ಚಿನ್ನ 2,600, ಬೆಳ್ಳಿ 5,000 ಇಳಿಕೆ; 10 ಗ್ರಾಂ ಚಿನ್ನ 1.50 ಲಕ್ಷಕ್ಕೆ, ಕೆ.ಜಿ ಬೆಳ್ಳಿ 2.32 ಲಕ್ಷಕ್ಕೆ ಇಳಿಕೆ

ಹಂಚಿಕೊಳ್ಳಿ
WhatsApp Facebook X Telegram
ಚಿನ್ನದ ದರ ಏರಿಕೆ: 1.65 ಲಕ್ಷ ದಾಟಿದ ಬಂಗಾರ, ಬೆಳ್ಳಿ ಬೆಲೆಯಲ್ಲಿಯೂ ದಾಖಲೆ ಹೆಚ್ಚಳ Gold Price Hikes by Rs 7400 in New Delhi: Silver Crosses 2.98 Lakh Mark
ಚಿನ್ನದ ದರ ಕುಸಿತ 03-02-2026: ಒಂದೇ ದಿನದಲ್ಲಿ 12,800 ರೂ. ಇಳಿಕೆ ಕಂಡ ಬಂಗಾರ Gold Rate Crash 03-02-2026: Gold Price Drops by Rs 12,800 in a Single Day

ಮಲೆನಾಡು ಟುಡೆ ಸುದ್ದಿ / ನವದೆಹಲಿ /ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ದಿನ ಸೋಮವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡುಬಂದಿದೆ. ಶೇ 99.9ರಷ್ಟು ಪರಿಶುದ್ಧದ 10 ಗ್ರಾಂ ಚಿನ್ನದ ಬೆಲೆ ₹2,600 ಇಳಿಕೆಯಾಗಿದ್ದು, ₹1.50 ಲಕ್ಷಕ್ಕೆ ತಲುಪಿದೆ. ಹಿಂದಿನ ವಹಿವಾಟಿನ ಅವಧಿಯಲ್ಲಿ ಇದೇ ಚಿನ್ನದ ದರ 10 ಗ್ರಾಂಗೆ ₹1,52,600 ಆಗಿತ್ತು. ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡುಬಂದಿದ್ದು, ಕೆ.ಜಿಗೆ ₹5,000 ಕಡಿಮೆಯಾಗಿ ₹2.32 ಲಕ್ಷಕ್ಕೆ ತಲುಪಿದೆ.

ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಳಿಕೆಯಾಗಲು ಜಾಗತಿಕ ಮಾರುಕಟ್ಟೆಯಲ್ಲಿನ ಮಾರಾಟದ ಒತ್ತಡ ಪ್ರಮುಖ ಕಾರಣವಾಗಿದೆ. ಅಮೆರಿಕದ ಡಾಲರ್ ಬಲವಾಗಿರುವುದು ಅಮೂಲ್ಯ ಲೋಹಗಳ ಬೆಲೆಯ ಮೇಲೆ ಒತ್ತಡ ತಂದಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬ್ರೋಕರೇಜ್ ವೇದಿಕೆ ಲೆಮನ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ಗೌರವ್ ಗರ್ಗ್ ಅವರ ಪ್ರಕಾರ, ಬಲಿಷ್ಠ ಅಮೆರಿಕನ್ ಡಾಲರ್‌ನ ಪರಿಣಾಮ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸೋಮವಾರ ಇಳಿಕೆಯೊಂದಿಗೆ ವಹಿವಾಟು ನಡೆಸಿದವು.

ಇನ್ನೂ ಅಂತರರಾಷ್ಟ್ರೀಯ ಸ್ಪಾಟ್ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಗಮನಾರ್ಹವಾಗಿ ಇಳಿದಿದೆ. ಸ್ಪಾಟ್ ಚಿನ್ನದ ದರ ಪ್ರತಿ ಔನ್ಸ್‌ಗೆ 128.93 ಡಾಲರ್ ಅಥವಾ ಶೇ 3.01ರಷ್ಟು ಕುಸಿದು 4,156.44 ಡಾಲರ್‌ಗೆ ಇಳಿದಿದೆ. ಇದೇ ವೇಳೆ ಬೆಳ್ಳಿಯ ದರ ಪ್ರತಿ ಔನ್ಸ್‌ಗೆ 2.96 ಡಾಲರ್ ಅಥವಾ ಶೇ 4.6ರಷ್ಟು ಕುಸಿದು 61.34 ಡಾಲರ್‌ಗೆ ತಲುಪಿದೆ. ಚಿನ್ನದ ದರ ಪ್ರತಿ ಔನ್ಸ್‌ಗೆ 4,200 ಡಾಲರ್‌ಗಿಂತ ಕೆಳಕ್ಕೆ ಇಳಿದರೆ, ಬೆಳ್ಳಿ ಸುಮಾರು 61 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿತು. ಹೂಡಿಕೆ ವೇದಿಕೆ ಮುದ್ರೆಕ್ಸ್‌ನ ಪ್ರಮುಖ ಕ್ವಾಂಟ್ ವಿಶ್ಲೇಷಕ ಅಕ್ಷತ್ ಸಿದ್ಧಾಂತ್ ಪ್ರಕಾರ, ಹೋರ್ಮುಜ್ ಜಲಸಂಧಿಯನ್ನು ಒಂದು ವಾರದೊಳಗೆ ಪುನಃ ತೆರೆಯುವ ಪ್ರಸ್ತಾಪ ಮತ್ತು ನೌಕಾ ನಿರ್ಬಂಧ ತೆರವುಗೊಳಿಸುವುದಕ್ಕೆ ಬದಲಾಗಿ ಅಣು ಮಾತುಕತೆ ಪುನರಾರಂಭಿಸುವ ಕುರಿತು ತೆಹ್ರಾನ್ ನೀಡಿದ್ದ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ ನಂತರ ಅಮೂಲ್ಯ ಲೋಹಗಳ ಮೇಲೆ ಮಾರಾಟದ ಒತ್ತಡ ಹೆಚ್ಚಾಯಿತು ಎನ್ನಲಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor