ಮಲೆನಾಡು ಟುಡೆ ಸುದ್ದಿ / ಇಂದು ಅಕ್ಟೋಬರ್ 28, 2026ರ ಬುಧವಾರ. ಶೃಂಗೇರಿ ಪಂಚಾಂಗದ ಪ್ರಕಾರ, ಇಂದು ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಆಶ್ವಯುಜ ಮಾಸ, ಕೃಷ್ಣ ಪಕ್ಷದ ತೃತೀಯಾ ತಿಥಿಯಾಗಿದೆ. ಬುಧವಾರದಂದು ತೃತೀಯಾ ತಿಥಿಯು ಅಕ್ಟೋಬರ್ 29ರ ಬೆಳಗಿನ ಜಾವ 4:18ರವರೆಗೆ ಇರಲಿದ್ದು, ನಂತರ ಚತುರ್ಥಿ ತಿಥಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ಇಂದು ಸಂಜೆ 4:54ರವರೆಗೆ ಇದ್ದು, ನಂತರ ರೋಹಿಣಿ ನಕ್ಷತ್ರ ಆರಂಭವಾಗಲಿದೆ. ಇಂದು ವ್ಯತೀಪಾತ ಯೋಗ ಹಾಗೂ ವಣಿಜ ಕರಣವಿದೆ. ರಾಹುಕಾಲ ಮಧ್ಯಾಹ್ನ 12:15ರಿಂದ 1:41ರವರೆಗೆ ಇರಲಿದೆ. ಗುಳಿಕಕಾಲ ಬೆಳಗ್ಗೆ 10:49ರಿಂದ ಮಧ್ಯಾಹ್ನ 12:15ರವರೆಗೆ ಹಾಗೂ ಯಮಗಂಡಕಾಲ ಬೆಳಗ್ಗೆ 7:58ರಿಂದ 9:23ರವರೆಗೆ ಇರಲಿದೆ. ನಾಳೆ ಅಕ್ಟೋಬರ್ 29ರಂದು ಸಂಕಷ್ಟಹರ ಚತುರ್ಥಿ
ಇಂದಿನ ದಿನಭವಿಷ್ಯ
ಮೇಷ : ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿಯ ನಿರೀಕ್ಷೆಯಿದೆ. ಹಣಕಾಸಿನ ವ್ಯವಹಾರಗಳಲ್ಲಿ ಅನುಕೂಲವಾಗಬಹುದು. ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಇರಲಿದೆ
ವೃಷಭ : ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿಗಳು ಎದುರಾಗಬಹುದು. ವ್ಯಾಪಾರದಲ್ಲಿ ಹೊಸ ಯೋಜನೆಗಳ ಕುರಿತು ಚರ್ಚೆ ನಡೆಯಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ. ಕುಟುಂಬದ ಹಿರಿಯರ ಸಹಕಾರ ದೊರೆಯಬಹುದು.
ಮಿಥುನ : ಉದ್ಯೋಗದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವ ನಿರೀಕ್ಷೆಯಿದೆ. ಹಣಕಾಸಿನ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಕಂಡುಬರಬಹುದು. ಸ್ನೇಹಿತರ ಸಹಕಾರದಿಂದ ಕೆಲವು ಕೆಲಸಗಳು ಪೂರ್ಣಗೊಳ್ಳಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಕಟಕ : ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ದೊರೆಯಬಹುದು. ಮೇಲಧಿಕಾರಿಗಳೊಂದಿಗೆ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಬಹುದು. ವ್ಯಾಪಾರದಲ್ಲಿ ಪ್ರಗತಿಯ ನಿರೀಕ್ಷೆಯಿದೆ. ಆರ್ಥಿಕ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ
ಸಿಂಹ : ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಅನುಕೂಲಕರ ಬೆಳವಣಿಗೆ ನಿರೀಕ್ಷಿಸಬಹುದು. ಹಿರಿಯರ ಮಾರ್ಗದರ್ಶನದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಬಹುದು. ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆಯ ಸಾಧ್ಯತೆಯಿದೆ.
ಕನ್ಯಾ : ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳೊಂದಿಗೆ ಹೊಂದಾಣಿಕೆ ಕಾಯ್ದುಕೊಳ್ಳಬೇಕು. ಹಣಕಾಸಿನ ವ್ಯವಹಾರಗಳಲ್ಲಿ ಆತುರದ ನಿರ್ಧಾರ ಬೇಡ. ಕುಟುಂಬದಲ್ಲಿ ಅನಗತ್ಯ ವಾದವಿವಾದಗಳನ್ನು ತಪ್ಪಿಸಬೇಕು.
ತುಲಾ : ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಅನುಕೂಲಕರ ಬೆಳವಣಿಗೆ ನಿರೀಕ್ಷಿಸಬಹುದು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಇರಲಿದೆ. ಆರ್ಥಿಕ ವಿಚಾರಗಳಲ್ಲಿ ಪ್ರಗತಿಯ ಸಾಧ್ಯತೆಯಿದೆ.
ವೃಶ್ಚಿಕ : ಉದ್ಯೋಗದಲ್ಲಿ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲವಾಗಬಹುದು. ವ್ಯಾಪಾರದಲ್ಲಿ ಎದುರಾಗಿದ್ದ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸಾಧ್ಯತೆಯಿದೆ. ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ ನಿರೀಕ್ಷಿಸಬಹುದು. ಕುಟುಂಬದ ಸದಸ್ಯರ ಸಹಕಾರ ದೊರೆಯಲಿದೆ.
ಧನು : ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಪ್ರಗತಿಯ ನಿರೀಕ್ಷೆಯಿದೆ. ಉದ್ಯೋಗದಲ್ಲಿ ಹೊಸ ಯೋಜನೆಗಳನ್ನು ರೂಪಿಸಲು ಅವಕಾಶ ದೊರೆಯಬಹುದು. ಮಕ್ಕಳ ವಿಚಾರದಲ್ಲಿ ಸಂತೋಷದ ಸುದ್ದಿ ಕೇಳಿಬರಬಹುದು. ಆರ್ಥಿಕ ವ್ಯವಹಾರಗಳಲ್ಲಿ ಜಾಗರೂಕತೆ ಅಗತ್ಯ
ಮಕರ : ಮನೆ ಮತ್ತು ಕುಟುಂಬದ ಜವಾಬ್ದಾರಿಗಳು ಹೆಚ್ಚಾಗಬಹುದು. ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ಉದ್ಯೋಗದಲ್ಲಿ ಕೆಲಸದ ಒತ್ತಡ ಎದುರಾಗುವ ಸಾಧ್ಯತೆಯಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.
ಕುಂಭ : ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಬೆಳವಣಿಗೆ ನಿರೀಕ್ಷಿಸಬಹುದು. ಹೊಸ ಸಂಪರ್ಕಗಳಿಂದ ಪ್ರಯೋಜನವಾಗುವ ಸಾಧ್ಯತೆಯಿದೆ. ಸ್ನೇಹಿತರು ಹಾಗೂ ಸಹೋದರರ ಸಹಕಾರ ದೊರೆಯಬಹುದು. ಹಣಕಾಸಿನ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಬಹುದು.
ಮೀನ : ಹಣಕಾಸಿನ ವಿಚಾರಗಳಲ್ಲಿ ಅನುಕೂಲಕರ ಬೆಳವಣಿಗೆ ಕಂಡುಬರಬಹುದು. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ದೊರೆಯುವ ಸಾಧ್ಯತೆಯಿದೆ. ಕುಟುಂಬದ ಅಗತ್ಯಗಳಿಗಾಗಿ ಖರ್ಚು ಎದುರಾಗಬಹುದು. ವ್ಯಾಪಾರದಲ್ಲಿ ಹೊಸ ಹೂಡಿಕೆಗಳಿಗೆ ಆತುರ ಬೇಡ.
