ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಎಣ್ಣೆ ಅಂದ್ರೆ ಹಾಗೆನೆ ಅದನ್ನ ಹೊಡ್ದ್ಮೇಲೆ ಕೆಲವ್ರು ತಮ್ ಪಾಡಿಗ್ ತಾವ್ ಇದ್ರೆ, ಇನ್ ಕೆಲವ್ರು ಏನೇನೋ ಮಾತಾಡಿ ಸಣ್ಣ ಪುಟ್ಟ ಕಿರಿಕ್ ಮಾಡ್ಕೊಳ್ತಾರೆ. ಆದ್ರೆ ಇನ್ ಕೆಲವ್ ಮಾಸ್ಟರ್ ಪೀಸ್ಗಳು ರಸ್ತೆ ಬದೀಲಿ ಕೊಡೋ ಹಾವ್ಳಿ ಮಾತ್ರ ಬೇರೆ ತರಾನೆ ಇರುತ್ತೆ. ಅವ್ವು ಕೆಲವ್ರಿಗೆ ಭಯ ತರ್ಸಿದ್ರೆ, ಕೆಲವರಿಗೆ ನಗು, ಇನ್ ಕೆಲವ್ರಿಗೆ ಕೋಪಾನು ತರ್ಸುತ್ತೆ, ಇದೀಗ ಶಿವಮೊಗ್ಗದ ರಸ್ತೆಯಲ್ಲಿ ಓರ್ವ ವೃದ್ದ ಮಾಡಿರೋ ಹಾವ್ಳಿ ಎಲ್ಲರಿಗೂ ನಗು ತರ್ಸಿದ್ದು, ಅಬ್ಬಾ ಯಾರೀ ವೃದ್ಧ ಅನ್ನಿಸುವಂತೆ ಮಾಡಿದೆ.
ಹೌದು ಶಿವಮೊಗ್ಗದ ಗಾರ್ಡ್ ಏರಿಯಾದಲ್ಲಿ ಫುಲ್ ಟೈಟ್ ಆದ ವೃದ್ದರೊಬ್ರು ರಸ್ತೆ ಮಧ್ಯ ಹಾವ್ಳಿ ಇಡೋಕೆ ಶುರು ಮಾಡಿದ್ದಾರೆ. ಎಣ್ಣೆ ಏಟಲ್ಲಿ ಶರ್ಟ್ ಬಿಚ್ಚಿದ ವೃದ್ದ, ಅಲ್ಲಿದ್ದವರಿಗೆ ತನ್ನ ಹಳೆ ಹಿಸ್ಟರಿ ಹೆಳೋಕೆ ಶುರು ಮಾಡಿದ್ದಾನೆ, ಏ ನಾನ್ ಒಂದ್ ಕಾಲದಲ್ಲಿ ರೌಡಿ ಗೊತ್ತಾ, ನನ್ನ ಹೆಸರು ಕೇಳಿದ್ರೆ ನಡ್ಗೋಗ್ತೀರ, ನಮ್ಮೂರಲ್ಲಿ ನಾನೊಬ್ನೇ ಪೈಲ್ವಾನ್ ಎಂದು ಕೂಡಾಗಲು ಶುರು ಮಾಡಿದ್ದಾರೆ, ಅಲ್ಲಿದ್ದವರಿಗೆ ಗುರೈಸುವುದು ಭಯಬಿಳುವಂತೆ ಮಾಡಿದ್ದಾರೆ, ಅಷ್ಟೇ ಅಲ್ಲದೆ ಶರ್ಟ್ ಅನ್ನು ಬಿಚ್ಚಿ ನನ್ ಬಾಡಿ ನೋಡಿ ಹೇಗಿದೆ ಅಂತ ದೇಹ ಪ್ರದರ್ಶನವನ್ನ ಮಾಡಿದ್ದಾರೆ.

ಇದನ್ನೆಲ್ಲಾ ಗಮನಿಸಿದ ಅಲ್ಲದ್ದ ವ್ಯಕ್ತಿಯೊಬ್ಬರು ಆತನ ಹಾವಭಾವವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ, ಅಷ್ಟೇ ಅಲ್ಲದೆ ಇವ್ರು ಹಳೇ ಕಾಲದ್ ರೌಡಿ ಅಂತೆ ಎಣ್ಣೆ ಹೊಡ್ದಾಗ ಇವ್ರಿಗೆ ಹಳೆ ಕಾಲದ್ ಎಲ್ಲ ನೆನ್ಪಾಗುತ್ತಂತೆ, ಆಮೇಲೆ ಈ ರೀತಿ ಬಾಡಿ ಶೋ ಆಫ್ ಎಲ್ಲಾ ಮಾಡ್ತಾರಂತೆ, ಹಾಗಂತ ಅವ್ರೆ ನನ್ನತ್ರ ಹೇಳಿದ್ರು, ಈಗ ನನನ್ನೂ ಟಾರ್ಗೆಟ್ ಮಾಡ್ತಿದ್ದಾರೆ, ಈಗಾಗಲೇ 2 ಸತಿ ಲುಕ್ ಕೊಟ್ ಹೋದ್ರು ಅಂತ ವಿಡಿಯೋ ಮಾಡ್ತಾ ಹೇಳಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ ಇವರು ಶಿವಮೊಗ್ಗದ ವೈನ್ಸ್ ಸ್ಟೋರ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಮದ್ಯಪಾನ ಮಾಡ್ತಾಗ ಈರೀತಿ ಯಾವಾಗಲು ಮಾಡುತ್ತಾರೆ, ನಾನೇ ಪೈಲ್ವಾನ್ ಹಾಗೆ ಹೀಗೆ ಓಡಾಡ್ತಾರೆ ಎಂದಿದ್ದಾರೆ. ಒಟ್ಟಾರೆಯಾಗಿ ವೃದ್ದನ ಬಾಡಿ ಬಿಲ್ಡಿಂಗ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
