂಲಕ ಪಾಲಿಶ್ ಮಾಡಿಸಿ ಪ್ರತಿ ಕೆ.ಜಿ.ಗೆ ₹60ರಿಂದ ₹140-150ರವರೆಗೆ ಮಾರಾಟ ಮಾಡಲಾಗುತ್ತಿದೆ
  • ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಕ ಪೂರೈಕೆಯಾಗುವ ಅಕ್ಕಿಯನ್ನೂ ಅಕ್ರಮವಾಗಿ ಬೇರೆಡೆಗೆ ಸಾಗಿಸಲಾಗುತ್ತಿರುವ ಸಾಧ್ಯತೆಯಿದೆ. ಈ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು

ಪಡಿತರ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟದ ಕುರಿತು ಈಗಾಗಲೇ ಎಚ್ಚರಿಕೆ ನೀಡಿದ್ದರೂ ಆಹಾರ ಇಲಾಖೆ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ಅಕ್ರಮದ ಮಾಹಿತಿ ಇದ್ದರೂ ಆಹಾರ ಇಲಾಖೆಯ ಶಿರಸ್ತೇದಾರರು ಹಾಗೂ ನಿರೀಕ್ಷಕರು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ನರಸಿಂಹ ಅವರು ದೂರಿದ್ದಾರೆ. ಜಿಲ್ಲೆಯ ಎಲ್ಲ ಖಾಸಗಿ ಗೋದಾಮುಗಳು, ಶೀತಲಗೃಹಗಳು ಹಾಗೂ ರೈಸ್ ಮಿಲ್‌ಗಳ ಮೇಲೆ ಜಿಲ್ಲಾಡಳಿತ, ಆಹಾರ ಮತ್ತು ಪೊಲೀಸ್ ಇಲಾಖೆಗಳು ಜಂಟಿಯಾಗಿ ದಾಳಿ ನಡೆಸಬೇಕು. ಅಕ್ರಮವಾಗಿ ಸಂಗ್ರಹಿಸಿರುವ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಬೇಕು. ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆಕೋರರು ಹಾಗೂ ಅವರಿಗೆ ರಕ್ಷಣೆ ನೀಡುತ್ತಿರುವ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ವಿರುದ್ಧ ಜಾಮೀನುರಹಿತ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor