ರೈತರ ಹಿಟಾಚಿ ಯಂತ್ರ ಸೀಜ್ ಮಾಡಿದ ಅಧಿಕಾರಿಗಳು! ಭದ್ರಾವತಿ ಅರಣ್ಯ ಇಲಾಖೆ ಕಚೇರಿಯಲ್ಲಿ ಅಜಿತ್ ಅಪ್ಪಾಜಿ ನೇತೃತ್ವದಲ್ಲಿ ಧರಣಿ

ಹಂಚಿಕೊಳ್ಳಿ
WhatsApp Facebook X Telegram
JDS Protests Against Forest Officials in Bhadravathi Over Seizure of Farmer's Hitachi Machine
JDS Protests Against Forest Officials in Bhadravathi Over Seizure of Farmer's Hitachi Machine

ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ರೈತರ ಹಿಟಾಚಿಯನ್ನು ಯಾವುದೇ ಮುನ್ಸೂಚನೆ ಹಾಗೂ ಕಾರಣ ನೀಡದೆ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಜೆಡಿಎಸ್ ಮುಖಂಡ ಅಜಿತ್ ಅಪ್ಪಾಜಿ ಅವರ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಅರಣ್ಯ ಇಲಾಖೆ ಕಚೇರಿ ಎದುರು ತಡರಾತ್ರಿವರೆಗೂ ಪ್ರತಿಭಟನೆ ನಡೆಸಲಾಗಿದೆ.

ಈ ಸಂಬಂಧ ಭದ್ರಾವತಿ ನಗರದ ತರೀಕೆರೆ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಕಚೇರಿ ಎದುರು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಜಮಾಯಿಸಿದರು. ಬಳಿಕ ಅರಣ್ಯಾಧಿಕಾರಿಗಳ ಕ್ರಮವನ್ನು ಖಂಡಿಸಿದರು. ರೈತರ ಹಿಟಾಚಿ ಯಂತ್ರವನ್ನು ವಶಪಡಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಅಲ್ಲದೆ ರೈತರ ಹಿಟಾಚಿ ವಾಪಸ್ ನೀಡುವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಅರಣ್ಯಾಧಿಕಾರಿಗಳು ಯಾವುದೇ ಪೂರ್ವಸೂಚನೆ ನೀಡದೆ ಹಾಗೂ ಸೂಕ್ತ ಕಾರಣ ತಿಳಿಸದೆ ರೈತರ ಹಿಟಾಚಿ ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ, ಇದು ಸರಿಯಲ್ಲ! ಅಧಿಕಾರಿಗಳು ಕಾರಣ ಸ್ಪಷ್ಟಮಾಡಬೇಕು, ಅಥವಾ ಹಿಟಾಚಿ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ರು.

ಜೆಡಿಎಸ್ ಮುಖಂಡ ಅಜಿತ್ ಅಪ್ಪಾಜಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭದ್ರಾವತಿ ನಗರ ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಚಂದ್ರೇಗೌಡ ಹಾಗೂ ಹತ್ತಾರು ಬೆಂಬಲಿಗರು ಭಾಗವಹಿಸಿದ್ದರು

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor