ಶಿವಮೊಗ್ಗ ದಸರಾ ಅದ್ವಾನದ ಬಳಿಕ ಸಕ್ರೆಬೈಲು ಬಿಡಾರಕ್ಕೆ ಮರಳಿದ ಸೋಮಣ್ಣ, ಸಾಗರ್‌, ಬಹದ್ದೂರ್‌ ಆನೆ

ಹಂಚಿಕೊಳ್ಳಿ
WhatsApp Facebook X Telegram
Shivamogga Dasara Elephants Somanna, Sagar and Bahaddur Return to Sakrebailu Camp
Shivamogga Dasara Elephants Somanna, Sagar and Bahaddur Return to Sakrebailu Camp

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ನಿನ್ನೆ ನಡೆದ ಘಟನೆಗಳು ಬಹುದಿನಗಳವರೆಗೂ ಕಾಡುತ್ತವೆ..ಆದಾಗ್ಯು ನಡೆದ ಘಟನೆಯಲ್ಲಿ ನಮ್ಮ ಸಕ್ರೆಬೈಲ್ ಬಿಡಾರದ ಆನೆಗಳು ಯಾರೊಬ್ಬರಿಗು ಏನನ್ನೂ ಸಹ ಅಪಾಯ ಮಾಡಲಿಲ್ಲ ಎಂಬುದೇ ವಿಶೇಷ. ಈ ನಡುವೆ ಸಕ್ರೆಬೈಲು ಆನೆ ಬಿಡಾರಕ್ಕೆ ಸಾಗರ್‌, ಸೋಮಣ್ಣ ಹಾಗೂ ಬಹದ್ದೂರ್‌ ಆನೆಗಳನ್ನ ನಿನ್ನೆ ರಾತ್ರಿಯೇ ಶಿಫ್ಟ್ ಮಾಡಲಾಗಿದೆ.

ಸಕ್ರೆಬೈಲು ಆನೆ ಬಿಡಾರಕ್ಕೆ ಶಿಫ್ಟ್​

ಅರವಳಿಕೆ ನೀಡದಿದ್ದರಿಂದ ಸೋಮಣ್ಣನಿಗೆ ಕೆಲಕಾಲ ವಿಶ್ರಾಂತಿ ನೀಡಲಾಗಿತ್ತಾದರೂ ಅಂತಿಮವಾಗಿ ರಾತ್ರಿ 10.30ಕ್ಕೆ ಆನೆಗಳನ್ನ ಶಿಫ್ಟ್ ಮಾಡುವ ಕಾರ್ಯಾಚರಣೆ ಆರಂಭಗೊಂಡಿತು. ಮೂರು ಆನೆಗಳನ್ನು ಡಯಟ್ ಕೇಂದ್ರದಿಂದ ವಾಸವಿ ಸ್ಕೂಲ್​ಗೆ ಕರೆತಂದು ಅಲ್ಲ ನಿರ್ಮಿಸಿದ್ದ ಏರಿ ಮೂಲಕ ಆನೆಗಳನ್ನ ಲಾರಿಗೆ ಹತ್ತಿಸಲಾಗಿದೆ. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆದೊಯ್ಯಲಾಯಿತು. ಇನ್ನೂ ರಾತ್ರಿಯಾದರೂ ಆನೆಗಳನ್ನ ನೋಡಲು ಕೋಟೆ ರಸ್ತೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಲಾರಿಗಳು ಹೊರಡುತ್ತಿದ್ದಂತೆ ಆನೆಗಳು ಸೊಂಡಿಲೆತ್ತಿದ್ದರಿಂದ ಜನರು ಓಹ್ ಅಂತಾ ಕೂಗಿದರು. ಅಲ್ಲದೆ ಆನೆಗಳ ಹೆಸರನ್ನ ಕೂಗಿ, ಹೋಗಿ ಬನ್ನಿ ಅಂತಾ ಶುಭಾ ಹಾರೈಸಿದರು. ನಡೆದ ಘಟನೆಯು ಜನರ ಮನಸ್ಸಿನಿಂದಲೂ, ಆನೆಗಳಲ್ಲಿ ಮಾಸಿ ಹೋದಂತೆ ಕಂಡು ಬಂತು

View this post on Instagram

A post shared by MALENADU TODAY (@malenadutodaysmg)

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor