ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಬಡಾವಣೆ 1ನೇ ಕ್ರಾಸ್ ನಿವಾಸಿ ಇಸ್ಮಾಯಿಲ್ ಅವರ ಮಗಳು ಫರೀದಾ ಖಾನಂ ಜೀಶಾನ್ (27) ಎಂಬವರು ತಮ್ಮ 4 ವರ್ಷದ ಮಗ ಉಮೇರ್ ಕಾಣೆಯಾಗಿದ್ದಾರೆ. ಈ ಸಂಬಂಧ ಪೊಲೀಸ್ ಪ್ರಕಟಣೆ ನೀಡಲಾಗಿದೆ. ಪ್ರಕಟಣೆಯ ವಿವರ ಹೀಗಿದೆ.
ಫರೀದಾ ಖಾನಂ ಕಳೆದ ಅಕ್ಟೋಬರ್ 05ರಂದು ಶಾಲೆಗೆಂದು ಹೋದವರು ಈವರೆಗೂ ಮನೆಗೆ ವಾಪಸ್ ಬಂದಿಲ್ಲ. ಕಾಣೆಯಾಗಿರುವ ಫರೀದಾ ಖಾನಂ 5.2 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಅವರ ಮಗ ಉಮೇರ್ 2.5 ಅಡಿ ಎತ್ತರ, ಕೋಲುಮುಖ ಹಾಗೂ ತೆಳುವಾದ ಮೈಕಟ್ಟು ಹೊಂದಿದ್ದಾನೆ. ಮನೆಯಿಂದ ಹೋಗುವಾಗ ನೀಲಿ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ಧರಿಸಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ತಾಯಿ ಮತ್ತು ಮಗನ ಕುರಿತು ಯಾವುದೇ ಸುಳಿವು ದೊರೆತಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08182-261414, 9480803345 ಅಥವಾ 9632171696 ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
