ಶಿವಮೊಗ್ಗ:  ಹೀಗೆ ಮುಂದುವರೆದರೆ ಬಿಜೆಪಿಯ ಒಂದೇ ಒಂದು ಫ್ಲೆಕ್ಸ್​​ಗಳನ್ನು ಬಿಡುವುದಿಲ್ಲ, ಬಿಕೆ ಹರಿಪ್ರಸಾದ್​ ವಾಗ್ದಾಳಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ 

ಹಂಚಿಕೊಳ್ಳಿ
WhatsApp Facebook X Telegram
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ
ಮಲೆನಾಡು ಟುಡೆ ಸಾಂದರ್ಭಿಕ ಚಿತ್ರ

ಈಸೂರಿನಿಂದ ಕಾಂಗ್ರೆಸ್ ಭಾರತ್ ಜೋಡೋ-2 ಯಾತ್ರೆ ಆರಂಭ: ಕೇಂದ್ರ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ

ಶಿಕಾರಿಪುರ/ಶಿವಮೊಗ್ಗ: ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಿಂದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ-2’ ಜನಜಾಗೃತಿ ಯಾತ್ರೆಗೆ ಚಾಲನೆ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಯಾತ್ರೆಗೆ ಚಾಲನೆ ನೀಡಿ, ಶಿಕಾರಿಪುರದ ಎಪಿಎಂಸಿ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಹರಿದಾಯ್ದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಆಶಯಗಳನ್ನು ಮುಂದುವರಿಸುವುದು, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹಾಗೂ ಬರ ಪರಿಸ್ಥಿತಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಒಟ್ಟು 69 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾಗೃತಿ ಯಾತ್ರೆ ನಡೆಯಲಿದೆ ಎಂದು ಅವರು ತಿಳಿಸಿದರು.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ: ಪ್ರಧಾನಿ ನರೇಂದ್ರ ಮೋದಿ ಅವರನ್ನು “ಸುಳ್ಳಿನ ಸರದಾರ” ಎಂದು ಬಣ್ಣಿಸಿದ ಹರಿಪ್ರಸಾದ್, ಕೇಂದ್ರ ಸರ್ಕಾರವು ಶ್ರೀಮಂತರ ಸಾಲ ಮನ್ನಾ ಮಾಡುತ್ತಿದೆಯೇ ಹೊರತು ರೈತರ ಬೆಳೆ ಸಾಲ ಮನ್ನಾ ಮಾಡಲು ಸಿದ್ಧವಿಲ್ಲ ಎಂದು ಆರೋಪಿಸಿದರು. ಅಲ್ಲದೆ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿ, “ರಾಜಕೀಯದಲ್ಲಿ ವಿಜಯೇಂದ್ರ ಇನ್ನೂ ಎಲ್‌ಜಿಯಲ್ಲಿದ್ದಾರೆ, ನಾನು ಪಿಎಚ್‌ಡಿ ಮಾಡಿದ್ದೇನೆ” ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಪಕ್ಷದ ಧ್ವಜ ಹಾಗೂ ಪ್ಲೆಕ್ಸ್‌ಗಳನ್ನು ಕಿತ್ತು ಹಾಕುವ ಕೃತ್ಯ ಮುಂದುವರಿದರೆ ಬಿಜೆಪಿಯ ಒಂದೇ ಒಂದು ಫ್ಲೆಕ್ಸ್ ಬಿಡುವುದಿಲ್ಲ ಎಂದು ತೀವ್ರ ಎಚ್ಚರಿಕೆ ನೀಡಿದರು.

ಪಿಡಿಎಪ್​​ ನಲ್ಲಿರುವ ಪ್ರಮುಖ ಸುದ್ದಿಗಳು

ವಾಟರ್ ಪ್ಯೂರಿಫೈಯರ್ ಕಂಪನಿಗೆ ದಂಡ – ಗ್ರಾಹಕನಿಗೆ ₹2.64 ಲಕ್ಷ ವಾಪಸ್ ನೀಡಲು ಜಿಲ್ಲಾ ಗ್ರಾಹಕ ಆಯೋಗ ಆದೇಶ:

ನೀರು ಕುಡಿದರೆ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ’ ಎಂದು ಭರವಸೆ ನೀಡಿ ವಾಟರ್ ಪ್ಯೂರಿಫೈಯರ್ ಮಾರಾಟ ಮಾಡಿ ಮೋಸ ಮಾಡಿದ್ದ ‘ಏನಾಜಿಕ್ ಇಂಟರ್‌‌ನ್ಯಾಷನಲ್’ ಕಂಪನಿ ಹಾಗೂ ಡಿಸ್ಟ್ರಿಬ್ಯೂಟರ್‌ಗಳು ಗ್ರಾಹಕ ಶಿವಕುಮಾರ ಹಂಪಳ್ಳಿ ಅವರಿಗೆ ₹2.64 ಲಕ್ಷಕ್ಕೂ ಹೆಚ್ಚು ಹಣವನ್ನು ಶೇ. 9ರ ಬಡ್ಡಿ ಹಾಗೂ ಪರಿಹಾರದೊಂದಿಗೆ ವಾಪಸ್ ನೀಡುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

ಶಿವಮೊಗ್ಗದಲ್ಲಿ 4.99 ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಮೊದಲ ಒಳಾಂಗಣ ಕ್ರಿಕೆಟ್ ತರಬೇತಿ ಕ್ರೀಡಾಂಗಣ:

ಶಿವಮೊಗ್ಗದ ನವುಲೆಯ ಕೆಎಸ್‌ಸಿಎ (KSCA) ಮೈದಾನದಲ್ಲಿ ₹4.99 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ರಾಜ್ಯದ ಮೊದಲ ಒಳಾಂಗಣ (Indoor) ಕ್ರಿಕೆಟ್ ತರಬೇತಿ ಕ್ರೀಡಾಂಗಣದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರೀಪೇಯ್ಡ್ ಆಟೋ ಕೌಂಟರ್‌ಗೆ ಟ್ರಾಫಿಕ್ ಪೊಲೀಸರ ಅನಿರೀಕ್ಷಿತ ಭೇಟಿ:

ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಶಿವಮೊಗ್ಗದ ರೈಲ್ವೇ ನಿಲ್ದಾಣದಲ್ಲಿರುವ ಪ್ರೀಪೇಯ್ಡ್ ಆಟೋ ಕೌಂಟರ್‌ಗೆ ಇಂದು ಬೆಳಗಿನ ಜಾವ 4:30ಕ್ಕೆ ಟ್ರಾಫಿಕ್ ಪೊಲೀಸರು ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು ಹಾಗೂ ಪ್ರಯಾಣಿಕರಿಂದ ಹೆಚ್ಚಿನ ದರ ಪಡೆಯದಂತೆ ಚಾಲಕರಿಗೆ ಎಚ್ಚರಿಕೆ ನೀಡಿದರು.

ಶಿರಾಳಕೊಪ್ಪ ಪ್ರಸ್ತಾವಿತ ರಿಂಗ್ ರೋಡ್ ಯೋಜನೆ ಕೈಬಿಡಲು ಸಂಸದ ಬಿ.ವೈ. ರಾಘವೇಂದ್ರ ಆಗ್ರಹ:

ಶಿರಾಳಕೊಪ್ಪ ಪಟ್ಟಣದ ಸುತ್ತಮುತ್ತ ಪ್ರಸ್ತಾವಿತ ರಿಂಗ್ ರೋಡ್‌ನಿಂದಾಗಿ ನೂರಾರು ಎಕರೆ ಫಲವತ್ತಾದ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿರುವ ರೈತರ ಹಿತದೃಷ್ಟಿಯಿಂದ ಸರ್ಕಾರ ತಕ್ಷಣವೇ ಈ ಯೋಜನೆಯನ್ನು ಕೈಬಿಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಉಡುಪಿ: ಪ್ರೇಯಸಿಗಾಗಿ ಪತ್ನಿ ಹತ್ಯೆಗೆ ಸಂಚು ವಿಫಲ – ಕಾಡಿನಲ್ಲಿ ಪ್ರೇಮಿಗಳ ಆತ್ಮಹತ್ಯೆ:

ಉಡುಪಿ ಜಿಲ್ಲೆಯ ಕುಂದಾಪುರದ ಸೌಪರ್ಣಿಕಾ ನದಿ ತೀರದಲ್ಲಿ ಪ್ರೇಯಸಿಗಾಗಿ ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿ ಕೊಲ್ಲಲು ಯತ್ನಿಸಿ ವಿಫಲನಾಗಿದ್ದ ಆಟೋ ಚಾಲಕ ವಿಠಲನಾಯ್ಕ (35) ಹಾಗೂ ಆತನ ಪ್ರೇಯಸಿ ಭವ್ಯಾ (33) ಪ್ರಕರಣ ಬಯಲಾಗುವ ಭೀತಿಯಿಂದ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ  ಮೇಲಿನ ಎಲ್ಲಾ ಸುದ್ದಿಗಳ ಸಂಪೂರ್ಣ ವಿವರಗಳು (ಇ-ಲಿಂಕ್​​) ನಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor