ಶಿವಮೊಗ್ಗ ಶಾರ್ಟ್ ನ್ಯೂಸ್: ಬಲ್ಪ್​ ವಿಚಾರಕ್ಕೆ ಜಗಳ, ಪಂಪ್ ಕಳವು, ಪಲ್ಟಿಯಾದ ಕಾರು!ಬರ್ತ್​​ಡೆ ಕಿರಿಕ್! ಇನ್ನಷ್ಟು ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
shivamogga short news ai image
shivamogga short news ai image

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗಳ ಸಂಕ್ಷಿಪ್ತ ವಿವರ ನೀಡುವ ಇವತ್ತಿನ ಶಿವಮೊಗ್ಗ ಶಾರ್ಟ್ ನ್ಯೂಸ್​ ಇಲ್ಲಿದೆ

ಶಾಲೆಯಲ್ಲಿ ಬಲ್ಬ್ ಅಳವಡಿಸುವ ವಿಚಾರಕ್ಕೆ ಗಲಾಟೆ

ಶಿವಮೊಗ್ಗದ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾಲೆಯೊಂದರಲ್ಲಿ ಬಲ್ಬ್ ಅಳವಡಿಸುವ ವಿಚಾರವಾಗಿ ಸೆಕ್ಯೂರಿಟಿ ಹಾಗೂ ತೋಟ ನಿರ್ವಹಣೆ ಕೆಲಸ ಮಾಡುವವರ ನಡುವೆ ಗಲಾಟೆ ನಡೆದಿದೆ. ಈ ಸಂಬಂಧ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಕರೆ ಸ್ವೀಕರಿಸಿದ ERV ಸಿಬ್ಬಂದಿ ಸ್ಥಳಕ್ಕೆ ತೆರಳಿ ಗಲಾಟೆಯನ್ನು ನಿಲ್ಲಿಸಿದ್ದಾರೆ. ಸಮಸ್ಯೆಯನ್ನು ಬಗೆಹರಿಸಿ ದೂರನ್ನು ಮುಕ್ತಾಯಗೊಳಿಸಿದ್ದಾರೆ.

ತೋಟದಲ್ಲಿ ಬೋರ್‌ವೆಲ್ ಪಂಪ್, ಪೈಪ್ ಹಾಗೂ ಕೇಬಲ್ ಕಳವು

ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತೋಟದ ಬಾವಿಗೆ ಅಳವಡಿಸಿದ್ದ ಬೋರ್‌ವೆಲ್ ಪಂಪ್, ಪೈಪ್ ಹಾಗೂ ಕೇಬಲ್‌ಗಳನ್ನು ಯಾರೋ ಕಳವು ಮಾಡಿರುವ ಕುರಿತು 112ಕ್ಕೆ ದೂರು ಬಂದಿತ್ತು ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ERV ಸಿಬ್ಬಂದಿ, ದೂರುದಾರರು ಹಾಗೂ ಅಕ್ಕಪಕ್ಕದ ಜಮೀನಿನವರನ್ನು ವಿಚಾರಿಸಿದ್ದಾರೆ. ಬಳಿಕ ದೂರುದಾರರಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ.

ಶಿವಮೊಗ್ಗ ಶಾರ್ಟ್ ನ್ಯೂಸ್/ ರಸ್ತೆಯಲ್ಲಿ ಪಲ್ಟಿಯಾಗಿ ತೋಟಕ್ಕೆ ಬಿದ್ದ ಕಾರು

ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರೊಂದು ರಸ್ತೆಯಲ್ಲಿ ಪಲ್ಟಿಯಾಗಿ ತೋಟದಲ್ಲಿ ಉರುಳಿದ ಘಟನೆ ಬಗ್ಗೆ ವರದಿಯಾಗಿದೆ. ಘಟನೆ ಸಂಬಂಧ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಪಾಟ್ ವಿಸಿಟ್ ಮಾಡಿದ ಸಿಬ್ಬಂದಿ ಕಾರಿನ ಮಾಲೀಕರಿಗೆ ಕರೆಮಾಡಿದ್ದಾರೆ. ಸಮರ್ಪಕ ಮಾಹಿತಿ ಸಿಗದ ಹಿನ್ನೆಲೆಯಲ್ಲಿ ವಿಚಾರಣೆ ಮುಂದುವರಿಸಿದ್ದಾರೆ.

ಚಾನಲ್ ಬಳಿ ಹುಟ್ಟುಹಬ್ಬ ಆಚರಣೆ: ಸಾರ್ವಜನಿಕರಿಗೆ ತೊಂದರೆ

ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಿರಿಯೂರು ಚಾನಲ್ ಸಮೀಪ ಯುವಕರು ಹುಟ್ಟುಹಬ್ಬ ಆಚರಿಸುತ್ತಿದ್ದರಿಂದ ಜನರಿಗೆ ಸಮಸ್ಯೆಯಾಗಿತ್ತು. ಹೀಗಾಗಿ ಸ್ತಳಕ್ಕೆ ಬಂದ ಪೊಲೀಸರು ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕರಿಗೆ ಸೂಕ್ತ ತಿಳಿವಳಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ. ಬಳಿಕ ಯುವಕರನ್ನು ಸ್ಥಳದಿಂದ ಕಳುಹಿಸಿಕೊಟ್ಟಿದ್ದಾರೆ.

ಜಮೀನಿನ ಪಕ್ಕದ ಹೊಳೆಯ ವಿಚಾರಕ್ಕೆ ಗಲಾಟೆ

ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮೀನಿನ ಪಕ್ಕದಲ್ಲಿ ಹರಿಯುವ ಹೊಳೆಯ ವಿಚಾರವಾಗಿ ಅಕ್ಕಪಕ್ಕದ ಜಮೀನಿನವರ ನಡುವೆ ಗಲಾಟೆಯಾಗಿದೆ,. ಮಾಹಿತಿ ಮೇರೆಗೆ ERV ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ತಿಳಿಸಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor