ಶಿವಮೊಗ್ಗ : ಅಬ್ಬಾ… ಊರಿಗೆ ಹೋಗೋದು ತಪ್ತು ಅನ್ಕೊಂಡವ್ರಿಗೆ ನಿರಾಸೆ! ಶಿವಮೊಗ್ಗದಲ್ಲಿ ಮೊಬೈಲ್ e-KYC ಲಭ್ಯವಿದ್ಯಾ? ಇಲ್ಲಿದೆ ಅಸಲಿ ಮಾಹಿತಿ

ಹಂಚಿಕೊಳ್ಳಿ
WhatsApp Facebook X Telegram
ಎಐ ಕಾಲ್ಪನಿಕ ಚಿತ್ರ (2)
ಎಐ ಕಾಲ್ಪನಿಕ ಚಿತ್ರ (2)

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಅಬ್ಬಾ ಅಂತೂ ಇಂತೂ ಊರಿಗ್ ಹೋಗೋದು ತಪ್ತು. ಅಷ್ಟೆಲ್ಲ ಖರ್ಚ್ ಮಾಡ್ಕೊಂಡ್ ಊರಿಗೆ ಹೋಗೋ ಬದಲು ಮೊಬೈಲ್‌ನಲ್ಲೇ ರೇಷನ್ ಕಾರ್ಡ್ ದು e-kyc ಮಾಡ್ಕೊಳೋಣ ಅಂತ ಅನ್ನ ಸೇವೆ app ಓಪನ್ ಮಾಡಿದ್ ಮಲ್ನಾಡ್ ಜನಕ್ಕೆ ನಿರಾಸೆ ಆಗಿದ್ದು ಸುಳ್ಳಲ್ಲ. ಇದಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಆಹಾರ ಇಲಾಖೆಯಿಂದ ಹೊರಡಿಸಿದ್ದ ಒಂದು ಪ್ರಕಟಣೆ.

ಎಲ್ಲಾ ಪಡಿತರ ಚೀಟಿಗಳಿಗೆ ಆಹಾರ ಇಲಾಖೆ e-kyc ಕಡ್ಡಾಯ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರ. ಅನೇಕ ಜನರು e-kyc ಮಾಡಿಸಿಲ್ಲ ಎಂಬ ಕಾರಣದಿಂದ ಕಳೆದ ಬಾರಿ ನೀಡಿದ್ದ ಗಡುವನ್ನು ಆಹಾರ ಇಲಾಖೆ ಮುಂದೂಡುತ್ತಲೇ ಬರುತ್ತಿದೆ. ಈ ಬಾರಿ ಅಕ್ಟೋಬರ್ 20 ರ ಗಡುವನ್ನು ನಿಗದಿ ಮಾಡಿದೆ. ಇದರ ನಡುವೆ ಜನರನ್ನು ನ್ಯಾಯಬೆಲೆ ಅಂಗಡಿಗಳಲ್ಲಿ, ಸೈಬರ್ ಸೆಂಟರ್‌ಗಳಲ್ಲಿ ಗಂಟೆಗಟ್ಟಲೆ ಕಾಯಿಸಬಾರದು ಎಂಬ ದೃಷ್ಟಿಯಿಂದ ಸರ್ಕಾರ ಪ್ರಾಯೋಗಿಕ ಯೋಜನೆಯಡಿ ಅನ್ನ ಸೇವೆ ಎಂಬ app ಒಂದನ್ನು ಜಾರಿಗೆ ತಂದಿದೆ.

ಆಹಾರ ಇಲಾಖೆಯ ಉಪನಿರ್ದೇಶಕರು ಹಾಗೆಯೇ ಆಹಾರ ಇಲಾಖೆಯ ನಿರೀಕ್ಷಕರ ಲಾಗಿನ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರನ್ನು ಸೇರಿಸಲಾಗಿದೆ. ಆದರೆ ಆಶ್ಚರ್ಯವೆಂದರೆ ಸಾರ್ವಜನಿಕರಿಗೆ ಒದಗಿಸಿರುವ ಅನ್ನ ಸೇವೆ app ನಲ್ಲಿ ಬರಿ 13 ಜಿಲ್ಲೆಗಳ ಹೆಸರಷ್ಟೇ ಇದೆ. ಇದರಲ್ಲಿ ಶಿವಮೊಗ್ಗ ಜಿಲ್ಲೆಯ ಹೆಸರೇ ಇಲ್ಲದಿರುವುದು ಜನರಲ್ಲಿ ಗೊಂದಲವನ್ನು ಉಂಟುಮಾಡಿದೆ.

ಈ ಗೊಂದಲಕ್ಕೆ ಕಾರಣವೇನು?

ಈ ಹಿಂದೆ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಚಂದ್ರ ಭೂಪಾಲ್ ರವರು, ಇನ್ಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯವಿಲ್ಲ, ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ಅನ್ನ ಸೇವೆ app ಅನ್ನು ಬಳಸಿಕೊಂಡು ಪೇಸ್ ಅಂತೆಂಟಿಕೇಶನ್ ಮೂಲಕ ಮನೆಯಲ್ಲಿಯೇ e-kyc ಮಾಡಿಕೊಳ್ಳಬಹುದು ಎಂದು ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿದ್ದರು. ಈ ಹಿನ್ನೆಲೆ ಎಲ್ಲಾ ಪತ್ರಿಕೆಗಳಲ್ಲಿಯೂ ಸಹ ಸುದ್ದಿ ಪ್ರಸಾರವಾಗಿತ್ತು. ಆದರೆ app ಓಪನ್ ಮಾಡಿ ನೋಡಿದಾಗ ಶಿವಮೊಗ್ಗ ಜಿಲ್ಲೆಯ ಹೆಸರು ಅದರಲ್ಲಿ ಇರಲಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಆಕ್ಸೆಸ್ ಕೊಟ್ಟಿದ್ದರೂ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳದೆ ಪ್ರಕಟಣೆ ಹೊರಡಿಸಿದ್ದರಿಂದ ಜನರಿಗೆ ಗೊಂದಲ ಉಂಟಾಗಿದ್ದು ಮಾತ್ರ ಸುಳ್ಳಲ್ಲ. E-kyc ವಿಚಾರವಾಗಿ ಸರ್ಕಾರದ ಗಡುವು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯುತ್ತಿದ್ದು, ಅದರೊಳಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಸಹ ಮೊಬೈಲ್ ನಲ್ಲಿ e-kyc ಮಾಡಿಕೊಳ್ಳಲು ಸಂಬಂಧಪಟ್ಟ ಇಲಾಖೆ ಅನುವು ಮಾಡಿಕೊಟ್ಟರೆ ಜನರಿಗೆ ಹೆಚ್ಚು ಅನುಕೂಲವಾಗಬಹುದು.

ಈ ಕುರಿತಾಗಿ ಶಿವಮೊಗ್ಗದ ವಿಶ್ವನಾಥ್​ ಮಾತಣಾಡಿ ಪತ್ರಿಕೆಗಳಲ್ಲಿ ಬಂದ ಸುದ್ದಿಯನ್ನು ನೋಡಿ app ಅನ್ನು ಇನ್ಸ್ಟಾಲ್ ಮಾಡಿಕೊಂಡೆವು. ಮೊದಲ ಬಾರಿಗೆ ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಆಪ್ಷನ್ ಇಲ್ಲದಿರುವುದನ್ನು ನೋಡಿ ನಾವು ಯಾವುದೂ ಬೇರೆ app ಡೌನ್ಲೋಡ್ ಮಾಡಿಕೊಂಡಿದ್ದೇವೆ ಎನಿಸಿತು. ನಂತರ ಚೆಕ್ ಮಾಡಿದಾಗ ಇದು ಸರಿ ಇದೆ ಶಿವಮೊಗ್ಗ ಜಿಲ್ಲೆಯ ಆಪ್ಷನ್ ಇನ್ನೂ ಬಿಟ್ಟಿಲ್ಲ ಎಂದು ತಿಳಿಯಿತು. ನಾವು ಬೆಂಗಳೂರಿನಲ್ಲಿ ಇರುವುದರಿಂದ ಸಾವಿರಾರು ರೂಪಾಯಿ ಖರ್ಚು ಮಾಡಿ 3 ದಿನ ರಜೆ ಮಾಡುವುದರಿಂದ ಬಹಳಷ್ಟು ಸಮಯ ವ್ಯರ್ಥವಾಗುತ್ತದೆ. ಆದರಿಂದ ಶಿವಮೊಗ್ಗ ಜಿಲ್ಲೆಗೆ ಆದಷ್ಟು ಬೇಗ ಆಕ್ಸೆಸ್ ನೀಡಲಿ ಎಂದರು.

ಈ ಬಗ್ಗೆ ಆಹಾರ ಇಲಾಕೆಯ ಉಪ ನಿರ್ದೇಶಕರಾದ ಡಿ. ಸತೀಶ್ ಮಾತನಾಡಿ ಇನ್ನೂ ನಮ್ಮ ಜಿಲ್ಲೆಯಲ್ಲಿ ಮೊಬೈಲ್ ಮೂಲಕ ಇ-ಕೆವೈಸಿ (e-KYC) ಮಾಡಿಕೊಳ್ಳುವ ಅವಕಾಶವನ್ನು ನೀಡಿಲ್ಲ. ಪೈಲಟ್ ಪ್ರಾಜೆಕ್ಟ್‌ನಲ್ಲಿ 13 ಜಿಲ್ಲೆಗಳಿಗೆ ಮಾತ್ರ ಈ ಅವಕಾಶ ನೀಡಲಾಗಿದೆ. ಈಗಾಗಲೇ ಶಿವಮೊಗ್ಗದಲ್ಲಿ ಶೇಕಡಾ 67ರಷ್ಟು ಇ-ಕೆವೈಸಿ ಪ್ರಕ್ರಿಯೆ ಮುಗಿದಿದ್ದು, ಬಿರುಸಿನಿಂದ ಸಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮೊಬೈಲ್ ಮೂಲಕ ಇ-ಕೆವೈಸಿ ಮಾಡುವ ಅವಕಾಶ ನೀಡಿದ ತಕ್ಷಣ ತಿಳಿಸುತ್ತೇವೆ ಎಂದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor