ಆಧಾರ್ ಕಾರ್ಡ್​ ವಿಚಾರಕ್ಕೆ ತಂದೆ-ಮಗನ ನಡುವೆ ಜಗಳ; ಮುದ್ದೆಕೋಲಿನಿಂದ ಹಲ್ಲೆ ಮಾಡಿ ಕೊಂದ ಆರೋಪದಲ್ಲಿ ಪುತ್ರ ಬಂಧನ

ಹಂಚಿಕೊಳ್ಳಿ
WhatsApp Facebook X Telegram
ಅಪರಾಧ ಸುದ್ದಿಗಳಿಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
crime news image malenadutoday

ಮಲೆನಾಡು ಟುಡೆ ಸುದ್ದಿ / ಬೀರೂರು / ಆಧಾರ್ ಕಾರ್ಡ್ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರು ಸಮೀಪದ ಕುಲ್ಲೂರು ಗ್ರಾಮದಲ್ಲಿ ನಡೆದಿದೆ. ಮುದ್ದೆಕೋಲಿನಿಂದ ತಂದೆಯ ಮೇಲೆ ಹಲ್ಲೆ ನಡೆಸಿ ಕೊಂದ ಆರೋಪದಲ್ಲಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಕುಲ್ಲೂರು ಗ್ರಾಮದ ಲೋಕೇಶಪ್ಪ (70) ಮೃತಪಟ್ಟವರು. ಅವರ ಪುತ್ರ ರಮೇಶ (37) ಬಂಧಿತನಾಗಿದ್ದಾನೆ. ಕಳೆದ ಶನಿವಾರ ರಾತ್ರಿ ಸುಮಾರು 11 ಗಂಟೆ ವೇಳೆಗೆ ಆಧಾರ್ ಕಾರ್ಡ್ ವಿಚಾರವಾಗಿ ಲೋಕೇಶಪ್ಪ ಮತ್ತು ರಮೇಶ ನಡುವೆ ಜಗಳ ಆರಂಭವಾಗಿದೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ರಮೇಶ ಮುದ್ದೆಕೋಲಿನಿಂದ ತಂದೆ ಲೋಕೇಶಪ್ಪ ಅವರಿಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಭಾರತ್ ಜೋಡೋ ಯಾತ್ರೆ 2.0

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಲೋಕೇಶಪ್ಪ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಮೇಶನನ್ನು ಪೊಲೀಸರು ಬಂಧಿಸಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor