ಎಲ್‌ಪಿಜಿ ಸಿಲಿಂಡರ್‌ಗೂ ಸಿಗಲಿದೆ ಇಎಂಐ ಸೌಲಭ್ಯ ; ₹600ವರೆಗೆ ಬಡ್ಡಿರಹಿತ ಸಾಲ, ವಾರಕ್ಕೆ ₹100ರಂತೆ ಪಾವತಿ ಮಾಡಹುದು!

ಹಂಚಿಕೊಳ್ಳಿ
WhatsApp Facebook X Telegram
Bharat Gas Offers Interest-Free LPG Refill Loan Up to 600 With Weekly 100 Repayment
Bharat Gas Offers Interest-Free LPG Refill Loan Up to 600 With Weekly 100 Repayment

ಮಲೆನಾಡು ಟುಡೆ ಸುದ್ದಿ / ನವದೆಹಲಿ / ಎಲ್‌ಪಿಜಿ ಸಿಲಿಂಡರ್ ವಿಷಯದಲ್ಲಿ ಚೂರು ಗ್ರಾಹಕರಿಗೆ ಅನುಕೂಲವಾಗುವ ಸುದ್ದಿಯೊಂದು ಬಂದಿದೆ. ದುಡ್ಡು ಅಡ್ಜೆಸ್ಟ್ ಆಗದ ಕಾಲಕ್ಕೆ ಗ್ಯಾಸ್ ಖಾಲಿಯಾದರೆ, ಅದನ್ನ ಇಎಂಐ ಮೂಲಕ ಪಡೆಯಬಹುದು. ಅಂತಹದ್ದೊಂದು ಅವಕಾಶವನ್ನ ಭಾರತ್ ಗ್ಯಾಸ್ ನೀಡುತ್ತಿದೆ.

ಹೌದು, ಈ ಕುರಿತು ಭಾರತ್ ಗ್ಯಾಸ್​ ತನ್ನ ಎಕ್ಸ್​ ಅಕೌಂಟ್​ನಲ್ಲಿ ಬರೆದುಕೊಂಡಿದೆ . ಅದರ ಪ್ರಕಾರ, ಸಿಲಿಂಡರ್ ಬುಕ್ಕಿಂಗ್ ಮಾಡುವ ಸಮಯದಲ್ಲಿ ಪೂರ್ಣ ಹಣ ಪಾವತಿಸಲು ಸಾಧ್ಯವಾಗದ ಗೃಹ ಬಳಕೆ ಗ್ರಾಹಕರಿಗೆ ಭಾರತ್ ಗ್ಯಾಸ್ ಹೊಸ ಸೌಲಭ್ಯ ಘೋಷಿಸಿದೆ. ಎಲ್‌ಪಿಜಿ ಸಿಲಿಂಡರ್ ರಿಫಿಲ್ಲಿಂಗ್​ಗೆ ಗ್ರಾಹಕರಿಗೆ ಬಡ್ಡಿರಹಿತ ಮೈಕ್ರೋ ಸಾಲ ನೀಡಲಾಗುತ್ತಿದ್ದು, ಇದರ ಮೂಲಕ ಸಿಲಿಂಡರ್ ಪಡೆಯುವಾಗಲೇ ಸಂಪೂರ್ಣ ಹಣ ಪಾವತಿಸುವ ಬದಲು ಕಂತುಗಳಲ್ಲಿ ಹಣ ಕಟ್ಟಬಹುದಾಗಿದೆ.

ಎಲ್‌ಪಿಜಿ ಸಿಲಿಂಡರ್‌ಗೂ ಸಿಗಲಿದೆ ಇಎಂಐ

ಈ ಸೌಲಭ್ಯದ ಕುರಿತು ಭಾರತ್ ಗ್ಯಾಸ್ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಸದ್ಯ 14.2 ಕೆ.ಜಿ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಸುಮಾರು ₹950ರಷ್ಟಿದೆ ಎಲ್‌ಪಿಜಿ ಸಿಲಿಂಡರ್ ಮರುಭರ್ತಿಗಾಗಿ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯವನ್ನು ಪರಿಚಯಿಸಲಾಗಿದ್ದು, ಅರ್ಹ ಗ್ರಾಹಕರು ಸಿಲಿಂಡರ್ ರೀಫಿಲ್‌ಗೆ ₹600ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದಾಗಿದೆ.

₹600 ಸಾಲ ಪಡೆದ ಗ್ರಾಹಕರು ಒಮ್ಮೆಯೇ ಸಂಪೂರ್ಣ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಪ್ರತಿ ವಾರ ₹100ರಂತೆ 6 ವಾರಗಳಲ್ಲಿ ಸಾಲದ ಹಣವನ್ನು ಮರುಪಾವತಿಸಬಹುದು. ಈ ಮೊತ್ತದ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ ಎಂದು ಭಾರತ್ ಗ್ಯಾಸ್ ತಿಳಿಸಿದೆ.

ಇದರಿಂದ ಬುಕ್ಕಿಂಗ್ ಸಮಯದಲ್ಲಿ ಪೂರ್ಣ ಹಣ ಲಭ್ಯವಿಲ್ಲದಿದ್ದರೂ ಸಿಲಿಂಡರ್ ಪಡೆಯಲು ಗ್ರಾಹಕರಿಗೆ ಅವಕಾಶ ದೊರೆಯಲಿದೆ.
ಈ ಸೌಲಭ್ಯ ಪಡೆಯಲು ಗ್ರಾಹಕರು ತಮ್ಮ ಸಮೀಪದ ಭಾರತ್ ಗ್ಯಾಸ್ ವಿತರಕರನ್ನು ಸಂಪರ್ಕಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ ಬಡ್ಡಿರಹಿತ ಮೈಕ್ರೋ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

ಭಾರತ್ ಗ್ಯಾಸ್ ಈ ಯೋಜನೆಯನ್ನು ವನ್‌ಗೋ ಫಿನ್‌ಟೆಕ್ ಸಹಯೋಗದಲ್ಲಿ ಒದಗಿಸುತ್ತಿದೆ. ಸಾಲದ ಅಗತ್ಯವಿರುವ ಗ್ರಾಹಕರು ತಮ್ಮ ಎಲ್‌ಪಿಜಿ ಏಜೆನ್ಸಿಯನ್ನು ಸಂಪರ್ಕಿಸಿದರೆ, ಸಾಲ ಪಡೆಯುವ ವಿಧಾನ ಹಾಗೂ ಅಗತ್ಯ ಪ್ರಕ್ರಿಯೆಗಳ ಕುರಿತು ಸಂಬಂಧಪಟ್ಟ ಏಜೆನ್ಸಿಯಿಂದ ಮಾಹಿತಿ ಪಡೆಯಬಹುದಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor