ನಾಳೆಯಿಂದ ಶಿವಮೊಗ್ಗ ದಸರಾ ಮಹೋತ್ಸವ ಆರಂಭ | ಮೈಲಾರೇಶ್ವರ, ಕಾಲಭೈರವೇಶ್ವರ ಸನ್ನಿಧಿಯಲ್ಲಿಯು ನಡೆಯಲಿದೆ ವಿಶೇಷ ಕಾರ್ಯಕ್ರಮ

ಹಂಚಿಕೊಳ್ಳಿ
WhatsApp Facebook X Telegram
Shivamogga Dasara Elephants, ಶಿವಮೊಗ್ಗ ದಸರಾ, ಅಂಬಾರಿ ಮೆರವಣಿಗೆ, ಸಕ್ರೆಬೈಲು ಆನೆ, ಸಾಗರ, ಬಾಲಣ್ಣ, ಬಹದ್ದೂರ್, ದಸರಾ ಮಹೋತ್ಸವ, ತಾಲೀಮು, ಮಲೆನಾಡು ಟುಡೆ ,#ShivamoggaDasara, #Dasara2025 #AmbariProcession, #SakrebailuElephants, #KarnatakaDasara, #MalenaduToday #IndianFestival
Shivamogga Dasara Elephants, ಶಿವಮೊಗ್ಗ ದಸರಾ, ಅಂಬಾರಿ ಮೆರವಣಿಗೆ, ಸಕ್ರೆಬೈಲು ಆನೆ, ಸಾಗರ, ಬಾಲಣ್ಣ, ಬಹದ್ದೂರ್, ದಸರಾ ಮಹೋತ್ಸವ, ತಾಲೀಮು, ಮಲೆನಾಡು ಟುಡೆ ,#ShivamoggaDasara, #Dasara2025 #AmbariProcession, #SakrebailuElephants, #KarnatakaDasara, #MalenaduToday #IndianFestival

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಮಹೋತ್ಸವಕ್ಕೆ ನಾಳೆ ಅಂದರೆ ಅಕ್ಟೋಬರ್ 11ರಂದು ಚಾಲನೆ ದೊರೆಯಲಿದೆ. ನವರಾತ್ರಿಯ ಮೊದಲ ದಿನ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಬೆಳ್ಳಿ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪನೆಯೊಂದಿಗೆ 11 ದಿನಗಳ ದಸರಾ ಉತ್ಸವ ಆರಂಭವಾಗಲಿದೆ. ವಿಜಯದಶಮಿಯಂದು ಸಕ್ರೆಬೈಲಿನ ಗಜಪಡೆಯೊಂದಿಗೆ ಜಂಬೂಸವಾರಿ ಮೆರವಣಿಗೆ ನಡೆಯಲಿದ್ದು, ಉತ್ಸವದ ಅವಧಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಕೋಟೆ ದೇವಸ್ಥಾನದಲ್ಲಿ 11 ದಿನಗಳ ಕಾಲ ವಿಶೇಷ ಪೂಜೆ

ದಸರಾ ಮಹೋತ್ಸವದ ಮೊದಲ ದಿನ ಮಹಾನಗರ ಪಾಲಿಕೆ ನಿರ್ಮಿಸಿರುವ ಬೆಳ್ಳಿ ಮಂಟಪದಲ್ಲಿ ಬೆಳ್ಳಿಯ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ನಗರದ ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ದೇವಿಗೆ 11 ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. ನವರಾತ್ರಿ ಉತ್ಸವದ ಅಂಗವಾಗಿ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಶಿವಮೊಗ್ಗ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.

ಭಾರತ್ ಜೋಡೋ ಯಾತ್ರೆ 2.0

ವಿಜಯದಶಮಿಗೆ 4 ಕಿ.ಮೀ. ಜಂಬೂಸವಾರಿ ಮೆರವಣಿಗೆ

ಶಿವಮೊಗ್ಗ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆ ವಿಜಯದಶಮಿಯಂದು ನಡೆಯಲಿದೆ. ನಗರದ ಕೋಟೆ ಶಿವಪ್ಪನಾಯಕ ಅರಮನೆ ಆವರಣದಿಂದ ಆರಂಭವಾಗುವ ಮೆರವಣಿಗೆ ಅಲ್ಲಮಪ್ರಭು ಮೈದಾನದವರೆಗೆ ಸಾಗಲಿದೆ. ಸುಮಾರು 4 ಕಿ.ಮೀ. ಉದ್ದದ ಮಾರ್ಗದಲ್ಲಿ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ಸಕ್ರೆಬೈಲಿನ ‘ಸಾಗರ’ ಆನೆ ಅಂಬಾರಿ ಹೊರಲಿದೆ. ಇತರ 2 ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಮೂಲಕ ಒಟ್ಟು 3 ಆನೆಗಳು ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲಿವೆ.

ಆಹಾರ ದಸರಾ, ರಂಗ ದಸರಾ

ದಸರಾ ಮಹೋತ್ಸವದ 11 ದಿನಗಳ ಅವಧಿಯಲ್ಲಿ ಆಹಾರ ದಸರಾ, ರಂಗ ದಸರಾ ಹಾಗೂ ಸಾಂಸ್ಕೃತಿಕ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.ಉತ್ಸವದ ವಿವಿಧ ಕಾರ್ಯಕ್ರಮಗಳಲ್ಲಿ ಖ್ಯಾತ ಕಲಾವಿದರು ಹಾಗೂ ಸೆಲೆಬ್ರಿಟಿಗಳು ಭಾಗವಹಿಸಲಿದ್ದು, ಸಾರ್ವಜನಿಕರಿಗೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಧಾರ್ಮಿಕ ಆಚರಣೆಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ

ಇನ್ನೂ ನವರಾತ್ರಿ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿ ಹಾಗೂ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶ್ರೀ ಕಾಳಿಕಾಂಬದೇವಿ ಅಮ್ಮನವರ ಸನ್ನಿಧಿಯಲ್ಲಿ ದಸರಾ ಹಾಗೂ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 11ರಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಅಕ್ಟೋಬರ್ 11ರಿಂದ ಪ್ರತಿದಿನ ದೇವರಿಗೆ ವಿಶೇಷ ಅಲಂಕಾರ, ಅರ್ಚನೆ, ವಿವಿಧ ಅಭಿಷೇಕ ಹಾಗೂ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಕ್ಟೋಬರ್ 16ರಂದು ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕೂರಿಸುವ ಧಾರ್ಮಿಕ ಕಾರ್ಯಕ್ರಮ ನೆರವೇರಲಿದೆ.

ಅಕ್ಟೋಬರ್ 21ರಂದು ಸಂಜೆ 5 ಗಂಟೆಗೆ ಬನ್ನಿ ಮುಡಿಯುವ ಉತ್ಸವ ನಡೆಯಲಿದ್ದು, ಅಕ್ಟೋಬರ್ 22ರಂದು ಮುಂಜಾನೆ 5 ಗಂಟೆಯಿಂದ ಏಕಾದಶ ರುದ್ರಾಭಿಷೇಕ ನೆರವೇರಲಿದೆ. ಬಳಿಕ ಶ್ರೀ ಮೈಲಾರೇಶ್ವರ ದೇವರ ರಾಜಬೀದಿ ಉತ್ಸವ ನಡೆಯಲಿದೆ. ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಕಾಲಭೈರವೇಶ್ವರ ಸನ್ನಿಧಿಯಲ್ಲಿ ಶರನ್ನವರಾತ್ರಿ

ಇನ್ನೊಂದೆಡೆ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಕಾಲಭೈರವೇಶ್ವರ ಸ್ವಾಮಿ ಹಾಗೂ ಶ್ರೀ ಕಾಳಿಕಾಂಬದೇವಿ ಅಮ್ಮನವರ ಸನ್ನಿಧಿಯಲ್ಲಿ ಅಕ್ಟೋಬರ್ 11ರಿಂದ 21ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಮಹೋತ್ಸವದ ಅಂಗವಾಗಿ ಶ್ರೀದೇವಿಗೆ ವಿವಿಧ ಅಲಂಕಾರಗಳೊಂದಿಗೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು. ಸಂಜೆ ದುರ್ಗಾಹೋಮ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ 6.15ರಿಂದ 7.20ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಶ್ರೀ ನಾದಮಯಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಅಕ್ಟೋಬರ್ 17ರಂದು ಬೆಳಗ್ಗೆ 7 ಗಂಟೆಯಿಂದ ಚಂಡಿಕಾ ಹೋಮ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಅಕ್ಟೋಬರ್ 21ರಂದು ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಪೂಜೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor