ಶಿವಮೊಗ್ಗ :  ನಾಳೆಯಿಂದ ಶಿವಮೊಗ್ಗ ದಸರಾ ಸಂಭ್ರಮ ಆರಂಭ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಶಿವಮೊಗ್ಗ :  ನಾಳೆಯಿಂದ ಶಿವಮೊಗ್ಗ ದಸರಾ ಸಂಭ್ರಮ ಆರಂಭ; 11 ದಿನಗಳ ಉತ್ಸವಕ್ಕೆ ಸಿದ್ಧತೆ

ಮಲೆನಾಡು ಸುದ್ದಿ / ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ಟೋಬರ್ 11ರಿಂದ 11 ದಿನಗಳ ಕಾಲ ವೈವಿಧ್ಯಮಯ ಸಾಂಸ್ಕೃತಿಕ ಮಹೋತ್ಸವವು ಆರಂಭವಾಗಲಿದೆ. ನಾಡಹಬ್ಬದ ಅಂಗವಾಗಿ ನಗರದ ವಿವಿಧ ವೇದಿಕೆಗಳಲ್ಲಿ ಕಲೆ, ಸಾಹಿತ್ಯ, ಕ್ರೀಡೆ, ರಂಗಭೂಮಿ, ಸಿನಿಮಾ, ಜನಪದ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮೊದಲ ದಿನ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆಚರಣೆಗೆ ಚಾಲನೆ ದೊರೆಯಲಿದ್ದು, ಅಂಬಾರಿ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಲಿದೆ. ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಯುವ ದಸರಾ ಅಂಗವಾಗಿ ರಾಜ್ಯಮಟ್ಟದ ದೇಹದಾರ್ಡ್ಯ ಸ್ಪರ್ಧೆ ಹಾಗೂ ಕುವೆಂಪು ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಪೇಪರ್‌ನಲ್ಲಿರುವ 5 ಪ್ರಮುಖ ಸುದ್ದಿಗಳು

  • ಬರ ನಿರ್ವಹಣೆ ಪರಿಶೀಲನೆ: ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ, ತೋಟಗಾರಿಕೆ ಬೆಳೆ ಹಾನಿ ಮತ್ತು ಕುಡಿಯುವ ನೀರಿನ ಸಮಸ್ಯೆ ಕುರಿತು ತಾಲೂಕುವಾರು ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
  • ಸಂಪುಟದ ಘನತೆಗೆ ಧಕ್ಕೆ ಆರೋಪ: ರಾಜ್ಯದ ಐವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿರುವ ವರದಿಗಳ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ತಪ್ಪು ನಡೆದಿದ್ದರೆ ಕ್ರಮ ಕೈಗೊಳ್ಳಬೇಕೆ ಹೊರತು ಕೇವಲ ಎಚ್ಚರಿಕೆ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  • ಮಹಿಳೆಗೆ ಚಿನ್ನಾಭರಣ ವಾಪಸ್: ಶಿವಮೊಗ್ಗದಿಂದ ತರೀಕೆರೆಗೆ ಪ್ರಯಾಣಿಸುತ್ತಿದ್ದ ವೇಳೆ ಖಾಸಗಿ ಬಸ್‌ನಲ್ಲಿ ಬಿಟ್ಟುಹೋಗಿದ್ದ ₹2 ಲಕ್ಷ ಮೌಲ್ಯದ ಚಿನ್ನಾಭರಣ, ₹60 ಸಾವಿರ ನಗದು ಹಾಗೂ ಮೊಬೈಲ್ ಇದ್ದ ಬ್ಯಾಗ್ ಅನ್ನು ದೊಡ್ಡಪೇಟೆ ಪೊಲೀಸರು ಪತ್ತೆಹಚ್ಚಿ ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
  • ಹಕ್ಕುಪತ್ರಕ್ಕಾಗಿ ರಸ್ತೆ ತಡೆ: ತುಂಗಾಭದ್ರಾ ನದಿ ಯೋಜನೆಯಿಂದ ಸ್ಥಳಾಂತರಗೊಂಡು ಸುಮಾರು 65 ವರ್ಷಗಳಾದರೂ ವಾಸಿಸುವ ಜಮೀನಿನ ಹಕ್ಕುಪತ್ರ ಸಿಗದ ಹಿನ್ನೆಲೆಯಲ್ಲಿ ಚಿಕ್ಕಕೂಡ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
  • ಸಿಗಂದೂರಿನಲ್ಲಿ ‘ರಂಗ ನವರಾತ್ರಿ’: ಸಾಗರ ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ 10 ಸರ್ಕಾರಿ ಶಾಲೆಗಳ 210 ವಿದ್ಯಾರ್ಥಿಗಳಿಂದ ಮುಳುಗಡೆ ನೆಲದ ಕಥೆ ಆಧರಿಸಿದ ನಾಟಕ ಪ್ರದರ್ಶನಗಳು ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿವೆ.

ಈ ಮೇಲಿನ ಎಲ್ಲ ಸುದ್ದಿಗಳ ಸಂಪೂರ್ಣ ವಿವರ (ಇ-ಲಿಂಕ್​​)ನಲ್ಲಿದೆ

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor