ಬಯೋ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದ ಸಾಧನೆ; ಅಮೃತ್ ನೋನಿಗೆ ಎರಡು ಪ್ರತಿಷ್ಠಿತ ಗೌರವ

ಹಂಚಿಕೊಳ್ಳಿ
WhatsApp Facebook X Telegram
Amrith Noni Receives Two Honours at Next Gen Biosciences Summit 2026
Amrith Noni Receives Two Honours at Next Gen Biosciences Summit 2026

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಯೋಸೈನ್ಸ್ ಮತ್ತು ಬಯೋ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ನಾವೀನ್ಯತೆಗೆ ನೀಡುತ್ತಿರುವ ಕೊಡುಗೆಗಾಗಿ ವಾಲ್ಯೂ ಪ್ರಾಡಕ್ಟ್ಸ್ (ಅಮೃತ್ ನೋನಿ) ಸಂಸ್ಥೆಗೆ ದ ನೆಕ್ಸ್ಟ್ ಜೆನ್ ಬಯೋಸೈನ್ಸಸ್ ಸಮ್ಮಿಟ್ 2026 ರಲ್ಲಿ ಎರಡು ಪ್ರತಿಷ್ಠಿತ ಗೌರವಗಳು ಲಭಿಸಿವೆ. ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಸಿಇಒ ಇಂಚರಾ ನಾಡಿಗ್ ಅವರ ನೇತೃತ್ವದಲ್ಲಿ ಸಂಸ್ಥೆಗೆ ಬಯೋ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿನ ಎಕ್ಸಲೆನ್ಸ್‌ಗಾಗಿ ಪ್ರತಿಷ್ಠಿತ ಗೌರವ ಪ್ರದಾನ ಮಾಡಲಾಯಿತು.

ದೆಹಲಿ ಸಮೀಪದ ಗುರುಗ್ರಾಮದಲ್ಲಿರುವ ಮಾಸ್ಟರ್ಸ್ ವಿಶ್ವವಿದ್ಯಾಲಯದ ಕಲಾಮ್ ಸ್ಕೂಲ್ ಆಫ್ ಬಿಸಿನೆಸ್ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಬಿಐಆರ್‌ಎಸಿ ಸಂಸ್ಥೆಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಾ. ಜಿತೇಂದ್ರ ಕುಮಾರ್ ಅವರು ಸಂಸ್ಥೆಗೆ ಗೌರವ ಪ್ರದಾನ ಮಾಡಿದರು.

ಇದೇ ವೇಳೆ ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ಸೌರಭ್ ಗಿರಿ ಬಿ.ಯು. ಅವರು ವೃದ್ಧಾಪ್ಯ ನಿರೋಧಕ ಕುರಿತು ನಡೆಸಿದ ಸಂಶೋಧನಾ ಕಾರ್ಯಕ್ಕಾಗಿ ‘ಕಲಾಮ್ ಮೆಡಲ್ ಆಫ್ ಎಕ್ಸಲೆನ್ಸ್ ಇನ್ ಟ್ರಾನ್ಸಲೇಷನಲ್ ಇನ್ನೋವೇಷನ್’ ಗೌರವಕ್ಕೆ ಪಾತ್ರರಾದರು. ವಾಸ್‌ಕ್ಯುಲರ್ ಶಸ್ತ್ರಚಿಕಿತ್ಸಕ ಡಾ. ಶ್ರೀರಾಮ್ ಮಾಧವ್ ಸೇನೆ ಹಾಗೂ ಡಾ. ಜಿತೇಂದ್ರ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಂಶೋಧನೆಯನ್ನು ನೈಜ ಜೀವನದ ಉಪಯೋಗಕ್ಕೆ ತರುವುದರೊಂದಿಗೆ ಬಯೋಸೈನ್ಸ್ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಉತ್ತೇಜಿಸುವ ವಾಲ್ಯೂ ಪ್ರಾಡಕ್ಟ್ಸ್ ಸಂಸ್ಥೆಯ ಬದ್ಧತೆಗೆ ಈ ಎರಡು ಗೌರವಗಳು ಮಹತ್ವದ್ದಾಗಿವೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor