ಶಿವಮೊಗ್ಗ : ಸಕ್ರೆಬೈಲ್​ ಆನೆ ಬಿಡಾರದ ಪ್ರತಿ ವಾರ ಈ ದಿನ ಕ್ಲೋಸ್​​​ ಆಗಲಿದೆ,  ಯಾವಾಗ, ಕಾರಣವೇನು?

ಹಂಚಿಕೊಳ್ಳಿ
WhatsApp Facebook X Telegram
ವಾರದ ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರ ಕ್ಲೋಸ್_ ಆಗಲಿದೆ
ವಾರದ ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರ ಕ್ಲೋಸ್_ ಆಗಲಿದೆ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಮುಂದಿನ ಬುಧವಾರದಿಂದ ಪ್ರತಿ ಬುಧವಾರ ರಜೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

​ಈ ಹಿಂದೆ ದುಬಾರೆಯಲ್ಲಿ ಸಾಕಾನೆಗಳ ಕಾಳಗದಿಂದ ಚೆನ್ನೈ ಮೂಲದ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆ ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಅನೇಕ ಬಿಡಾರಗಳನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿತ್ತು. ನಂತರ ಎಲ್ಲಾ ಎಸ್ ಓಪಿ ಜಾರಿಗೊಳಿಸಿ, ಸೆಪ್ಟೆಂಬರ್ 26 ರಂದು ಸಕ್ರೆಬೈಲ್​ ಆನೆ ಬಿಡಾರವವನ್ನು ಓಪನ್ ಮಾಡಲಾಯಿತು. ಅದಾದ ಬಳಿಕ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದ್ದು, ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರದಲ್ಲಿ ರಜೆ ಇರಲಿದೆ ಎಂದು ಮೂಲಗಳು ತಿಳಿಸಿವೆ.

​ಈಗ ಜಾರಿಗೆ ತಂದಿರುವ ಎಸ್ ಓ ಪಿ ನಿಯಮಗಳಲ್ಲಿ ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರಕ್ಕೆ ವಾರದ ರಜೆಯನ್ನು ನೀಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲ ಆನೆ ಬಿಡಾರದಲ್ಲಿಯೂ ಈ ನಿಯಮವನ್ನು ಅಳವಡಿಸಿಕೊಂಡಿದ್ದು, ನಾಳೆಯಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿಯೂ ಈ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಮಲೆನಾಡು ಟುಡೆಗೆ ಸಕ್ರೆಬೈಲು ಆನೆ ಬಿಡಾರ ಮೂಲಗಳು ತಿಳಿಸಿವೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor