ತೀರ್ಥಹಳ್ಳಿ : ಬರುವಾಗ ಇದೊಂದು ಸಮಸ್ಯೆಯಿಂದ ಪಲ್ಟಿಯಾದ ಕಾರು, ಲೈಟ್ ಕಂಬ ಪುಡಿ, ಮಗುವಿಗೆ ಗಾಯ

ಹಂಚಿಕೊಳ್ಳಿ
WhatsApp Facebook X Telegram
Car accident
Car accident

ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ : ಕಾರಿನ ಹಿಂಬದಿಯ ಟೈರ್ ಪಂಚರ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವ ಘಟನೆ ತಾಲೂಕಿನ 23ನೇ ಮೈಲಿಕಲ್ಲು ಬಳಿ ಸಂಭವಿಸಿದೆ.

ಕುಟುಂಬವೊಂದು ಕುಪ್ಪಳ್ಳಿಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಶಿವಮೊಗ್ಗಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ 23ನೇ ಮೈಲಿಕಲ್ಲು ಬಳಿ ಬರುವಾಗ ಟಾಟಾ ಟಿಯಾಗೋ ಕಾರಿನ ಹಿಂಭಾಗದ ಟೈರ್ ಪಂಚರ್ ಆಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಕೂಡಲೇ ಸ್ಥಳೀಯರು ಆಗಮಿಸಿ, ಪಲ್ಟಿಯಾದ ಕಾರನ್ನು ಎತ್ತಿ ಅದರಲ್ಲಿದ್ದವರನ್ನು ಉಪಚರಿಸಿದ್ದಾರೆ.ಕಾರಿನಲ್ಲಿ ಗಂಡ, ಹೆಂಡತಿ ಹಾಗೂ ಮಕ್ಕಳು ಸೇರಿ 4 ಜನರಿದ್ದು, ಘಟನೆಯ ಪರಿಣಾಮ ಮಗುವಿನ ಕೈಗೆ ಫ್ರಾಕ್ಚರ್ ಆಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸ್ಥಳಕ್ಕೆ ಮೆಸ್ಕಾಂ ಅಧಿಕಾರಿಗಳು ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor