ಮಲೆನಾಡು ಟುಡೇ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಎಪಿಎಂಸಿ ಮಾರುಕಟ್ಟೆಯ ಇಂದಿನ ಅಡಿಕೆ ದರ ಪಟ್ಟಿ ಬಿಡುಗಡೆಯಾಗಿದೆ. ನಿನ್ನೆಗೆ ಹೋಲಿಸಿದರೆ ಗೊರಬಲು, ಹೊಸ ರಾಶಿ ಇಡಿ ಹಾಗೂ ರಾಶಿ ಇಡಿ ಅಡಿಕೆಗಳ ದರದಲ್ಲಿ ಕೊಂಚ ಇಳಿಕೆಯಾಗಿದೆ.
ಸೆಪ್ಟೆಂಬರ್ 29ರ ದರಕ್ಕೆ ಹೋಲಿಸಿದರೆ, ಇಂದು ಗೊರಬಲು ಹಾಗೂ ಹೊಸ ರಾಶಿ ಇಡಿ ಅಡಿಕೆ ಧಾರಣೆಯಲ್ಲಿ ತಲಾ 2,000 ಇಳಿಕೆಯಾಗಿದ್ದರೆ, ರಾಶಿ ಇಡಿ ಅಡಿಕೆ ಬೆಲೆಯಲ್ಲಿ 300 ಕಡಿಮೆಯಾಗಿದೆ. ಹಾಗಾದರೆ ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ವಿವಿಧ ತಳಿಯ ಅಡಿಕೆಗಳ ಇಂದಿನ (30/09/2026) ಕನಿಷ್ಠ, ಗರಿಷ್ಠ ಹಾಗೂ ಮಾದರಿ ದರಗಳ ವಿವರ ಇಲ್ಲಿದೆ
ಸರಕು / ಹಸ: ಕನಿಷ್ಠ ₹58,009, ಗರಿಷ್ಠ ₹84,229 ಹಾಗೂ ಮಾದರಿ ದರ ₹80,339 ಆಗಿದೆ.
ಬೆಟ್ಟೆ: ಕನಿಷ್ಠ ₹53,069, ಗರಿಷ್ಠ ₹57,432 ಹಾಗೂ ಮಾದರಿ ದರ ₹56,559 ದಾಖಲಾಗಿದೆ.
ರಾಶಿ ಇಡಿ: ಕನಿಷ್ಠ ₹45,000, ಗರಿಷ್ಠ ₹48,589 ಹಾಗೂ ಮಾದರಿ ದರ ₹48,399 ಇದೆ.
ಗೊರಬಲು: ಕನಿಷ್ಠ ₹19,000, ಗರಿಷ್ಠ ₹37,360 ಹಾಗೂ ಮಾದರಿ ದರ ₹33,869 ನಿಗದಿಯಾಗಿದೆ.
ಹೊಸ ರಾಶಿ ಇಡಿ: ಕನಿಷ್ಠ,₹45,089 ಗರಿಷ್ಠ,₹45,089 ಮಾದರಿ, ₹45,089
