ನಂದಿನಿ ಹಾಲಿನ ದರ ಲೀಟರ್‌ಗೆ 8 ಅಲ್ಲ 12 ರೂಪಾಯಿ ಏರಿಕೆ!? ಪ್ಯಾಕೆಟ್​ ಬಣ್ಣಕ್ಕೊಂದು ರೇಟು?

ಹಂಚಿಕೊಳ್ಳಿ
WhatsApp Facebook X Telegram
biodegradable pouch
biodegradable pouch

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ರಾಜ್ಯದಲ್ಲಿ ನಂದಿನಿ ಹಾಲಿನ ದರ ಏರಿಕೆ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಲೀಟರ್ ಹಾಲಿಗೆ 8 ರೂಪಾಯಿ ಹೆಚ್ಚಳ ಮಾಡಿರುವ ಸರ್ಕಾರದ ನಿರ್ಧಾರದ ಬಗ್ಗೆ ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿರುವಾಗಲೇ, ನವೆಂಬರ್ 2ರಂದು ಮಾರುಕಟ್ಟೆಯಲ್ಲಿ ಹೋಮೋಜೆನೈಸ್ಡ್ ಹಾಲಿಗೆ ಬೇರೆಯದೇ ದರ ಎಂದರೆ ಲೀಟರ್‌ಗೆ 12 ರೂಪಾಯಿ ಹೆಚ್ಚಳ ಮಾಡಿರುವುದು ಆಘಾತ ತಂದಿದೆ.

ನವೆಂಬರ್ 1ರಿಂದ ಅನ್ವಯವಾಗುವಂತೆ ಹಾಲಿನ ದರವನ್ನು ಲೀಟರ್‌ಗೆ 8 ರೂಪಾಯಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಮಾರುಕಟ್ಟೆಯಲ್ಲಿ ಹೋಮೋಜೆನೈಸ್ಡ್ ಹಾಲಿನ ದರವನ್ನ 12 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದು ಆಪ್​ಗಳು ಹಾಕುವ ಹಿಡನ್​ ಚಾರ್ಜಸ್​ನಂತೆ ಜನರಿಗೆ ಬರೆಯಾಗಿಸಿದೆ.

ಸರ್ಕಾರ 8 ರೂಪಾಯಿ ಏರಿಕೆ ಅಂತಾ ಹೇಳಿತ್ತಾದರೂ ವಾಸ್ತವದಲ್ಲಿ 12 ರೂಪಾಯಿಗಳವರೆಗೆ ಏರಿಕೆ ಮಾಡಲಾಗುತ್ತದೆ ಎಂದು ತಿಳಿಸಿಲ್ಲ ನಂದಿನಿಯ ವಿವಿಧ ಬ್ರ್ಯಾಂಡ್‌ಗಳ ಹಾಲಿನ ದರ ಲೀಟರ್‌ಗೆ 8 ರಿಂದ 12 ರೂಪಾಯಿಗಳವರೆಗೆ ಹೆಚ್ಚಾಗಿದೆ ಮತ್ತು ಮೊಸರಿನ ದರ ಲೀಟರ್‌ಗೆ 14 ರೂಪಾಯಿಗಳವರೆಗೆ ಹೆಚ್ಚಳ ಮಾಡಲಾಗಿದೆ.

ನೀಲಿ ಪ್ಯಾಕೆಟ್ ಹಾಲಿಗೆ ಹಳೆಯ ದರ 46 ರೂಪಾಯಿ ಇದ್ದು, ಅದನ್ನು 54 ರೂಪಾಯಿಗೆ ಹೆಚ್ಚಿಸಲಾಗಿದೆ.

ಹಸಿರು ಪ್ಯಾಕೆಟ್ ಹಾಲಿನ ದರವನ್ನು 47 ರೂಪಾಯಿಯಿಂದ 56 ರೂಪಾಯಿಗೆ ಏರಿಕೆ ಮಾಡಲಾಗಿದೆ.. ಇಲ್ಲಿ 9 ರೂಪಾಯಿ ಹೆಚ್ಚಳವಾಗಿದೆ.

ಈ ಹಿಂದೆ ಲೀಟರ್‌ಗೆ 54 ರೂಪಾಯಿ ಇದ್ದ ಮೊಸರಿನ ದರವನ್ನು ಈಗ 68 ರೂಪಾಯಿಗೆ ಏರಿಸಲಾಗಿದೆ.

ಹೋಮೋಜೆನೈಸ್ಡ್ ಹಾಲಿನ ಕೆಂಪು ಪ್ಯಾಕೆಟ್​ ದರವನ್ನ 12 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ.

ಹೆಚ್ಚಳವಾದ ಮೊತ್ತದಲ್ಲಿ ಪ್ರತಿ ಲೀಟರ್ ಹಾಲಿಗೆ 7 ರೂಪಾಯಿಯನ್ನು ನೇರವಾಗಿ ಹಾಲು ಉತ್ಪಾದಕ ರೈತರ ಖಾತೆಗೆ ವರ್ಗಾಯಿಸಲಾಗುವುದು ಎಂದು ಸರ್ಕಾರ ತಿಳಿಸಿದೆಯಾದರೂ ಉಳಿದ ಬ್ರಾಂಡ್ ಹಾಲಿಗೆ ನಿಗದಿಪಡಿಸಿದ್ದಕ್ಕಿಂತಲೂ ಏಕೆ ಹೆಚ್ಚಳ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor